Monday, January 24, 2022

ಮಂಗಳೂರು ಸಿ.ಜಿ ಕಾಮತ್‌ ರಸ್ತೆಯ ಜನರ ಕಥೆ ವ್ಯಥೆ: ‘ನಾವು ಓಟು ಹಾಕಲ್ಲ’ ಎಂದದ್ದು ಯಾರಿಗೆ?

ಮಂಗಳೂರು: ಮಂಗಳೂರು ನಗರ ಸ್ಮಾರ್ಟ್‌ ಸಿಟಿ ಹೆಸರಲ್ಲಿ ಸ್ಮಾರ್ಟ್‌ ಆಗುತ್ತಿದೆ. ಆದರೆ ಅಲ್ಲಲ್ಲಿ ಅಗೆದು ಹಾಕುವ ಕೆಲಸ ಮಾತ್ರ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಅದರ ಬಗ್ಗೆ ‘ನಮ್ಮ ಕುಡ್ಲ’ ನಡೆಸಿದ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ನಗರದ ಕರಂಗಲ್ಪಾಡಿ ವಾರ್ಡ್‌ನ ಸಿ.ಜಿ ಕಾಮತ್‌ ರಸ್ತೆಯು ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ತಿಂಗಳುಗಟ್ಟಲೆ ಅಗೆದು ಹಾಕಿದ್ದಾರೆ. ಇದರಲ್ಲಿ ಒಂದಷ್ಟು ತಿಂಗಳು ಡ್ರೈನೇಜ್‌ ವ್ಯವಸ್ಥೆ ಸರಿಪಡಿಸುವ ಹೆಸರಿನಲ್ಲಿ ಮತ್ತಷ್ಟು ದಿನ ಗ್ಯಾಸ್‌ ಪೈಪ್‌ಲೈನ್‌ ಹೆಸರಲ್ಲಿ ಇದೀಗ ಕುಡಿಯುವ ನೀರಿನ ಪೈಪ್‌ನ ಹೆಸರಲ್ಲಿ

ರಸ್ತೆ ಪೂರ್ತಿ ಅಗೆದು ಹಾಕಿದ್ದಾರೆ. ಈ ಭಾಗದಲ್ಲಿ ಹೆಚ್ಚಾಗಿ ಹಿರಿಯ ನಾಗರೀಕರು ವಾಸಿಸುತ್ತಿದ್ದಾರೆ. ಅದರಲ್ಲೂ 70 ವರ್ಷ ಕಳೆದ ಹಿರಿಯ ನಾಗರಿಕರು ಪರಿಪಾಟಲು ಪಡುವ ಯಾತನೆ ಯಾರಿಗೂ ಬೇಕಾಗಿಲ್ಲ ಎನ್ನುತ್ತಿದ್ದಾರೆ.


ಜೈಲು ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಖಾಸಾಗಿ ಕಾಲೇಜು, ಕಾರಾಗೃಹ, ಪಶು ಸಂಗೋಪನಾ ಇಲಾಖೆ, ಡಯಟ್ ಸಂಸ್ಥೆಗಳಿಗೆ ಬರುವವರ ಪಾಡು ಯಾರಿಗೂ ಬೇಡ. ಇಲ್ಲಿ ಜೀವ ಕೈಯಟ್ಟು ನಡೆದಾಡಬೇಕಾದ ಪರಿಸ್ಥಿತಿ.

ಸ್ವಲ್ಪ ಯಾಮಾರಿದರೂ ಕೈ ಕಾಲು ಮೂಳೆ ಮುರಿತ ತಪ್ಪದಲ್ಲಿ ಜೀವವೇ ಕಳಕೊಳ್ಳುವ ಪರಿಸ್ಥಿತಿ. ಹಿರಿಯ ನಾಗರಿಕರು ಮತ್ತು ಪ್ರಜ್ಞಾವಂತ ನಾಗರಿಕರೇ ಹೆಚ್ಚಾಗಿರುವ ಸಿ.ಜಿ ಕಾಮತ್ ರಸ್ತೆಯ ಪರಿಸರವಂತೂ ದ್ವೀಪ ಪ್ರದೇಶವಾಗಿದ್ದು ಇಲ್ಲಿಯವರ ಬವಣೆ ಹೇಳತೀರದಾಗಿದೆ.

ಶ್ವಾಸ ಸಂಬಂಧಿತ ಕಾಯಿಲೆಗೆ ತುತ್ತಾಗುವ ಭಯ
ಇಲ್ಲಿ ಕೆಲಸ ಮಾಡುವ ಕೆಲಸಗಾರರು ಕಾಟಚಾರಕ್ಕೆ ಕೆಲಸ ಮಾಡುತ್ತಾರೆ. ಒಂದು ದಿನ ಬಂದು ರಸ್ತೆ ಅಗೆದು ಹಾಕುತ್ತಾರೆ. ಮತ್ತೆ ಆ ಕಡೆ ತಲೆ ಹಾಕಿ ಸಹ ನೋಡುವುದಿಲ್ಲ.

ಇವರ ಈ ಕೆಲಸದಿಂದ ನಮಗೆ ಎಷ್ಟೋ ದಿನ ಕುಡಿಯುವ ನೀರು ಬರುತ್ತಿರಲಿಲ್ಲ. ಇನ್ನು ಧೂಳಿನ ಕಾಟದಿಂದ ಇಲ್ಲಿನ ಹಿರಿಯ ನಾಗರಿಕರು ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾಗುವ ಭಯ ವ್ಯಕ್ತಪಡಿಸಿದ್ದಾರೆ.

ಇನ್ನು ಮನಪಾದ ಕಸದ ಗಾಡಿಗಳು ರಸ್ತೆ ಸರಿ ಇಲ್ಲವಾದ್ದರಿಂದ ಈ ಕಡೆ ಬರುತ್ತಿರಲಿಲ್ಲ. ಹಾಗಾಗಿ ಅಲ್ಲಲ್ಲಿ ಕಸ ರಾಶಿ ಬಿದ್ದಿದೆ. ಇಂತಹ ಕಷ್ಟಗಳನ್ನು ನಾವು ಯಾರ ಬಳಿ ಹೇಳಬೇಕು ಎಂಬ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.

ಅಗೆದು ಹಾಕಿದ ನೀರಿನ ಪೈಪ್‌ ಸರಿಮಾಡುತ್ತಿರಲಿಲ್ಲ. ಆಗ  ನಾವೇ ಕೂಲಿಯಾಳುಗಳನ್ನು ತರಿಸಿ ನೀರಿನ ಪೈಪ್‌ ಸರಿ ಮಾಡಿಸಿದ್ದೇವೆ ಎಂದು ಅಲವತ್ತುಕೊಂಡಿದ್ದಾರೆ.

ಕಾರ್ಪೋರೇಟರ್‌ಗೆ ಇನ್ಮುಂದೆ ಓಟು ಹಾಕಲ್ಲ

ಈ ಬಗ್ಗೆ ಮೇಯರ್‌ಗೆ ಎಷ್ಟೋ ಬಾರಿ ದೂರು ನೀಡಿದ್ದೇವೆ ಅವರು ಸ್ಪಂದಿಸಿದ್ದಾರೆ. ಆದರೆ ಪ್ರತೀ ಬಾರಿ ಅವರ ಬಳಿ ಹೇಳುವುದು ಎಷ್ಟು ಸರಿ? ಈ ಭಾಗದ ಶಾಸಕರಿಗೂ ದೂರು ನೀಡಿದ್ದೆವು ಅವರೂ ಸಹ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ.

ಆದರೆ ಸ್ಥಳೀಯ ಕಾರ್ಪೋರೇಟರ್‌ ಲೀಲಾವತಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಸ್ಮಾರ್ಟ್ ಸಿಟಿ, ಸ್ಮಾರ್ಟ್ ಸಿಟಿ ಅಂತೀರಾ ಇದೇನಾ ನಿಮ್ಮ ಸ್ಮಾರ್ಟ್‌ನೆಸ್‌ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಮಹಿಳೆಯೊಬ್ಬರು ಈ ರಸ್ತೆಗೆ ಅಗತ್ಯಬಿದ್ದಾಗ ಅಂಬುಲೆನ್ಸ್‌ ಬರುತ್ತಿಲ್ಲ.

ನನ್ನ ಗಂಡ ಸೊಳ್ಳೆಯಿಂದ ಮಲೇರಿಯಾ ಆಗಿ ತೀರಿಕೊಂಡಿದ್ದಾರೆ ಎಂದು ಅಸಹಾಯ ಕತೆಯ ಮಾತು ಆಡಿದ್ದಾರೆ. ನಮ್ಮ ಕಾರ್ಪೋರೇಟರ್‌ ಏನು ಪ್ರಯೋಜನವಿಲ್ಲ. ಅವಳಿಗೆ ನಾವು ಓಟು ಹಾಕಲ್ಲ ಎಂದು ನಮ್ಮ ಕುಡ್ಲ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Hot Topics

ಕಿನ್ನಿಗೋಳಿ ಶಾಂಭವಿ ನದಿಯಲ್ಲಿನ ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ..!

ಮಂಗಳೂರು : ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಮಂಗಳೂರು ಗಣಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಇಲ್ಲಿನ ಶಾಂಭವಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...

ಮುಡಿಪು: ದ್ವಿಚಕ್ರ ವಾಹನಕ್ಕೆ ಒಂದೇ ತಿಂಗಳಲ್ಲಿ ಬರೋಬ್ಬರಿ 9 ಸಾವಿರ ಟ್ರಾಫಿಕ್ ಫೈನ್-ಬೆಚ್ಚಿಬಿದ್ದ ಮಾಲಕಿ

ಮುಡಿಪು: ಮೆಡಿಕಲ್ ಸ್ಟೋರ್ ಒಂದರ ಎದುರುಗಡೆ ನಿಲ್ಲಿಸಿದ್ದ ಒಂದೇ ದ್ವಿಚಕ್ರ ವಾಹನಕ್ಕೆ ಪೊಲೀಸರು ಒಂದೇ ತಿಂಗಳಲ್ಲಿ ಒಂಭತ್ತು ಸಾವಿರ ದಂಡ ವಿಧಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ‌ ನಡೆದಿದೆ.ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಜೀವಿನಿ ಆಯುರ್ವೇದ ಮಡಿಕಲ್...