LATEST NEWS
Chamarajanagara: ಕಾರು, ಗೂಡ್ಸ್ ಲಾರಿ ಮುಖಾಮುಖಿ ಡಿಕ್ಕಿ – ಓರ್ವ ಸಜೀವ ದಹನ..!
ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಗೂಡ್ಸ್ ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಸಜೀವ ದಹನಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹಿರೀಕಾಟ ಗೇಟ್ ಸಮೀಪ ಜು.1ರಂದು ನಡೆದಿದೆ.
ಚಾಮರಾಜನಗರ: ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಗೂಡ್ಸ್ ಲಾರಿಗಳ ನಡುವೆ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಸಜೀವ ದಹನಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹಿರೀಕಾಟ ಗೇಟ್ ಸಮೀಪ ಜು.1ರಂದು ನಡೆದಿದೆ.
ಮೃತರನ್ನು ಮೈಸೂರಿನ ಮುಝಮ್ಮಿಲ್ ಅಹ್ಮದ್ (35) ಎಂದು ಗುರುತಿಸಲಾಗಿದೆ.
ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ಬರುವ ಕಾರು ಹಾಗೂ ಮೈಸೂರು ಕಡೆಗೆ ತೆರಳುತ್ತಿರುವ ಗೂಡ್ಸ್ ಲಾರಿ ವಾಹನಗಳು ಮುಖಾಮುಖಿ ಢಿಕ್ಕಿಯಾಗಿದೆ.
ಈ ವಾಹನಗಳು ಡಿಕ್ಕಿಯಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿ ಉರಿದಿದೆ.
ಬೆಂಕಿ ಕಾಣಿಸಿಕೊಂಡಾಗ ಗೂಡ್ಸ್ ವಾಹನದಲ್ಲಿದ್ದವರು ಹೊರಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಕಾರು ಚಾಲಕ ಹೊರ ಬರಲಾಗದೆ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
DAKSHINA KANNADA
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನ ಗಣಪತಿ ವಿಗ್ರಹದ ವಿಸರ್ಜನೆ
ಮಂಗಳೂರು: ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ 3ದಿನಗಳ ಕಾಲ ನಡೆದ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಗುರುವಾರ ರಾತ್ರಿ ಸಂಪನ್ನಗೊಂಡಿತು.
ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಹಯೋಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳ ಸಹಯೋಗದಲ್ಲಿ ನಡೆದ ಈ ಉತ್ಸವದ ಕೊನೆಗೆ ಶ್ರೀ ಸಿದ್ದಿವಿನಾಯಕ ದೇವರಿಗೆ ಮಹಾಪೂಜೆ ನೆರವೇರಿಸಲಾಯಿತು.
ಬಳಿಕ ಕಡೆಂಜ ಅಶೋಕ್ ಕುಮಾರ್ ಚೌಟ ಶೋಭಾಯಾತ್ರೆಯನ್ನು ಉದ್ಘಾಟಿಸಿದರು. ಚೆಂಡೆ ವಾದ್ಯ ಮೇಳ ಮತ್ತು ಭಜನಾ ಸೇವೆಗಳ ಜೊತೆಗೆ ಸಾಗಿ ಬಂದ ಶೋಭಾಯಾತ್ರೆಯು ಬಂಟ್ಸ್ ಹಾಸ್ಟೆಲ್ ನ ಹಿಂಭಾಗವಾಗಿ ಹೊರಟು ಪಿವಿಸ್ ಸರ್ಕಲ್, ನವಭಾರತ ಸರ್ಕಲ್, ಡೊಂಗರಕೇರಿ, ನ್ಯೂ ಚಿತ್ರ ಆಗಿ ಕಾರ್ ಸ್ಟ್ರೀಟ್ ಗೆ ಸಾಗಿ ಕುಡ್ತೇರಿ ಮಹಮ್ಮಾಯಿ ದೇವಸ್ಥಾನದ ಕೆರೆಗೆ ಬಂದು ಗಣಪತಿ ಮೂರ್ತಿಯ ವಿಗ್ರಹದ ವಿಸರ್ಜನೆ ಮಾಡಲಾಯಿತು.
3ಜಿಲ್ಲೆಗಳಿಂದ ಆಗಮಿಸಿದ ಬಂಟರ ಮತ್ತು ಊರ – ಪರವೂರ ಭಕ್ತರು ವೈಭವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು .
LATEST NEWS
ಸಿರಿಮನೆ ಫಾಲ್ಸ್ ಗೆ ತೆರಳುತ್ತಿದ್ದ ವಿಭಿನ್ನ ಕೋಮಿನ ಜೋಡಿಗಳನ್ನು ತಡೆದ ಹಿಂದೂ ಕಾರ್ಯಕರ್ತರು – FIR ದಾಖಲು..!
ಉಡುಪಿ: ವಿಭಿನ್ನ ಕೋಮಿನ ಜೋಡಿಗಳಿಬ್ಬರು ಜಾಲಿ ರೈಡ್ ಗೆ ತೆರಳಿದ್ದಾಗ ಜೋಡಿಗಳನ್ನು ತಡೆದು ನಿಲ್ಲಿಸಿದ ಸಂಘ ಪರಿವಾರದ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿ ನಡೆಸಿರುವ ವಿಡಿಯೊವೊಂದು ವೈರಲ್ ಆಗಿದೆ.
ಕಳೆದ ಎರಡು ತಿಂಗಳ ಹಿಂದೆ ಜೋಡಿಗಳಿಬ್ಬರು ಅಗುಂಬೆಯ ಸಿರಿಮನೆ ಫಾಲ್ಸ್ ಗೆ ತೆರಳಿದ್ದರು.
ಇವರಿಬ್ಬರು ವಿಭಿನ್ನ ಕೋಮಿನವರೆಂದು ತಿಳಿದ ಸಂಘ ಪರಿವಾರದ ಕಾರ್ಯಕರ್ತರು ಶೃಂಗೇರಿ ಬಳಿ ಅಡ್ಡ ಹಾಕಿ ಅನೈತಿಕ ಪೊಲೀಸ್ ಗಿರಿ ನಡೆಸಿದ್ದರು.
ಬಳಿಕ ಇಬ್ಬರ ವಿಡಿಯೋ ಚಿತ್ರೀಕರಣ ಮಾಡಿದ್ದರು.
ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಯುವತಿಯ ಸಹೋದರ ಅನೈತಿಕ ಪೊಲೀಸ್ ಹಾಗೂ ವಿಡಿಯೋ ಆಗಿರುವುದರ ಕುರಿತಾಗಿ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ.
DAKSHINA KANNADA
ಹಿಂದೂ ನಾಯಕರ ಫೇಸ್ಬುಕ್ ಅಕೌಂಟ್ ಹ್ಯಾಕ್- ಶ್ರೀಕಾಂತ್ ಶೆಟ್ಟಿ ಆರೋಪ..!
ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್ ಖಾತೆಗಳನ್ನು ನಿಷ್ಕ್ರೀಯಗೊಳಿಸಿದಕ್ಕೆ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿ: ಹಿಂದೂ ಜಾಗರಣ ವೇದಿಕೆಯ ಕರ್ನಾಟಕದ ಕೆಲವು ನಾಯಕರ ಫೇಸ್ಬುಕ್ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ.
ಆದರೆ ಇದನ್ನು ಸ್ವತಃ ಫೇಸ್ಬುಕ್ ಸಂಸ್ಥೆಯೇ ನಿಷ್ಕ್ರೀಯಗೊಳಿಸಿದೆಯೋ ಅಥವಾ ಯಾರದ್ದೋ ದೂರಿನ ಆಧಾರದಲ್ಲಿ ನಿಷ್ಕ್ರೀಯಗೊಳಿಸಲಾಗಿದೆಯೋ ಎನ್ನುವುದು ತಿಳಿದು ಬಂದಿಲ್ಲ.
ಆದರೆ ಇದು ಹಿಂದೂ ವಿಚಾರಧಾರೆಯ ಪ್ರಚಾರ ಮತ್ತು ಹೋರಾಟ ನಡೆಸುತ್ತಿರುವವರ ಮೇಲೆ ನಡೆದ ವ್ಯವಸ್ಥಿತ ಸೈಬರ್ ದಾಳಿಯಾಗಿದೆ ಎಂದು ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಆರೋಪಿಸಿದ್ದಾರೆ.
ಸ್ವತಃ ಶ್ರೀಕಾಂತ್ ಶೆಟ್ಟಿ ಸಂಘಟನೆಯ ಇತರ ಪ್ರಚಾರಕರಾದ ಪ್ರವೀಣ್ ಯಕ್ಷಮಠ, ಕೆ ಟಿ ಉಲ್ಲಾಸ್, ಸುಕೃತ್ ಭಾರದ್ವಾಜ್, ಅರವಿಂದ ಕೋಟೇಶ್ವರ ಮೊದಲಾದ 20ಕ್ಕೂ ಹೆಚ್ಚು ಮಂದಿಯ ಫೇಸ್ಬುಕ್ ಪೇಜ್‌ಗಳನ್ನು ಡಿಲಿಟ್ ಮಾಡಲಾಗಿದೆ.
ನಾವು ಯಾರೂ ಸಾಮಾಜಿಕ ಸಾಮರಸ್ಯವನ್ನು ಕೆಡಿಸಿಲ್ಲ. ಗಲಭೆ ಸೃಷ್ಟಿಸಿಲ್ಲ. ಕೇವಲ ಹಿಂದೂಪರ ಹೋರಾಟ ಮಾಡುತ್ತಿರುವವರು.
ಆದ್ದರಿಂದ ಹಿಂದೂ ಚಳುವಳಿಯಲ್ಲಿ ಭಾಗವಹಿಸುತ್ತಿರುವವರನ್ನು ಹತ್ತಿಕ್ಕುವ ಹುನ್ನಾರ ಇದು ಎನ್ನುವುದು ಸಾಬೀತಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿರುವ ಕೆಲಸ ಇದು.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದೂವಾದಿ ಸಂಗಟನೆಳು ಮೋದಿ ಪರವಾಗಿ ಯಶಸ್ವಿ ಕೆಲಸ ಮಾಡಿದ್ದೆವು.
2024ರ ಚುನಾವಣೆಯಲ್ಲಿ ಮತ್ತೇ ಅದಾಗಬಾರದು ಎನ್ನುವ ಪೂರ್ವ ತಯಾರಿ ಇದಾಗಿದೆ ಎಂದವರು ಹೇಳಿದ್ದಾರೆ.
ಆದರೆ ಆರ್‌ಎಸ್‌ಎಸ್‌ನ ಭಾಗವಾಗಿರುವ ಹಿಂದು ಜಾಗರಣ ವೇದಿಕೆ ಸಾಮಾಜಿಕ ಜಾಲತಾಣಗಳನ್ನು ನಂಬಿಕೊಂಡಿರುವ ಫೇಸ್ಬುಕ್ ಉಳಿಯಲ್ಲ.
ಆನ್ ಗ್ರೌಂಡ್ ಜನರ ಮಧ್ಯೆ ಕೆಲಸ ಮಾಡವ ವೇದಿಕೆ.
ಈ ಫೇಸ್ಬುಕ್ ಖಾತೆಗಳ ನಿಷ್ಕ್ರೀಯ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
- FILM6 days ago
‘ಜವಾನ್’ ಶಾಕಿಂಗ್ ಕಲೆಕ್ಷನ್ – ಕೇವಲ 7 ದಿನಗಳಲ್ಲಿ ವಿಶ್ವದಾದ್ಯಂತ 700 ಕೋಟಿ..!
- LATEST NEWS6 days ago
“ಕಚೇರಿ ವೇಳೆಯಲ್ಲಿ ಗಂಟೆ ಗಟ್ಟಲೆ ಕಾಫಿ, ಟೀಗೆ ಹೋಗುವ ಸರ್ಕಾರಿ ನೌಕರರ ವಿರುದ್ದ ಕಠಿಣ ಕ್ರಮ”
- FILM6 days ago
ಸೈಮಾ 2023-ಅತೀ ಹೆಚ್ಚು ಪ್ರಶಸ್ತಿ ಗೆದ್ದು ಬೀಗಿದ ಕನ್ನಡದ “ಕಾಂತಾರ”
- bangalore6 days ago
ಮುಂದಿನ ವಾರವೇ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್- ರಿಲೀಸ್ ಡೇಟ್?