Connect with us

    LATEST NEWS

    ಹೊಸ ತಿಂಗಳ ಹೊಸ ಬದಲಾವಣೆ: ಪಾನ್‌ ಕಾರ್ಡ್‌, ಜಿಎಸ್‌ಟಿ, ಕಾರು ಇನ್ಶೂರೆನ್ಸ್‌…..

    Published

    on

    ನವದೆಹಲಿ: ಹೊಸ ತಿಂಗಳು ಆರಂಭವಾಗುತ್ತಿದೆ. ಜೊತೆಗೆ ಹೊಸ ನಿಯಮ, ಸಾಮಾನ್ಯವಾಗಿ ತಿಂಗಳ ಮೊದಲಿಗೆ ಇಂತಹ ಹೊಸ ಬದಲಾವಣೆಗಳು ಆಗುತ್ತಿವೆ. ಈ ತಿಂಗಳಲ್ಲಿ ಯಾವ ಬದಲಾವಣೆಗಳಾಗಿವೆ ಎಂದು ತಿಳಿಯೋಣ.
    ಜಿಎಸ್​ಟಿ ರಿಟರ್ನ್​​ ಹೊಸ ನಿಯಮ
    ಜಿಎಸ್​​ಟಿ ಸಂಗ್ರಹದಲ್ಲಿ ಕುಸಿತ ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ವಿಳಂಬ ಪಾವತಿದಾರರ ಮೇಲೆ ಹದ್ದಿನ ಕಣ್ಣಿಡಲು ಸಿದ್ಧತೆ ನಡೆಸಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಜಿಎಸ್​ಟಿ ಪಾವತಿಸದಿದ್ದರೆ ನಿವ್ವಳ ತೆರಿಗೆ ಮೇಲೆ ಬಡ್ಡಿ ವಿಧಿಸಲು ಕೇಂದ್ರ ನಿರ್ಧರಿಸಿದೆ.

    ಈ ನಿಯಮ ಸಹ ಸೆ.1ರಿಂದಲೇ ಜಾರಿಯಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಯಲ್ಲಿ ವಿಳಂಬವಾದರೆ, ಸೆಪ್ಟೆಂಬರ್ 1ರಿಂದ ಒಟ್ಟು ತೆರಿಗೆ ಮೇಲೆ ಬಡ್ಡಿ ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ.
    ಪಾನ್ ಕಾರ್ಡ್ – ಆಧಾರ್ ಲಿಂಕ್‌ ಮತ್ತೆ ವಿಸ್ತರಣೆ
    ನಾಗರಿಕರು ತಮ್ಮ ಪಾನ್​ ಕಾರ್ಡ್​​ ಅನ್ನು ಆಧಾರ್ ಜೊತೆ ಲಿಂಕ್ ಮಾಡುವ ಗಡುವನ್ನು ಸರ್ಕಾರ ಸೆಪ್ಟೆಂಬರ್ 30, 2021ರ ವರೆಗೆ ವಿಸ್ತರಿಸಿದೆ.

    ಈ ಮೊದಲು ಜೂನ್ 30, 2021ರ ಗಡುವು ನೀಡಲಾಗಿತ್ತು. ಬಳಿಕ ಈ ಸಮಯ ವಿಸ್ತರಿಸಿದ್ದು, ಇದೀಗ ಸೆಪ್ಟೆಂಬರ್ ಅಂತ್ಯಕ್ಕೆ ಗಡುವು ನೀಡಲಾಗಿದೆ.
    ಪಿಎಫ್ ಜೊತೆ ಆಧಾರ್ ಲಿಂಕ್‌ ನಿನ್ನೆಗೆ ಅಂತ್ಯ
    ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್​​) ಖಾತೆಯೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗಿದೆ.

    ಈ ಹಿಂದೆಯೂ ಎರಡು ಬಾರಿ ಈ ಗಡುವನ್ನು ಮುಂದೂಡಲಾಗಿದ್ದು, ನಿನ್ನೆಗೆ (ಆ.31) ಗಡುವು ಅಂತ್ಯವಾಗಿದೆ.

    ಒಂದು ವೇಳೆ ನಿಮ್ಮ ಆಧಾರ್ ಲಿಂಕ್ ಆಗದೇ ಇದ್ದರೆ ಕಂಪನಿಗಳು ನೀಡುತ್ತಿರುವ ನಿಧಿ ಖಾತೆಗೆ ಜಮೆಯಾಗುವ ಪ್ರಕ್ರಿಯೆಗೆ ಅಡ್ಡಿಯಾಗಬಹುದು ಎನ್ನಲಾಗಿದೆ.
    5 ವರ್ಷಗಳ ಕಡ್ಡಾಯ ಕಾರು ಇನ್ಶೂರೆನ್ಸ್​
    ಇತ್ತೀಚಿನ ಪ್ರಕರಣವೊಂದರ ತೀರ್ಪು ನೀಡುವ ವೇಳೆ ಮದ್ರಾಸ್ ಹೈಕೋರ್ಟ್ ಇಂತಹ ಆದೇಶ ಹೊರಡಿಸಿದ್ದು, ಕಾರಿಗೆ 5 ವರ್ಷಗಳ ಬಂಪರ್​ ಟು ಬಂಪರ್​ ಇನ್ಶೂರೆನ್ಸ್ ಕಡ್ಡಾಯಗೊಳಿಸಿದೆ. ಈ ಆದೇಶವು ನಿರೀಕ್ಷಿತವಾಗಿಯೇ ಹೊಸ ಕಾರಿನ ಬೆಲೆಯಲ್ಲಿ ಏರಿಕೆಯಾಗಲಿದೆ.

    LATEST NEWS

    ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ..! ವಾಹನ ಸವಾರರಿಗೆ ಬಿಗ್ ಶಾಕ್..

    Published

    on

    ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್‌ ದರ ಏರಿಕೆಗೊಳಿಸಿ ವಾಹನ ಸವಾರರಿಗೆ ಶಾಕ್ ನೀಡಿದೆ.

    ಪೆಟ್ರೋಲ್, ಡಿಸೇಲ್ ಮೇಲಿನ ಟ್ಯಾಕ್ಸ್ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಿಟೇಲ್‌ ಸೇಲ್ಸ್‌ ಟ್ಯಾಕ್ಸ್‌ ದರ ಹೆಚ್ಚಳ ಮಾಡಲಾಗಿದೆ. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂಪಾಯಿ ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದಿದ್ದು, ಈಗ 29.84% ಗೆ ಏರಿಕೆ ಅಂದರೆ 3.9% ಹೆಚ್ಚಳವಾಗಿದೆ. ಅಂತೆಯೇ ಡೀಸೆಲ್ ಈ‌ ಹಿಂದೆ- 14.34% ಇದ್ದಿದ್ದು, ಈಗ 18.44%ಗೆ ಏರಿಕೆ ಕಂಡಿದೆ. ಅಂದರೆ 4.1% ರಷ್ಟು ಏರಿಕೆಯಾಗಿದೆ. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ಪೆಟ್ರೋಲ್‌ ದರ 100 ರೂಪಾಯಿ ದಾಟಲಿದೆ. ಈಗ ಪೆಟ್ರೋಲ್‌ ದರ 99.54 ರೂ. ಇದ್ದು, ಮುಂದೆ 102 ರೂಪಾಯಿಗೆ ಏರಿಕೆಯಾಗಲಿದೆ. ಇವತ್ತಿನ ಡೀಸೆಲ್‌ ದರ 85.93 ರೂಪಾಯಿ ಇದೆ. ಅದು 89.43 ರೂಪಾಯಿಗೆ ಏರಿಕೆಯಾಗಲಿದೆ.

    Continue Reading

    LATEST NEWS

    ಪ್ರಕಾಶ್ ಶೆಟ್ಟಿ, ರೊನಾಲ್ಡ್‌ ಕೊಲಾಸೋರಿಗೆ ಗೌರವ ಡಾಕ್ಟರೇಟ್ ಪ್ರದಾನ

    Published

    on

    ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ ಶನಿವಾರ ವಿ.ವಿ.ಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಶನಿವಾರ ಜರಗಿತು.

    ಮಂಗಳೂರು ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ಡಾ। ರೊನಾಲ್ಡ್‌ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿದರು. ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ। ತುಂಬೆ ಮೊಯ್ದೀನ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

    155 ಮಂದಿಗೆ ಪಿಎಚ್‌ಡಿ, 58 ಚಿನ್ನದ ಪದಕ ಮತ್ತು 57 ನಗದು ಬಹುಮಾನ ಪ್ರದಾನ ಮಾಡಿದರು.

    ಉನ್ನತ ಶಿಕ್ಷಣ ಸಚಿವ, ಸಹಕುಲಾಧಿಪತಿ ಡಾ। ಎಂ.ಸಿ.ಸುಧಾಕರ್ ಉಪಸ್ಥಿತರಿದ್ದರು. ನವದೆಹಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ ಮಹಾನಿರ್ದೇಶಕ ಪ್ರೊ। ಸಚಿನ್ ಚತುರ್ವೇದಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

    ವಿ.ವಿ. ಕುಲಪತಿ ಪ್ರೊ। ಪಿ.ಎಲ್. ಧರ್ಮ ಪ್ರಸ್ತಾವಿಸಿದರು. ಕುಲಸಚಿವ (ಆಡಳಿತ) ರಾಜು ಮೊಗವೀರ, ಕುಲಸಚಿವ (ಪರೀಕ್ಷಾಂಗ) ಡಾ। ದೇವೇಂದ್ರಪ್ಪ, ವಿ.ವಿ.ಯ, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಏಕಕಾಲಕ್ಕೆ ಅರಳಿ ನಿಂತ 42 ಬ್ರಹ್ಮಕಮಲ ಪುಷ್ಪ; ಮಧ್ಯರಾತ್ರಿಯೇ ವಿಶೇಷ ಪೂಜೆ ಸಲ್ಲಿಕೆ!

    Published

    on

    ಉತ್ತರ ಕನ್ನಡ: ಶ್ರಾವಣದ ಸಂಜೆಗಳಲ್ಲಿ ಬ್ರಹ್ಮ ಕಮಲ ಅರಳುವುದು ವಾಡಿಕೆ. ಒಮ್ಮೊಮ್ಮೆ ಅದಕ್ಕೆ ವ್ಯತಿರಿಕ್ತವಾಗಿ ಬೇಗವೂ ಬ್ರಹ್ಮ ಕಮಲ ಅರಳುತ್ತದೆ. ಆದರೆ ಒಮ್ಮೆಲೆ ಪುಷ್ಪಗುಚ್ಛದಷ್ಟು ಅಂದವಾಗಿ ಒಂದೆಡೆಗೇ ಅರಳುವ ಬ್ರಹ್ಮಕಮಲದ ಸೊಬಗನ್ನು ನೋಡುವ ಅನುಭವವೇ ಬೇರೆ! ಬ್ರಹ್ಮಕಮಲವು ಅಧ್ಯಾತ್ಮಿಕ ಸ್ಥಾನವನ್ನು ಹಿಂದೂ ಹಾಗೂ ಜೈನ, ಬೌದ್ಧ ಧರ್ಮಗಳಲ್ಲಿ ಹೊಂದಿದೆ. ಹೀಗಾಗಿ ಬ್ರಹ್ಮಕಮಲ ಬರೀ ಹೂವಾಗದೇ ಈ ಹೂವೇ ಆರಾಧನೆಯ ವಸ್ತುವಾಗಿರುವುದು ವಿಶೇಷ!

    ಏಕಕಾಲಕ್ಕೆ 42 ಹೂಗಳು!

    ಯಲ್ಲಾಪುರ ಪಟ್ಟಣದ ರಾಮಾಪುರ ವ್ಯಾಪ್ತಿಯಲ್ಲಿ ವಾಸಿಸುವ ಗಣೇಶ್ ಪಂಡರಾಪುರ ಅವರ ಮನೆಯ ವಿಶೇಷವಾದ ಬ್ರಹ್ಮಕಮಲದ ಹೂವುಗಳು! ಯಾಕೆ ವಿಶೇಷ ಎಂದರೆ, ಹೋದ ವರ್ಷ ಇವರ ಮನೆಯಲ್ಲಿ ಸುಮಾರು 84 ಬ್ರಹ್ಮಕಮಲಗಳು ಒಟ್ಟಿಗೆ ಅರಳಿದ್ದವು. ಈ ವರ್ಷ 42 ಬ್ರಹ್ಮಕಮಲ ಏಕಕಾಲಕ್ಕೆ ಅರಳಿ ನಿಂತಿವೆ.

    ಪುಷ್ಪಕ್ಕೆ ಪೂಜೆ!

    ಮಧ್ಯರಾತ್ರಿ 12: 40 ರ ಸುಮಾರಿಗೆ ಈ ಹೂವುಗಳೆಲ್ಲಾ ಅರಳಿದ್ದವು ತಕ್ಷಣ ಗಣೇಶ್ ಪಂಡರಾಪುರ ಅವರ ಕುಟುಂಬ ವಾಡಿಕೆಯಂತೆ ಪೂಜೆ ಮಾಡಿ ನಂತರ ಮನೆಯವರಿಗೆ ಜನರಿಗೆ ಪ್ರಸಾದ ಹಂಚಿ ಹೂವುಗಳ ಮುಂದೆ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು, ಬ್ರಹ್ಮಕಮಲ ಅರಳುವ ವೇಳೆ ಕೇಳಿದ ಕೋರಿಕೆಗಳು ಈಡೇರುತ್ತವೆ ಎಂಬುದು ಪ್ರಸಿದ್ಧ ಲೋಕಾರೂಢಿಯ ನಂಬಿಕೆ.

    Continue Reading

    LATEST NEWS

    Trending