Monday, January 24, 2022

ವಿಟ್ಲ: ಫೇಸ್‌ಬುಕ್‌ನಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ-ಎಫ್‌ಐಆರ್‌ ದಾಖಲು

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಬರಹ ಹಿನ್ನೆಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ವಿಷ್ಣುಪ್ರಸಾದ್ ನಿಡ್ಡಾಜೆ ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ
ಸಾಲೆತ್ತೂರಿನಲ್ಲಿ ನಡೆದ ಕೊರಗಜ್ಜನ ಅವಹೇಳನ ಪ್ರಕರಣ ನಡೆದ ನಂತರದ ಬೆಳವಣಿಗೆಯಲ್ಲಿ ಫೇಸ್‌ಬುಕ್‌ನಲ್ಲಿ ಕೋಮುಪ್ರಚೋದಿತ ಬರಹ ಪೋಸ್ಟ್‌ ಹಾಕಿದ್ದ ಈ ಬಗ್ಗೆ ಪಿಎಫ್‌ಐ ಸಂಘಟನೆ ವಿಟ್ಲ ಠಾಣೆಗೆ ದೂರು ನೀಡಿತ್ತು.

ಈ ದೂರಿನ ವಿರುದ್ಧ ಇದೀಗ ಆರೋಪಿ ವಿರುದ್ಧ ಐಪಿಸಿ ಸೆಕ್ಷನ 505ರಡಿ ಪ್ರಕರಣ ದಾಖಲಾಗಿದೆ ಎಂದ ಪೊಲೀಸರು ತಿಳಿಸಿದ್ದಾರೆ. ಆರೋಪಿ ಖಾಸಗಿ ವಲಯದ ಬ್ಯಾಂಕ್‌ನ ಉದ್ಯೋಗಿ ಎಂಬ ಮಾಹಿತಿ ಇದೆ.

Hot Topics

ಮುಡಿಪು: ದ್ವಿಚಕ್ರ ವಾಹನಕ್ಕೆ ಒಂದೇ ತಿಂಗಳಲ್ಲಿ ಬರೋಬ್ಬರಿ 9 ಸಾವಿರ ಟ್ರಾಫಿಕ್ ಫೈನ್-ಬೆಚ್ಚಿಬಿದ್ದ ಮಾಲಕಿ

ಮುಡಿಪು: ಮೆಡಿಕಲ್ ಸ್ಟೋರ್ ಒಂದರ ಎದುರುಗಡೆ ನಿಲ್ಲಿಸಿದ್ದ ಒಂದೇ ದ್ವಿಚಕ್ರ ವಾಹನಕ್ಕೆ ಪೊಲೀಸರು ಒಂದೇ ತಿಂಗಳಲ್ಲಿ ಒಂಭತ್ತು ಸಾವಿರ ದಂಡ ವಿಧಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ‌ ನಡೆದಿದೆ.ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಜೀವಿನಿ ಆಯುರ್ವೇದ ಮಡಿಕಲ್...

ಕುಂಪಲ: ಪ್ರಯಾಣಿಕರನ್ನು ಇಳಿಸುವ ವೇಳೆ ಖಾಸಗಿ ಸಿಟಿ ಬಸ್‌ಗಳ ಢಿಕ್ಕಿ

ಮಂಗಳೂರು: ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸುವ ಸಂದರ್ಭ ಬಸ್‌ಗೆ ಮತ್ತೊಂದು ಬಸ್‌ ಢಿಕ್ಕಿ ಹೊಡೆದ ಘಟನೆ ಉಳ್ಳಾಲ ಕುಂಪಲದ ಬೈಪಾಸ್ ಬಸ್ಸು ತಂಗುದಾಣದಲ್ಲಿ ಇಂದು ನಡೆದಿದೆ.ಕುಂಪಲದಿಂದ ಮಂಗಳೂರು ಕಡೆಗೆ ಸಾಗುವ ಖಾಸಗಿ ಸಿಟಿ...

‘ಸುಳ್ಳುಗಳ ಮೂಲಕ ನಾರಾಯಣಗುರುವಿಗೆ ಮಾಡಿದ ಅಪಚಾರವನ್ನು ಮುಚ್ಚಿಟ್ಟುಕೊಳ್ಳಲಾಗದು’

ಮಂಗಳೂರು: ಸುಳ್ಳುಗಳ ಮೂಲಕ ಸಾಮಾಜಿಕ ಸುಧಾರಣೆಯ ಹರಿಕಾರ  ನಾರಾಯಣ ಗುರು ಅವರಿಗೆ ಮಾಡಿದ ಅಪಚಾರವನ್ನು ಬಿಜೆಪಿ ಮುಚ್ಚಿಟ್ಟುಕೊಳ್ಳಲಾಗದು ಎಂದು ಸಿಪಿಐಎಂ ಹೇಳಿದೆ.ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ...