Saturday, March 6, 2021

ಪ್ಯಾಂಗಾಂಗ್ ಸರೋವರದಿಂದ ಚೀನಾ ಜಾಗ ಖಾಲಿ : ಗಡಿಯಿಂದ ಹೊರಟ ಪೀಪಲ್ ಲಿಬರೇಷನ್ ಆರ್ಮಿ..!

ಪ್ಯಾಂಗಾಂಗ್ ಸರೋವರದಿಂದ ಚೀನಾ ಜಾಗ ಖಾಲಿ : ಗಡಿಯಿಂದ ಹೊರಟ ಪೀಪಲ್ ಲಿಬರೇಷನ್ ಆರ್ಮಿ..!

ನವದೆಹಲಿ :ಪ್ಯಾಂಗಾಂಗ್ ಸರೋವರದಿಂದ ಚೀನಾ ಜಾಗ ಖಾಲಿ ಮಾಡುತ್ತಿದೆ. ಗಡಿಯಿಂದ ಪೀಪಲ್ ಲಿಬರೇಷನ್ ಆರ್ಮಿ ನಿರ್ಗಆರ್ಮಿಮಿಸುತ್ತಿದೆ. ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಮನೆ ಮಾಡಿದ್ದ ಪ್ರಕ್ಷುಬದ್ಧತೆ ಕೊನೆ ಹಂತಕ್ಕೆ ತಲುಪಿದ್ದು, ಶಾಂತಿ ಮಾತುಕತೆಯಂತೆ ಎರಡೂ ರಾಷ್ಟ್ರಗಳು ಗಡಿಯಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲಾರಂಭಿಸಿವೆ.

ಚೀನಾ ಮತ್ತು ಭಾರತದ ಸೈನಿಕರು ಮತ್ತು ಟ್ಯಾಂಕ್‌ಗಳು ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರದ ದಡದಿಂದ ಹಿಂದಕ್ಕೆ ತೆರಳುತ್ತಿರುವ ಚಿತ್ರಗಳನ್ನು ಮತ್ತು ಗಡಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ನಿರ್ಮಿತಿಗಳನ್ನು ತೆರವು ಮಾಡುತ್ತಿರುವ ದೃಶ್ಯಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.

ಈ ಒಪ್ಪಂದದ ಪ್ರಕಾರ ಪ್ಯಾಂಗಾಂಗ್ ಸರೋವರದಿಂದ ಚೀನಾ ಸೇನೆ ಜಾಗ ಖಾಲಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗಡಿನಿಯಂತ್ರಣ ರೇಖೆಯ ಬಳಿ ನಿಯೋಜಿಸಲಾಗಿರುವ ಸೇನಾಪಡೆಯನ್ನು ಚೀನಾ ಹಿಂದಕ್ಕೆ ಕರೆಸಿಕೊಳ್ಳುತ್ತಿದೆ.

ಪ್ಯಾಂಗಾಂಗ್ ಸರೋವರದ ಉತ್ತರ ತೀರದಲ್ಲಿನ ಆರ್ಮಿ ಫಿಂಗರ್ ಪ್ರದೇಶಗಳಿಂದ ಚೀನಾ ಹಿಂದೆ ಸರಿದಿದೆ. ಚೀನಾ ಯೋಧರು ಆರ್ಟಲರಿ ಗನ್ ಹಿಡಿದು ಮರಳುತ್ತಿದ್ದಾರೆ.ಭಾರತೀಯ ಸೇನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಚೀನಾ ಸೇನೆ ಸ್ಥಾಪಿಸಿದ್ದ ಬಂಕರ್ ಗಳನ್ನು ಕಿತ್ತುಹಾಕಿದೆ.

ಯುದ್ಧ ಟ್ಯಾಂಕರ್ ಗಳನ್ನು ಹಿಂತೆಗೆದುಕೊಂಡಿದೆ. ಇನ್ನು ಶೆಡ್ ಗಳ ಮೇಲಿನ ಶೀಟ್ ಗಳನ್ನು ತೆಗೆದು ಸೇನಾ ವಾಹನಕ್ಕೆ ತುಂಬಿಕೊಂಡು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿದೆ.

ಇನ್ನು ಫೆ.20ರೊಳಗೆ ಪ್ಯಾಂಗಾಂಗ್ ಸರೋವರದಿಂದ ಚೀನಾ ಸೇನೆ ಸಂಪೂರ್ಣವಾಗಿ ಹಿಂದಕ್ಕೆ ಸರಿಯಲಿದೆ ಎಂದು ಭಾರತೀಯ ಸೇನೆ ಹೇಳಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...