Friday, August 12, 2022

ಉಪ್ಪಳ: ತೋಟದಲ್ಲಿ ಕಾರ್ಮಿಕನ ಮೃತದೇಹ ಹೂತಿಟ್ಟ ಪ್ರಕರಣ-ಮರಣೋತ್ತರ ಪರೀಕ್ಷೆ ಪೂರ್ಣ

ಉಪ್ಪಳ: ಇಲ್ಲಿನ ಬಾಯಾರು ಕನಿಯಾಲದ ಸುದೆಂಬಲದ ತೋಟದಲ್ಲಿ ಹೂತಿದ್ದ ಜಾರ್ಖಂಡ್‌ ಮೂಲದ ಕಾರ್ಮಿಕ ಶವದ ಮರಣೋತ್ತರ ಪರೀಕ್ಷೆ ನಡೆದಿದ್ದು, ಕಾರ್ಮಿಕನ ಸಾವು ಕೊಲೆಯಲ್ಲ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತಿಳಿಸಿದೆ. ಇಂದು ಈ ಬಗ್ಗೆ ಸ್ಪಷ್ಟ ವರದಿ ಲಭಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಜಾರ್ಖಂಡ್ ಮೂಲದ ಕಾರ್ಮಿಕ ಶಿವಾಜ್ ಯಾನೆ ಶಿವಚಂದ್‌ನ ಮೃತದೇಹವನ್ನು ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ನೀರಿನಲ್ಲಿ ಮುಳುಗಿ ಅಥವಾ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಈಗಾಗಲೇ ಅಸಹಜ ಸಾವು ಪ್ರಕರಣವನ್ನು ಮಂಜೇಶ್ವರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸಾವಿಗೆ ಸ್ಪಷ್ಟ ಕಾರಣ ಲಭಿಸಬೇಕಷ್ಟೇ ಎಂದು ಪೊಲೀಸರು ತಿಳಿಸಿದ್ದಾರೆ.


ನಿಗೂಢವಾಗಿ ಮೃತ ಕಾರ್ಮಿಕನ ಮೃತದೇಹವನ್ನು ರಹಸ್ಯವಾಗಿ ಮನೆ ಮಾಲಕ ಹಾಗೂ ಇತರ ಕಾರ್ಮಿಕರು ಸೇರಿ ತೋಟದಲ್ಲಿ ಹೂತಿದ್ದರು. ಒಂದೂವರೆ ತಿಂಗಳ ಬಳಿಕ ಕೃತ್ಯ ಬೆಳಕಿಗೆ ಬಂದಿತ್ತು. ರವಿವಾರ ಮೃತದೇಹವನ್ನು ಮೇಲಕ್ಕೆತ್ತಲಾಗಿತ್ತು.

LEAVE A REPLY

Please enter your comment!
Please enter your name here

Hot Topics

ಸಮುದ್ರ ದಡದಲ್ಲಿ ತೇಲಿ ಬಂತು ರಾಶಿ ಮುರವ (ಗೊಬ್ರ) ಮೀನು

ಉತ್ತರ ಕನ್ನಡ: ಉತ್ತರಕನ್ನಡದ ಮಂಕಿ ಸಮುದ್ರ ದಡದಲ್ಲಿ ರಾಶಿ ಮುರವ (ಗೊಬ್ರ) ಮೀನುಗಳು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ.ಹೆಚ್ಚು ತೂಪಾನ್ ಆದಾಗ ನೀರು ಅತೀ ಹೆಚ್ಚು ಕೋಲ್ಡ್ ಆದಾಗ ಮೀನುಗಳು ಅರೆ...

ಮಂಗಳೂರಿನಲ್ಲಿರುವ ರಸ್ತೆ ಹೊಂಡ ಗುಂಡಿಗಳ ವಿರುದ್ಧ patholeseazaadi ಅಭಿಯಾನ

ಮಂಗಳೂರು: ನಗರದ ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ ಬಳಿ ಕಳೆದ ಆ.5 ರಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತಿಶ್ (20) ಮೃತಪಟ್ಟ ನಂತರ ರಾಷ್ಟ್ರೀಯ ಹೆದ್ದಾರಿ ಸಹಿತ ಮಂಗಳೂರು ನಗರದಲ್ಲಿರುವ...

‘ಕಾಡು ಕುದುರೆ ಓಡಿ ಬಂದಿತ್ತಾ’ ಖ್ಯಾತಿಯ ಸುಬ್ಬಣ್ಣ ಇನ್ನಿಲ್ಲ

ಬೆಂಗಳೂರು: ಖ್ಯಾತ ಹಾಡುಗಾರ, ವಕೀಲ ಶಿವಮೊಗ್ಗದ ಸುಬ್ಬಣ್ಣ ಅವರು ಅನಾರೋಗ್ಯದಿಂದ ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅವರಿಗೆ 83 ವರ್ಷ ವಯಸ್ಸಾಗಿತ್ತು. 'ಕಾಡುಕುದುರೆ' ಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಅವರು, ವಕೀಲೆ ವೃತ್ತಿಯನ್ನೂ ಮಾಡುತ್ತಿದ್ದರು....