Monday, July 4, 2022

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಕರಾವಳಿಯಲ್ಲಿ ಮತ್ತೆ ಭಾರಿ ಮಳೆ ನಿರೀಕ್ಷೆ..!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಕರಾವಳಿಯಲ್ಲಿ ಮತ್ತೆ ಭಾರಿ ಮಳೆ ನಿರೀಕ್ಷೆ..!

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆ ಹೆಚ್ಚಳವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದಲ್ಲಿ ನಾಳೆ ಬೆಳಗ್ಗಿನವರೆಗೆ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.

ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮಳೆ ಅಧಿಕಗೊಳ್ಳಲಿದೆ ಎನ್ನಲಾಗಿದೆ. ಮಧ್ಯಪ್ರದೇಶ, ಒಡಿಶಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ದೆಹಲಿಯಲ್ಲೂ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಹಿಂದೆ ಸುರಿದ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್ ಎಸ್, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ, ಘಟಪ್ರಭಾ, ಮಲಪ್ರಭಾ, ಕಬಿನಿ, ಹಾರಂಗಿ, ಹೇಮಾವತಿ, ವರಾಹಿ ಸೇರಿದಂತೆ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಮಿಲಾಗ್ರಿಸ್‌ ಚರ್ಚ್‌ನ ಒಳಭಾಗದಲ್ಲಿ ಸಮಾಧಿ ಕುಸಿತ-ಶತಮಾನದ ಕಟ್ಟಡಕ್ಕೆ ಹಾನಿ ಭೀತಿ

ಮಂಗಳೂರು: ಶತಮಾನದ ಇತಿಹಾಸವಿರುವ ನಗರದ ಹೃದಯಭಾಗದಲ್ಲಿರುವ ಮಿಲಾಗ್ರಿಸ್‌ ಚರ್ಚ್‌ನ ಒಳಭಾಗದಲ್ಲಿ ಎರಡು ಹೊಂಡ ನಿರ್ಮಾಣವಾಗಿದೆ.ಮಿಲಾಗ್ರಿಸ್ ಚರ್ಚ್‌ನ ಕಟ್ಟಡಕ್ಕೆ 125 ವರ್ಷಗಳ ಇತಿಹಾಸವಿದ್ದು, ಚರ್ಚ್‌ನ ಒಳಗೆ 108 ಜನರ ಮೃತ ದೇಹಗಳನ್ನು ಸಮಾಧಿ ಮಾಡಲಾಗಿದೆ.ಕಳೆದ...

ಮಂಗಳೂರಿನಲ್ಲಿ 518 ಅಕ್ರಮ ವಿದೇಶಿಗರು ಪೊಲೀಸರ ವಶಕ್ಕೆ

ಮಂಗಳೂರು: ಮಂಗಳೂರು ಪೊಲೀಸರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಯೂರಿರುವ ವಿದೇಶಿಗರ ಪತ್ತೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.ಸರಿಯಾದ ದಾಖಲೆಗಳಿಲ್ಲದ 518 ವಿದೇಶಿ ವಲಸಿಗರೆಂದು ಹೇಳಲಾದವರ ವಿಚಾರಣೆ ಆರಂಭಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಅಕ್ರಮವಾಗಿ ‌ನೆಲೆಸಿರುವ ವಿದೇಶಿಯರ...

ಪೌರಕಾರ್ಮಿಕರ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ಉಪನಾಯಕ ಖಾದರ್

ಮಂಗಳೂರು: ರಾಜ್ಯದಾದ್ಯಂತ ನಡೆಯುತ್ತಿರುವ ಪೌರ ಕಾರ್ಮಿಕರ ಮುಷ್ಕರ ನಾಳೆ ಐದನೇ ದಿನಕ್ಕೆ ಕಾಲಿರಿಸಲಿದೆ. ರಾಜ್ಯ ಘಟಕದ ಸೂಚನೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರತಿಭಟನೆ ಮುಂದುವರಿದಿದೆ.ಸ್ವಚ್ಛತಾ ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿ ಪೌರ ಕಾರ್ಮಿಕರು ಮಂಗಳೂರಿನಲ್ಲಿ...