Connect with us

LATEST NEWS

ಮೂರು ದಶಕಗಳಲ್ಲೇ ಅತೀ ಹೆಚ್ಚು ಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್‌

Published

on

ಮಂಗಳೂರು: ಮೂರು ದಶಕದ ನಂತರ ಕರ್ನಾಟಕದಲ್ಲಿ ರಾಜಕೀಯ ಪಕ್ಷವೊಂದು ಅತೀ ಹೆಚ್ಚು ಸ್ಥಾನ ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

1994 ರಲ್ಲಿ ಹೆಚ್‌.ಡಿ ದೇವೇಗೌಡ ನೇತೃತ್ವದ ಜೆಡಿಎಸ್‌ 115
1999ರಲ್ಲಿ ಎಸ್‌.ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್‌ 132 ಸ್ಥಾನ

2004 ರಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ 79 ಸ್ಥಾನ
2008ರಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ 110 ಸ್ಥಾನ

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ 122 ಸ್ಥಾನ
2018ರಲ್ಲಿ ಬಿಎಸ್‌ವೈ ನೇತೃತ್ವದ ಬಿಜೆಪಿ 104 ಸ್ಥಾನ ಪಡೆದಿತ್ತು.

ಈ ಹಿಂದೆ 1989ರಲ್ಲಿ 178 ಸ್ಥಾನ ಪಡೆಯುವ ಮೂಲಕ ವೀರೇಂದ್ರ ಪಾಟೀಲ್‌ ನೇತೃತ್ವದ ಕಾಂಗ್ರೆಸ್‌ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

`ಇದೀಗ 34 ವರ್ಷದ ಬಳಿಕ ಮತ್ತೆ ಕಾಂಗ್ರೆಸ್‌ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಇತಿಹಾಸ ಸೃಷ್ಟಿಸಿದೆ.

FILM

ಇಂಡೋನಿಷಿಯಾದಲ್ಲಿ ತುಳು ಮಾತನಾಡಿದ ಡಾ ಬ್ರೋ..! ಸಖತ್ ವೈರಲ್ ಆಯ್ತು ವೀಡಿಯೋ

Published

on

ಮಂಗಳೂರು: ಡಾ ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ಯಾರಿಗೆ ಗೊತ್ತಿಲ್ಲ ಹೇಳಿ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಡಾ ಬ್ರೋ ಅಂದ್ರೆ ಎಲ್ಲರಿಗೂ ಚಿರಪರಿಚಿತ. ಹೌದು, ಪ್ರಪಂಚದ ನಾನಾ ದೇಶಗಳಿಗೆ ಪ್ರವಾಸವನ್ನು ಕೈಗೊಂಡು ಅಲ್ಲಿನ ಆಚಾರ ವಿಚಾರ ಹಾಗೂ ಸ್ಥಳಗಳನ್ನು ಎಲ್ಲರಿಗೂ ಪರಿಚಯ ಮಾಡಿಸ್ತಾರೆ. ಇನ್ನು ಕನ್ನಡದಲ್ಲಿ ಅವರ ಭಾಷಾ ಹಿಡಿತ ಎಲ್ಲರಿಗೂ ಅಚ್ಚುಮೆಚ್ಚು. ಅವರದ್ದೇ ಆದ ಶೈಲಿಯಲ್ಲಿ ಮನಮುಟ್ಟುವಂತೆ ಸ್ಪಷ್ಟ ವಿವರಣೆ ನೀಡ್ತಾರೆ.

ಇಂಡೋನೇಷ್ಯಾದಲ್ಲಿ ತುಳು ಮಾತಾನಾಡಿದ ಡಾ.ಬ್ರೋ:

ಡಾ ಬ್ರೋ ಇಂಡೋನೇಷಿಯಾ ಪ್ರವಾಸ ಕೈಗೊಂಡಿರುವ ಸಮಯದಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ್ದಾರೆ. ಅಲ್ಲಿನ ಜನರಲ್ಲಿ ತುಳು ಭಾಷೆಯಲ್ಲಿ ‘ಹಾಯ್ ಎಂಚ ಉಲ್ಲರ್’ ಎಂದು ಕೇಳಿದ್ದು ಇದೀಗ  ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.   ಈ ಹಿಂದೆ ಡಾ. ಬ್ರೋ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ‘ಎಂಚ ಉಲ್ಲರ್’ ಎಂಬ ಪದವನ್ನು ತುಳು ಕಂಟೆಂಟ್ ಕ್ರಿಯೇಟರ್ ಶರಣ್ ಚಿಲಿಂಬಿ ಕಲಿಸಿಕೊಟ್ಟಿದ್ದರು.

gagan

ಇದೀಗ ಗಗನ್ ಶ್ರೀನಿವಾಸ್‌ರವರು ಇಂಡೋನಿಷಿಯಾದ ಜನರಿಗೆ ತುಳುವಿನಲ್ಲಿ ‘ಎಂಚ ಉಲ್ಲರ್’ ಎಂದು ಕೇಳಿದ್ದು ಇವರ ತುಳು ಭಾಷಾ ಪ್ರೇಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಯ್ ಹೆಲೋ..ಎಂದು ಹೇಳದೆ ತುಳುವಿನಲ್ಲಿ ಎಂಚ ಉಲ್ಲರ್ ಎಂದು ಕೇಳಿದ್ದು ಜನರಲ್ಲಿ ಸಂತಸ ವ್ಯಕ್ತವಾಗಿದೆ. ಇದೀಗ ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವರ್ತೂರು ಸಂತೋಷ್​​ ತೋಟದಲ್ಲಿ ಮತ್ತೆ ಸೇರಿದ ಬಿಗ್​​ಬಾಸ್​ ಸ್ಪರ್ಧಿಗಳು

ಗಗನ್ ಶ್ರೀನಿವಾಸ್ 2018 ರಲ್ಲಿ ಡಾ. ಬ್ರೋ ಎಂಬ ಹೆಸರಿನಲ್ಲಿ ಹೊಸ ಯೂಟ್ಯೂಬ್ ಚಾನೆಲ್ ಅನ್ನು
ಪ್ರಾರಂಭ ಮಾಡ್ತಾರೆ. ಆರಂಭದ ದಿನಗಳಲ್ಲಿ ಹಾಸ್ಯ ವೀಡಿಯೊಗಳು ಮತ್ತು ಸಂದರ್ಶನ ವೀಡಿಯೊಗಳನ್ನು ಮಾಡುತ್ತಿದ್ದರು, ನಂತರ ಅವರು ಕರ್ನಾಟಕದಲ್ಲಿ ಮಾತ್ರ ವ್ಲಾಗ್ ಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಭಾರತದೆಲ್ಲೆಡೆ ವ್ಲಾಗ್ ಮಾಡಲು ಪ್ರಾರಂಭಿಸಿದರು. ಇದೀಗ ಭಾರತವೂ ಸೇರಿ ಪ್ರಪಂಚದ ಮೂಲೆ ಮೂಲೆಗಳಿಗೆ ಸಂಚರಿಸಿ ವ್ಲಾಗ್ ಮಾಡುತ್ತಿದ್ದಾರೆ.

 

Continue Reading

LATEST NEWS

ಮದುವೆಯಾದ ಕೆಲವೇ ಗಂಟೆಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Published

on

ಮದುವೆ ದಿನ ಎಂದರೆ ಪ್ರತಿಯೊಬ್ಬರಿಗೂ ತುಂಬಾ ವಿಶೇಷವಾದ ದಿನ. ಎರಡು ಜೀವಗಳು ಬೆಸೆಯುವ ಕ್ಷಣಗಳು. ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ವಿಶೇಷ ದಿನದಂದು ಉತ್ಸಾಹ, ಖುಷಿ, ಕುತೂಹಲ ಸೇರಿದಂತೆ ಹಲವು ಭಾವನೆಗಳು ಒಟ್ಟೊಟ್ಟಿಗೆ ಸಂಭವಿಸುತ್ತಿರುತ್ತದೆ. ಜೀವವಿರುವವರೆಗೂ ಈ ದಿನ ದಂಪತಿಗಳಿಗೆ ತುಂಬಾ ವಿಶೇಷ ದಿನವಾಗಿರುತ್ತದೆ. ಇಂತಹ ಮದುವೆ ದಿನವೇ ಪ್ಲೊರಿಡಾದ ಮಹಿಳೆಯೊಬ್ಬರಿಗೆ ಡಬಲ್ ಖುಷಿ ಸಿಕ್ಕಿದೆ.

ಫ್ಲೋರಿಡಾದ ಬ್ರಿಯಾನಾ ಲುಕ್ಕಾ-ಸೆರೆಜೊ:

ಫ್ಲೊರಿಡಾದ ಮಹಿಳೆಯೊಬ್ಬರು ತಮ್ಮ ನೆಚ್ಚಿನ ವರನ ಜೊತೆ ಮದುವೆಯನ್ನು ಸಿಟಿ ಹಾಲ್ ನಲ್ಲಿ ತುಂಬಾ ವಿಶೇಷವಾಗಿ ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದರು. ಫ್ಲೋರಿಡಾದ ಬ್ರಿಯಾನಾ ಲುಕ್ಕಾ-ಸೆರೆಜೊ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಮದುವೆ ದಿನದ ಮುಂಚಿನ ದಿನ ಈಕೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಉಸಿರಾಟಕ್ಕೆ ಸಂಬಂಧಿಸಿದ ರೆಸ್ಪಿರೇಟರಿ ಸಿಂಕಿಟಿಯಲ್ ವೈರಸ್ ಸೋಂಕಿನಿಂದ ಅನಾರೋಗ್ಯಕ್ಕೀಡಾಗಿರುವುದಾಗಿ ತಿಳಿಸಿದ್ದಾರೆ. ಗರ್ಭಿಣಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದ ಕಾರಣ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿದ್ದರು.

ಹೆರಿಗೆ ಟೈಂನಲ್ಲೂ ಬ್ರಿಯನ್ನಾ ಜೊತೆ ನಿಶ್ಚಿತ ವರ ಜೊತೆಯಲ್ಲೇ ಇದ್ದು ಲೇಬರ್ ವಾರ್ಡ್ ಗೆ ಕರೆದುಕೊಂಡು ಹೋಗಿದ್ದಾರೆ. ಈಗ ನರ್ಸ್ ಗಳು ಸಾಮಾನ್ಯವಾಗಿ ಕೇಳುವಂತೆ ಮದುವೆಯಾಗಿದ್ಯಾ ಎಂಬ ಪ್ರಶ್ನೆಗಳು ಕೇಳಿದ್ದಾರೆ. ಆಗ ನಾಳೆಯೇ ಮದುವೆ ದಿನ ಎಂದು ಆಸ್ಪತ್ರೆ ಸಿಬ್ಬಂದಿ ಬಳಿ ಬ್ರಿಯಾನ್ನಾ ಹೇಳಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ವಿವಾಹವಾದ ವಧು-ವರರು:

ವಿಷಯ ತಿಳಿದ ಕೂಡಲೇ ಆಸ್ಪತ್ರೆ ಸಿಬ್ಬಂದಿಯು ಈ ಜೋಡಿಗೆ ಸಹಾಯ ಮಾಡಿದ್ದಾರೆ. ಈ ಜೋಡಿಗೆ ಮದುವೆ ಮಾಡಿಸಲು ಆಸ್ಪತ್ರೆಯಲ್ಲಿ ತರಾತುರಿಯಾಗಿ ಆಸ್ಪತ್ರೆ ಸಿಬ್ಬಂದಿಯೇ ತಯಾರಿ ಮಾಡಿದ್ದಾರೆ. ಬ್ರಿಯಾನ್ನ ಅವರು ಆರೋಗ್ಯದ ಬಗ್ಗೆ ಗಮನಹರಿಸುವುದರ ಜೊತೆಗೆ ಆಸ್ಪತ್ರೆ ಸಿಬ್ಬಂದಿ ವಿವಾಹ ಸಮಾರಂಭವನ್ನು ಆಯೋಜಿಸುವುದಕ್ಕೆ ನಿರ್ಧರಿಸಿದ್ದಾರೆ.
ನರ್ಸ್ ಒಬ್ಬರು ವಧುವಿಗೆ ಬೇಕಾದಂತ ಮದುವೆ ಗೌನ್ ಅನ್ನು ಬರೀ ಪೇಪರ್ ಗಳನ್ನು ಬಳಸಿ ಕೇವಲ 30 ನಿಮಿಷಗಳಲ್ಲಿ ಅದ್ಭುತವಾಗಿ ವಿನ್ಯಾಸಗೊಳಿಸಿದ್ದಾರೆ. ಅದೃಷ್ಠವಶಾತ್ ಬ್ರಿಯಾನ್ನಾ ತಮ್ಮ ಮದುವೆಗೆ ಬೇಕಾಗಿದ್ದ ಪರವಾನಗಿ ಹಾಗೂ ವೆಡ್ಡಿಂಗ್ ರಿಂಗ್ ಸಹ ಆಸ್ಪತ್ರೆಗೆ ತಂದಿದ್ದ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು.

ಬ್ರಿಯಾನ್ನ ಆಸೆಯಂತೆ, ಮೊದಲೇ ನಿಶ್ಚಿಯಿಸಿದ ದಿನಾಂಕದಲ್ಲೇ ಮದುವೆ ನೆರವೇರಿದೆ. ಇಬ್ಬರು ಪ್ರಮಾಣ ಮಾಡಿ, ಒಬ್ಬರಿಗೊಬ್ಬರು ರಿಂಗ್ ಬದಲಿಸಿಕೊಂಡಿದ್ದಾರೆ. ನಂತರ ಮದುವೆ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಿಸಿಕೊಂಡು ಖುಷಿಪಟ್ಟಿದ್ದಾರೆ.

ಗಂಡು ಮಗುವಿಗೆ ಜನನ:

ಸಂಭ್ರಮದ ಕೆಲ ಗಂಟೆಗಳ ನಂತರ ಬ್ರಿಯಾನ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಒಂದೇ ದಿನ ಡಬಲ್ ಸಂತೋಷ ಎಲ್ಲರಲ್ಲೂ ಮತ್ತಷ್ಟು ಖುಷಿ ತಂದಿತು. ಮಗುವಿಗೆ ಲ್ಯಾಂಡನ್ ಇರ್ವಿನ್ ಎಂದು ನಾಮಕರಣ ಮಾಡಿದ್ದಾರೆ.

Continue Reading

LATEST NEWS

ವಿದ್ಯಾರ್ಥಿನಿ ರುಂಡ ಕತ್ತರಿಸಿ ಕೊಲೆ ಪ್ರಕರಣ: ಆರೋಪಿಯ ಹೆಡೆಮುರಿ ಕಟ್ಟಿದ ಪೊಲೀಸರು

Published

on

ಕೊಡಗು: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

prakash accuse

ಎಸ್​ಎಸ್​ಎಲ್​ಸಿ ಫಲಿತಾಂಶ ಹೊರ ಬಿದ್ದ ಮೇ.09ರಂದು ಆರೋಪಿ ಬಾಲಕಿಯ ರುಂಡ ಕತ್ತರಿಸಿ ಎಸ್ಕೇಪ್ ಆಗಿದ್ದ. ಪೊಲೀಸರು ಹಲವು ತಂಡಗಳನ್ನು ಮಾಡಿ ಶೋಧ ಕಾರ್ಯ ನಡೆಸುತ್ತಿದ್ದರು. ಸದ್ಯ ಆರೋಪಿಯನ್ನು ಆತನ ಸ್ವ ಗ್ರಾಮವಾಗಿರುವ ಸೋಮವಾರಪೇಟೆ ತಾಲೂಕಿನ ಹಮ್ಮಿಯಾಳ ಎಂಬ ಗ್ರಾಮದಲ್ಲಿ ಬಂಧಿಸಿದ್ದಾರೆ.

ಮುಂದೆ ಓದಿ..; ಶಾಲೆಗೆ 100% ಫಲಿತಾಂಶ ತಂದುಕೊಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಭೀಕರ ಹ*ತ್ಯೆ

ತನ್ನ ಗ್ರಾಮದಲ್ಲೇ ಅಡಗಿದ್ದ ಆರೋಪಿ ಪ್ರಕಾಶ್​ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯ ಬಂಧನವಾಗಿದ್ದರೂ ಆರೋಪಿ ಕತ್ತರಿಸಿ ತೆಗೆದುಕೊಂಡು ಹೋಗಿದ್ದ ರುಂಡ ಇನ್ನೂ ಕೂಡಾ ಪತ್ತಯಾಗಿಲ್ಲ. ಆರೋಪಿ ಪ್ರಕಾಶ್ ಕಳೆದ ಆರು ತಿಂಗಳಿನಿಂದ ಹತ್ಯೆಯಾದ ಬಾಲಕಿ ಮೀನಾ ಮನೆಯಲ್ಲಿ ವಾಸವಾಗಿದ್ದ. ತನ್ನ ಸ್ವಂತ ಮನೆಗೆ ಬರುತ್ತಿರಲಿಲ್ಲ ಎಂದು ಸ್ವತಹ ಪ್ರಕಾಶ್ ತಾಯಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮೀನಾಳನ್ನು ಮದುವೆ ಆಗುವ ವಿಚಾರ ನನಗೆ ಗೊತ್ತಿಲ್ಲ , ಆದ್ರೆ ಆಕೆಯನ್ನ ಶಾಲೆಗೆ ಕರೆದುಕೊಂಡು ಹೋಗುವುದು ಬರುವುದು ಮಾಡುತ್ತಿದ್ದ ಎಂದು ಆತನ ತಾಯಿ ಹೇಳಿದ್ದಾರೆ.

Continue Reading

LATEST NEWS

Trending