ಬೇರೂತ್ ಬಂದರಿನಲ್ಲಿ ಭೀಕರ ಸ್ಪೋಟ : 100 ಕ್ಕೂ ಅಧಿಕ ಸಾವು..ಬಂದರು ನಗರಿ ಧ್ವಂಸ..!
ಬೇರೂತ್ : ಲೆಬನಾನ್ ರಾಜಧಾನಿ ಬೇರೂತ್‌ನಲ್ಲಿ ಸಂಭವಿಸಿದ ಭಾರಿ ಸ್ಫೋಟ ಸಂಭವಿಸಿದೆ. ಸ್ಪೋಟದಲ್ಲಿ 100 ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ, ಮೂರು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಇನ್ನೂ ಬಹಳಷ್ಟು ಮೃತದೇಹಗಳು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿವೆ ಎಂದು ಹೇಳಲಾಗಿದೆ. ರಿಕ್ಟರ್ ಮಾಪಕದಲ್ಲಿ 3.5ರ ತೀವ್ರತೆಯ ಭೂಕಂಪಕ್ಕೆ ಸಮವಾದ ಶಕ್ತಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಜರ್ಮನಿಯ ಭೂ ವಿಜ್ಞಾನಗಳ ಸಂಸ್ಥೆ ಜಿಎಫ್‌ಝೆಡ್ ಹೇಳಿದೆ.
ಸಮುದ್ರದಾಚೆಯ ಸುಮಾರು 200 ಕಿ.ಮೀ ದೂರದ ಸೈಪ್ರಸ್‌ನಲ್ಲೂ ಸದ್ದು ಕೇಳಿಸಿದ್ದು, ಸ್ಫೋಟದ ಅನುಭವವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೀಕರ ಸ್ಫೋಟದಿಂದ ಈ ಬಂದರು ನಗರ ಧ್ವಂಸವಾಗಿದ್ದು, ಲಕ್ಷಾಂತರ ಕಟ್ಟಡಗಳು ಹಾನಿಗೀಡಾಗಿವೆ. ದಟ್ಟ ಹೊಗೆಯ ಕಾರ್ಮೋಡ ಇಡೀ ಪ್ರದೇಶದಲ್ಲಿ ವ್ಯಾಪಿಸಿದೆ.
ಈ ಹಿಂದೆ ಹಡಗಿನಿಂದ ವಶಪಡಿಸಿಕೊಂಡು ಶೇಖರಿಸಿ ಇಟ್ಟಿದ್ದ 2,700 ಟನ್ ಅಮೋನಿಯಾ ನೈಟ್ರೇಟ್ ಸ್ಪೋಟಕ ದಾಸ್ತಾನಿಗೆ ಬೆಂಕಿ ತಗುಲಿ ಸ್ಪೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ.
BOOM #Beruit #Lebanon pic.twitter.com/X9tjx7tY1x
— Minitrue (@BanTheBBC) August 4, 2020