Connect with us

bengaluru

ಚೈತ್ರಾ ಅಂಡ್ ಗ್ಯಾಂಗ್ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ..!

Published

on

ಬೆಂಗಳೂರು: ಹೊಟೇಲ್‌ ಉದ್ಯಮಿ ಗೋವಿಂದ ಬಾಬು ಪೂಜಾರಿ ಬಿಜೆಪಿಯಿಂದ ಟಿಕೆಟ್‌ಗಾಗಿ ದುಂಬಾಲು ಬಿದ್ದರಿಂದ ಗಗನ್‌ ಕಡೂರು ಹಾಗೂ ತಾನು ಸೇರಿಯೇ ಟಿಕೆಟ್‌ ಕೊಡಿಸುವುದಾಗಿ ಕೋಟ್ಯಂತರ ರೂ. ಪಡೆದೆವು. ಆದರೆ. ಟಿಕೆಟ್‌ ಕೊಡಿಸಲು ಸಾಧ್ಯವಾಗಿಲ್ಲ. ಹಣ ವಾಪಸ್‌ ಕೊಡಲೂ ಆಗಲಿಲ್ಲ .. ಹೀಗೆಂದು, ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್‌ ಕೊಡಿಸುವುದಾಗಿ ಉಡುಪಿ ಮೂಲದ ಉದ್ಯಮಿ ಗೋವಿಂದಬಾಬು ಪೂಜಾರಿಯಿಂದ 5 ಕೋಟಿ ರೂ. ಪಡೆದು ವಂಚಿಸಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ, ಗಗನ್‌ ಕಡೂರು ಹಾಗೂ ಅವರ ತಂಡದ ವಿರುದ್ಧ ಸಿಸಿಬಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಸಿಬಿ ಪೊಲೀಸರು ಪ್ರಕರಣದ ಎಂಟು ಮಂದಿ ವಿರುದ್ಧ 75 ಸಾಕ್ಷಿದಾರರ ಹೇಳಿಕೆ, ಡಿಜಿಟಲ್ , ಪ್ರಾಥಮಿಕ‌, ಸಾಂದರ್ಭಿಕ ಸಾಕ್ಷ್ಯಗಳು ಒಳಗೊಂಡಂತೆ 800 ಪುಟಗಳ ಸುದೀರ್ಘ ಆರೋಪಪಟ್ಟಿಯನ್ನು 3ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಿದ್ದಾರೆ. ತನಿಖೆ ವೇಳೆ ದೂರುದಾರ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಂದ ಪಡೆಯಲಾಗಿದ್ದ ಆರೋಪಿಗಳ ಜತೆಗಿನ ಮೊಬೈಲ್‌ ಸಂಭಾಷಣೆಯ ಆಡಿಯೋ ತುಣುಕು, ಕಚೇರಿಯಲ್ಲಿನ ಸಿಸಿ ಕೆಮರಾ ದೃಶ್ಯಾವಳಿಗಳು, ಆರೋಪಿಗಳ ಮೊಬೈಲ್‌ ಚಾಟಿಂಗ್‌, ಮೊಬೈಲ್‌ ಕರೆಗಳ ಸಿಡಿಆರ್‌, ಡೇಟಾ ರಿಟ್ರೈವ್‌ ವರದಿಯನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ಕಿಂಗ್‌ಪಿನ್‌ಗಳಾದ ಚೈತ್ರಾ, ಗಗನ್‌ ಕಡೂರು ಹಾಗೂ ಇತರ ಆರೋಪಿಗಳು ವಂಚನೆ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ತನಿಖಾಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದಾರೆ.

ಅವರ ಹೇಳಿಕೆಯನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಚೈತ್ರಾ ಬಂಧನದ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ದೊಡ್ಡವರ ಹೆಸರು ಹೊರಬರಲಿದೆ ಎಂದು ಹೇಳಿ ಪ್ರಕರಣಕ್ಕೆ ತಿರುವು ನೀಡಿದ್ದಳು.ಆದರೆ, ಸಿಸಿಬಿ ಪೊಲೀಸರ ತನಿಖೆ ವೇಳೆ ಇಡೀ ಪ್ರಕರಣದಲ್ಲಿ ಚೈತ್ರಾ ಮತ್ತು ಗಗನ್‌ ಸೂತ್ರಧಾರಿಗಳು ಎಂಬುದು ಗೊತ್ತಾಗಿದೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಬಳಿ ತನಗೆ ಕೇಂದ್ರ ಬಿಜೆಪಿ ನಾಯಕರು, ಆರೆಸ್ಸೆಸ್‌ ಮುಖಂಡರು ಪರಿಚಯವಿದ್ದಾರೆ. ನಿಮಗೆ ಸುಲಭವಾಗಿ ಟಿಕೆಟ್‌ ಕೊಡಿಸುವೆ ಎಂದು 5 ಕೋಟಿ ರೂ. ಪಡೆದಿದ್ದಳು. ಚೈತ್ರಾಳ ಸೂಚನೆಯಂತೆ ಉಳಿದ ಆರೋಪಿಗಳು ಪಾತ್ರ ನಿರ್ವಹಿಸಿದ್ದಾರೆ. ಬೇರೆ ಯಾವ ದೊಡ್ಡವರು ಇಲ್ಲ ಎಂದು ಆಕೆಯೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಉದ್ಯಮಿಗೆ ವಂಚಿಸಿದ ಪ್ರಕರಣದ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ಹಾಲಶ್ರೀ ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿಯ ಪುರಸ್ಕರಿಸಿದ ನ್ಯಾ| ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

bengaluru

ಮನ್ಸಿಂದ ಯಾರೂನು ಕೆಟ್ಟೋರಲ್ಲ..ಬಿಗ್ ಬಾಸ್ ವಿನಯ್ ಕಣ್ಣೀರು

Published

on

ಬೆಂಗಳೂರು : ಬಿಗ್​ಬಾಸ್ ಮನೆಯಲ್ಲಿ ವಿನಯ್ ಅತ್ಯಂತ ಗಟ್ಟಿ ಸ್ಪರ್ಧಿ ಎಂದು ಕರೆಸಿಕೊಳ್ಳುವ ವಿನಯ್ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ಮಂಗಳವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಮಾತ್ರ ವಿನಯ್ ಕಣ್ಣೀರು ಹಾಕಿದ್ದಾರೆ.

ಮನೆಗೆ ಇಬ್ಬರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದಿದ್ದಾರೆ. ಅವರಲ್ಲಿ ಒಬ್ಬರಾದ ಪವಿ ಪೂವಪ್ಪ ಅವರು ಸ್ನೇಹಿತ್, ವಿನಯ್ ಜೊತೆ ಮಾತನಾಡುತ್ತಿದ್ದಾಗ ಸ್ನೇಹಿತ್ ಬಿಗ್​ಬಾಸ್ ಮನೆಯ ಸ್ಪರ್ಧಿಗಳ ಬಗ್ಗೆ ಹೊರಗಿರುವ ಅಭಿಪ್ರಯಾದ ಬಗ್ಗೆ ತಿಳಿಸುವಂತೆ ಹೇಳ್ತಾರೆ.ಆಗ ಪವಿ ಬಳೆಯ ಎಪಿಸೋಡ್ ಭಾರಿ ಸದ್ದು ಮಾಡಿತು ಎಂದರು.ಆ ವಿಷಯ ಸೋಷಿಯಲ್ ಮೀಡಿಯಾಗಳಲ್ಲಿ ಬಹಳ ಚರ್ಚೆಯಾಯಿತು ಎಂದು ಸಹ ಹೇಳಿದರು.

ಇದರಿಂದಾಗಿ ವಿನಯ್‌ ತೀರಾ ಡಲ್‌ ಆಗ್ಬಿಟ್ಟರು. ಬಾತ್‌ರೂಮ್‌ ಒಳಗೆ ಹೋಗಿ ವಿನಯ್ ಗಳಗಳನೆ ಅತ್ತುಬಿಟ್ಟರು. ಬಳಿಕ ‘ಬಿಗ್ ಬಾಸ್‌’ ಬಳಿ ಮಾತನಾಡಿದ್ಮೇಲೆ ವಿನಯ್ ಸಮಾಧಾನಗೊಂಡರು.

Continue Reading

bangalore

ಕ್ಷೀಣಿಸುತ್ತಿದೆ ಹಿರಿಯ ನಟಿ ಲೀಲಾವತಿ ಆರೋಗ್ಯ-ಡಿಕೆಶಿ, ನಟ ಶಿವಣ್ಣ ಆರೋಗ್ಯ ವಿಚಾರಣೆ

Published

on

ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದು ಅವರ ಆರೋಗ್ಯ ವಿಚಾರಿಸುವುದಕ್ಕಾಗಿ ಅನೇಕ ನಟ ನಟಿಯರು ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.ಜೊತೆಗೆ ನಿನ್ನೆ ನಟ ಶಿವಣ್ಣ ದಂಪತಿ ಕೂಡ ಮನೆಗೆ ಭೆಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.


ಮನೆಗೆ ಆಗಮಿಸಿದ ಶಿವಣ್ಣ ಅವರನ್ನು ವಿನೋದ್‌ ರಾಜ್‌ಕುಮಾರ್‌ ಹೆಚ್ಚು ಆತ್ಮೀಯವಾಗಿ ಬರಮಾಡಿಕೊಂಡು ತಾಯಿಯ ಆರೋಗ್ಯದ ಕುರಿತು ವಿವರಣೆ ನೀಡಿದ್ದಾರೆ..


ಇನ್ನು ಮೊನ್ನೆಯಷ್ಟೇ ನಟ ಅರ್ಜುನ್‌ ಸರ್ಜಾ ಲೀಲಾವತಿ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಸಿದ್ದರು.. ಅಲ್ಲದೇ ದರ್ಶನ್‌ ಸಹ ಅವರ ಮನೆಗೆ ಭೇಟಿ ನೀಡಿದ್ದರು.. ಡಿಕೆಶಿ ಕೂಡ ಆರೋಗ್ಯ  ವಿಚಾರಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಅನೇಕ ಕಲಾವಿದರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಯಲ್ಲಿನ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ..

Continue Reading

bangalore

ನ. 29ಕ್ಕೆ ಮಳೆ ಹುಡುಗಿ ಪೂಜಾ ಗಾಂಧಿ ಮದುವೆ…

Published

on

ಬೆಂಗಳೂರು : ಮಳೆ ಹುಡುಗಿ ಪೂಜಾ ಗಾಂಧಿ ಕೊನೆಗೂ ಮದುವೆ ಆಗುತ್ತಿದ್ದಾರೆ. ಬಹು ದಿನಗಳ ಗೆಳೆಯ ಉದ್ಯಮಿ ವಿಜಯ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ, ಮಕ್ಕಳು, ಸಂಸಾರ ಅನ್ನುವ ವಿಚಾರದ ಬಗ್ಗೆ ಪೂಜಾ ಯೋಚನೆ ಮಾಡಿದ್ದರು. ಆದರೆ ಅದು ಈಗಲೇ ಅಲ್ಲ ಅನ್ನುವ ಮಾತನ್ನು ಹೇಳಿಕೊಳ್ಳುತ್ತಿದ್ದರು. ಅದರ ಮಧ್ಯೆ ಆನಂದ್ ಗೌಡ ಜೊತೆಗೆ ನಿಶ್ಚಿತಾರ್ಥವೂ ಆಗಿತ್ತು. ಅದು ಅಷ್ಟೇ ಬೇಗ ಮುರಿದು ಬಿತ್ತು. ಆದರೆ ಇದೀಗ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡಲು ಡಿಸೈಡ್ ಮಾಡಿದ್ದಾರೆ.


ಇದೇ ನವೆಂಬರ್ 29ರಂದು ಬೆಂಗಳೂರಿನ ಯಲಂಹಕದ ಸಮೀಪ ನಟಿ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವಿಶೇಷ ಅಂದರೆ, ಮಂತ್ರ ಮಾಂಗಲ್ಯ ಪದ್ಧತಿಯ ಪ್ರಕಾರ ಈ ಮದುವೆ ನಡೆಯಲಿದೆ ಎಂದು ವರದಿಯಾಗಿದೆ.ಪೂಜಾಗಾಂಧಿ ಮೂಲತ: ಉತ್ತರ ಪ್ರದೇಶದ ಮೀರತ್‌ನವರು. ಪಂಜಾಬಿ ಕುಟುಂಬದಲ್ಲಿ ಜನಿಸಿದ್ದ ಪೂಜಾ ಗಾಂಧಿ ದೆಹಲಿಯಲ್ಲಿ ನೆಲೆಸಿದ್ದರು. ಜಾಹೀತಾರು ಹಾಗೂ ಮಾಡಲಿಂಗ್ ಮೂಲಕ ಜನಪ್ರಿಯರಾಗಿದ್ದ ನಟಿ ‘ಮುಂಗಾರು ಮಳೆ’ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದರು. ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಒಂದರ ಹಿಂದೊಂದರಂತೆ ಯಶಸ್ಸು ಇವರನ್ನು ಹಿಂಬಾಲಿಸಿಕೊಂಡು ಬಂದಿತ್ತು.


2012ರಲ್ಲಿ ಪೂಜಾ ಗಾಂಧಿ ಅವರಿಗೆ ಉದ್ಯಮಿ ಆನಂದ್ ಗೌಡ ಜತೆ ನಿಶ್ಚಿತಾರ್ಥವಾಗಿ, ನಂತರ ಮುರಿದು ಬಿದ್ದಿತ್ತು. ಆದರೆ, ಈಗ ಹರಿದಾಡುತ್ತಿರುವ ಮದುವೆ ವಿಷಯದ ಬಗ್ಗೆ ನಟಿ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.ಕನ್ನಡವನ್ನು ಕಲಿತು ಕನ್ನಡಿಗರಿಂದ ಬೇಷ್ ಎನಿಸಿಕೊಂಡಿರೋ ಮುಂಗಾರು ಮಳೆ ಬೆಡಗಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಮದುವೆಗೆ ರೆಡಿ ಆಗಿದ್ದಾರೆ. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಕರ್ನಾಟಕದ ಸೊಸೆ ಆಗಲು ಪೂಜಾ ಸಿದ್ಧವಾಗುತ್ತಿದ್ದಾರೆ ಎನ್ನಲಾಗಿದೆ

Continue Reading

LATEST NEWS

Trending