Saturday, May 21, 2022

ಬಿಎಸ್‌ವೈ ಕುಟುಂಬ ಒಡೆತನದ ಶಿಕ್ಷಣ ಸಂಸ್ಥೆಯ ಬಸ್‌ನಿಂದ 580 ಲೀ ಡೀಸೆಲ್‌ ಕಳ್ಳತನ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಒಡೆತನದ ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ನಾಲ್ಕು ಬಸ್​ಗಳಿಂದ ಸುಮಾರು 580 ಲೀಟರ್​ ಡೀಸೆಲ್ ಕಳುವಾಗಿದೆ.


ಶಿವಮೊಗ್ಗ ನಗರದ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್​ಮೆಂಟ್ ಬಳಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಿಲ್ಲಿಸಿದ್ದ ಬಸ್​ಗಳಿಂದ ಡೀಸೆಲ್​ ಕದಿಯಲಾಗಿದ್ದು, ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್​ಗಳಿಂದ ತಡರಾತ್ರಿ ವೇಳೆ ಡೀಸೆಲ್​ ಕದಿಯಲಾಗಿದೆ.
ನಾಲ್ಕು ಬಸ್​ಗಳನ್ನೂ ಶಿಕ್ಷಣ ಸಂಸ್ಥೆ ಬಳಿ ಸೆಕ್ಯೂರಿಟಿ ನಡುವೆಯೇ ನಿಲ್ಲಿಸಲಾಗಿದ್ದರೂ ಕಳ್ಳರು ಕೈಚಳಕ ತೋರಿಸಿದ್ದಾರೆ.

ತಡರಾತ್ರಿ ವೇಳೆ ಕೃತ್ಯ ನಡೆದಿದೆ ಎನ್ನಲಾಗಿದ್ದು ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್​ಗಳಿಂದ ಸುಮಾರು 580 ಲೀಟರ್​ ಡೀಸೆಲ್​ ದೋಚಲಾಗಿದೆ.

ಈ ಬಸ್​ಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಒಡೆತನ ಹೊಂದಿರುವ ಪಿಇಎಸ್ ಶಿಕ್ಷಣ ಸಂಸ್ಥೆಗಳಿಗೆ ಸೇರಿವೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮಲ್ಪೆ: ಸ್ಕೂಟರ್‌ನಲ್ಲಿ ಚಲಿಸುತ್ತಿದ್ದಾಗ ಹಾರ್ಟ್ ಅಟ್ಯಾಕ್-ವ್ಯಕ್ತಿ ಸಾವು

ಮಲ್ಪೆ: ಕೆಲಸ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದ ವೇಳೆ ವ್ಯಕ್ತಿಯೋರ್ವರು ಹೃದಯಾಘಾತಕ್ಕೆ ಬಲಿಯಾದ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಬುಧವಾರ ನಡೆದಿದೆ.ಮಲ್ಪೆ ಕಂಬಳತೋಟ ನಿವಾಸಿ ಪ್ರತಾಪ್ (32) ಮೃತ...

ಆಂಟಿಯೊಂದಿಗೆ ಸರಸವಾಡಿ ಉಂಡು ಹೋದ ಕೊಂಡು ಹೋದ ಫಯಾಝ್‌..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರಿಗೆ ಸಹಾಯದ ನೆಪದಲ್ಲಿ ಬಲೆಗೆ ಬೀಳಿಸಿ ನಿರಂತರ ಅತ್ಯಾಚಾರಗೈದು 1.50 ಕೋಟಿ ವಂಚನೆಗೈದ ಪ್ರಕರಣದಲ್ಲಿ ಮಂಗಳೂರು ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಫಯಾಝ್ (30) ಬಂಧಿತ ಆರೋಪಿ. ಈತ ಮೂಲತಃ...

‘ಟಿಪ್ಪು ಸುಲ್ತಾನ್ ಪ್ರತಾಪನಂತೆ ಬೆತ್ತಲೆ ಲೇಖನಿ ಸಿಂಹವಲ್ಲ’- ಕೆ.ಅಶ್ರಫ್

ಮಂಗಳೂರು: ಬೆತ್ತಲೆ ಜಗತ್ತಿನಲ್ಲಿ ಸುಳ್ಳುಗಳನ್ನು ಪೋಣಿಸಿ ಬರೆದು ಇಸ್ಲಾಮೂ ಫೋಬಿಯಾದ ಮೂಲಕ ಈ ರಾಜ್ಯದ ಹಿಂದುಳಿದ, ದಲಿತರ, ಪರಿಶಿಷ್ಟರ ಮತ್ತು ಬುಡಕಟ್ಟು ಜನಾಂಗದ ದೃಷ್ಟಿಯಲ್ಲಿ ಈ ದೇಶದ ಮುಸ್ಲಿಮರ ಬಗ್ಗೆ ವೈರತ್ವವನ್ನು ಸೃಷ್ಟಿಸಿ,ಕೇಶವ...