Monday, January 24, 2022

ನಾವು ಕೇವಲ ಸರ್ಕಾರ ಅಲ್ಲ ಅಧಿಕಾರಿಗಳನ್ನೂ ಟಾರ್ಗೆಟ್ ಮಾಡ್ತೇವೆ: ಡಿಕೆಶಿ

ಬೆಂಗಳೂರು: ಅಧಿಕಾರಿಗಳು ಕೊರೋನಾ ನಿಯಮ ಉಲ್ಲಂಘನೆ ಹೆಸರಲ್ಲಿ ನಮ್ಮ ವಿರುದ್ಧ ಮಾತ್ರ ಪ್ರಕರಣ ದಾಖಲು ಮಾಡಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಏಕೆ ಪ್ರಕರಣ ದಾಖಲು ಮಾಡಿಲ್ಲ. ನಾವು ಕೇವಲ ಸರ್ಕಾರ ಅಲ್ಲ ಅಧಿಕಾರಿಗಳನ್ನೂ ಟಾರ್ಗೆಟ್ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ.


ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾವು ಕೋರ್ಟ್‌ನಲ್ಲಿ ಈ ಬಗ್ಗೆಯೂ ಹೋರಾಡುತ್ತೇವೆ. ಕೇವಲ ಸರ್ಕಾರ ಅಲ್ಲ ಅಧಿಕಾರಿಗಳನ್ನ ಟಾರ್ಗೆಟ್ ಮಾಡ್ತೇವೆ.

ಸರ್ಕಾರ ಎಚ್ಚೆತ್ತು ಎಲ್ಲರನ್ನೂ ಸಮನಾಗಿ ನೋಡದಿದ್ರೆ ಸರಿ ಇರಲ್ಲ ಎಂದ ಅವರು ಈಗ ಅದ್ಯಾವುದೋ ಹಳೇ ಹಳೇ ಕೇಸ್ ಓಪನ್ ಮಾಡಿದ್ದಾರೆ. ಆ ಕಾಲ ಬಂದೇ ಬರುತ್ತೆ.

ನನ್ನ ಮೇಲೆ ಏನೇನು ಬೇಕೋ ಎಲ್ಲವನ್ನ ಮಾಡ್ತಾ ಇದ್ದಾರೆ. ಐಟಿ, ಇಡಿ ಸೇರಿ ಎಲ್ಲದರ ಬಗ್ಗೆ ಸಾಕ್ಷಿ ಸಮೇತ ಮಾತನಾಡುವೆ. ಏನೇನು ತೊಂದರೆ ಕೊಡಬೇಕೋ ಕೊಡ್ತಾ ಇದ್ದಾರೆ ಅಂತ ಡಿಕೆಶಿ ಹೇಳಿದರು.

ಪಾದಯಾತ್ರೆಯಲ್ಲಿ ಭಾಗವಹಿಸಿದ ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪೊಲೀಸರು ಕೆಲಸವೇ ಮಾಡಿಲ್ಲ. ನಮ್ಮ ಕಾರ್ಯಕರ್ತರೇ ನಮಗೆ ಭದ್ರತೆಯನ್ನು ನೀಡಿದ್ದರು ಅಂತ ಹೇಳಿದರು.

Hot Topics

ಮುಡಿಪು: ದ್ವಿಚಕ್ರ ವಾಹನಕ್ಕೆ ಒಂದೇ ತಿಂಗಳಲ್ಲಿ ಬರೋಬ್ಬರಿ 9 ಸಾವಿರ ಟ್ರಾಫಿಕ್ ಫೈನ್-ಬೆಚ್ಚಿಬಿದ್ದ ಮಾಲಕಿ

ಮುಡಿಪು: ಮೆಡಿಕಲ್ ಸ್ಟೋರ್ ಒಂದರ ಎದುರುಗಡೆ ನಿಲ್ಲಿಸಿದ್ದ ಒಂದೇ ದ್ವಿಚಕ್ರ ವಾಹನಕ್ಕೆ ಪೊಲೀಸರು ಒಂದೇ ತಿಂಗಳಲ್ಲಿ ಒಂಭತ್ತು ಸಾವಿರ ದಂಡ ವಿಧಿಸಿರುವ ಘಟನೆ ಮುಡಿಪು ಜಂಕ್ಷನ್‌ನಲ್ಲಿ‌ ನಡೆದಿದೆ.ಗಣೇಶ್ ಕಾಂಪ್ಲೆಕ್ಸ್‌ನಲ್ಲಿರುವ ಸಂಜೀವಿನಿ ಆಯುರ್ವೇದ ಮಡಿಕಲ್...

ಕುಂಪಲ: ಪ್ರಯಾಣಿಕರನ್ನು ಇಳಿಸುವ ವೇಳೆ ಖಾಸಗಿ ಸಿಟಿ ಬಸ್‌ಗಳ ಢಿಕ್ಕಿ

ಮಂಗಳೂರು: ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರನ್ನು ಇಳಿಸುವ ಸಂದರ್ಭ ಬಸ್‌ಗೆ ಮತ್ತೊಂದು ಬಸ್‌ ಢಿಕ್ಕಿ ಹೊಡೆದ ಘಟನೆ ಉಳ್ಳಾಲ ಕುಂಪಲದ ಬೈಪಾಸ್ ಬಸ್ಸು ತಂಗುದಾಣದಲ್ಲಿ ಇಂದು ನಡೆದಿದೆ.ಕುಂಪಲದಿಂದ ಮಂಗಳೂರು ಕಡೆಗೆ ಸಾಗುವ ಖಾಸಗಿ ಸಿಟಿ...

ಮೂಡುಬಿದಿರೆ: ಕಾರು ಢಿಕ್ಕಿ- ಪಾದಾಚಾರಿ ಸ್ಥಳದಲ್ಲೇ ಮೃತ್ಯು

ಮೂಡುಬಿದಿರೆ: ಇಲ್ಲಿನ ಕಲ್ಲಮುಂಡ್ಕೂರು ಪೇಟೆಯ ರಸ್ತೆಯಲ್ಲಿ ಪಾದಾಚಾರಿಯೋರ್ವರು ಹೋಗುತ್ತಿದ್ದಾಗ ರಿಡ್ಸ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಸಂಪಿಗೆಯ ಇಡ್ಡಬೆಟ್ಟು ನಿವಾಸಿ 53 ವರ್ಷದ ಹರೀಶ್...