ಮಂಗಳೂರು: ಕೊಣಾಜೆ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ಹಮ್ಮಿಕೊಂಡ ತುರ್ತು ನಿರ್ವಹಣಾ ಕಾಮಗಾರಿಯ ಪ್ರಯುಕ್ತ ನಾಳೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಿದೆ.
ಕೊಣಾಜೆ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಕೊಣಾಜೆ, ಮಂಜನಾಡಿ, ಉಳ್ಳಾಲ ಎಕ್ಸ್ಪ್ರೆಸ್, ವಿಶ್ವವಿದ್ಯಾಲಯ, ಪಜೀರ್, ಬೋಳಿಯಾರ್ ಮತ್ತು ತೊಕ್ಕೊಟ್ಟು, ಯೆನಪೋಯ ಮಾರ್ಗ, ಇನ್ಫೋಸಿಸ್ ಮಾರ್ಗಗಳಲ್ಲಿ ತೊಕ್ಕೊಟ್ಟು, ಕಲ್ಲಾಪು, ಉಳ್ಳಾಲ, ಪಂಡಿತ್ಹೌಸ್, ಒಳಪೇಟೆ, ಕಾಫಿಕಾಡ್,
ಪಿಲಾರ್, ಅಂಬಿಕಾ ರೋಡ್, ಸೋಮೇಶ್ವರ, ಉಚ್ಚಿಲ, ಅಡ್ಕ, ಕೊಲ್ಯ, ಕುಂಪಲ, ಕೋಟೆಕಾರ್, ಬೀರಿ, ಕೆ.ಸಿ. ರೋಡ್, ತಪಲಾಡಿ, ನಾಟೆಕಲ್, ಉರುಮನೆ, ಮಂಗಳಾನಗರ, ಮಂಗಳಾಂತಿ, ಕಲ್ಕಟ, ಮೊಂಟೆಪದವು, ಕಿನ್ಯಾ, ಅಸೈಗೋಳಿ, ದೇರಳಕಟ್ಟೆ, ಬದ್ಯಾರ್, ರೆಂಜಾಡಿ, ನಿಟ್ಟೆ, ಬಗಂಬಿಲ,
ಯೆನಪೋಯ, ಕಾನಕೆರೆ, ಕಕ್ಕೆಮಜನಲು, ಮಾನಸ, ಬೆಳ್ಮದೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.