ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ‘ಕಿರಣ್ ಬೇಡಿ’ಯನ್ನು ವಜಾ ಮಾಡಿದ ರಾಷ್ಟ್ರಪತಿ..!
ನವದೆಹಲಿ : ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನದಿಂದ ‘ಕಿರಣ್ ಬೇಡಿ’ಯನ್ನು ವಜಾ ಮಾಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದೇಶ ಹೊರಡಿಸಿದ್ದಾರೆ.
ಪುದುಚೇರಿಗೆ ಹೆಚ್ಚುವರಿಯನ್ನು ಜವಾಬ್ದಾರಿ ಯನ್ನು ತೆಲಂಗಾಣದ ರಾಜ್ಯಪಾಲರಾಗಿರುವ ತಮಿಳಿಸಾಯಿ ಸೌಂದರರಾಜನ್ ಅವರಿಗೆ ಅಧಿಕಾರ ನೀಡಿದ್ದಾರೆ.
‘ಡಾ.ಕಿರಣ್ ಬೇಡಿ ಅವರು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯನ್ನು ನಿರ್ವಹಿಸುವುದನ್ನು ನಿಲ್ಲಿಸಬೇಕೆಂದು ರಾಷ್ಟ್ರಪತಿಗಳು ಆದೇಶಿಸಿದ್ದಾರೆ
ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯನ್ನು ಮುಂದಿನ ಆದೇಶದ ತನಕ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ತೆಲಂಗಾಣ ರಾಜ್ಯಪಾಲಡಾ.ತಮಿಳಿಸಾಯಿ ಸೌಂದರರಾಜನ್ ಅವರನ್ನು ನೇಮಕ ಮಾಡಿದ್ದಾರೆ.
ರಾಷ್ಟ್ರಪತಿ ಪತ್ರಿಕಾ ಕಾರ್ಯದರ್ಶಿ ಅಜಯಕುಮಾರ್ ಸಿಂಗ್, ಹೇಳಿಕೆಯೊಂದರಲ್ಲಿ ಈ ಮಾಹಿತಿ ನೀಡಿದ್ದಾರೆ.