Connect with us

MANGALORE

ಸಿಇಟಿ ಪರೀಕ್ಷೆ: ಎಕ್ಸ್‌ಪರ್ಟ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ಅಮೋಘ ಸಾಧನೆ

Published

on

ಮಂಗಳೂರು: ನಗರದ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯ ವಿಭಿನ್ನ ವಿಭಾಗಗಳ ಮೊದಲ 10 ರ‍್ಯಾಂಕ್‍ಗಳಲ್ಲಿ ಎರಡನ್ನು ತಮ್ಮದಾಗಿಸಿಕೊಂಡಿದ್ದಾರೆ.


ಮೊದಲ 50ರಲ್ಲಿ 20 ರ‍್ಯಾಂಕ್‍ ಹಾಗೂ 100ರಲ್ಲಿ 49 ರ‍್ಯಾಂಕ್‍ಗಳು ಎಕ್ಸ್‌ಪರ್ಟ್‍ ವಿದ್ಯಾರ್ಥಿಗಳ ಪಾಲಾಗಿವೆ. ಅದಿತ್ಯ ಕಾಮತ್ ಅಮ್ಮೆಂಬಳ ಅವರು ಬಿಎನ್‍ವೈಎಸ್‍ನಲ್ಲಿ 7,

ಪಶು ವೈದ್ಯಕೀಯದಲ್ಲಿ 17, ಬಿ ಫಾರ್ಮಾದಲ್ಲಿ 34ನೇ ರ‍್ಯಾಂಕ್‌ ಗಳಿಸಿದ್ದು ಪ್ರಣವ್ ಎಸ್ ಅವರು ಬಿಎನ್‍ವೈಎಸ್‍ನಲ್ಲಿ 10, ಪಶುವೈದ್ಯಕೀಯದಲ್ಲಿ 14, ಬಿ ಫಾರ್ಮಾದಲ್ಲಿ 18,

ಕೃಷಿಯಲ್ಲಿ 60ನೇ ರ‍್ಯಾಂಕ್ ಗಳಿಸಿದ್ದಾರೆ. ಮುಹಮ್ಮದ್ ರುಮೈಜ್ ಎಂಜಿನಿಯರಿಂಗ್‍ನಲ್ಲಿ 22, ಅಮರೇಗೌಡ ಪಶುವೈದ್ಯಕೀಯದಲ್ಲಿ 23, ಬಿ ಫಾರ್ಮಾದಲ್ಲಿ 31, ಬಿಎನ್‍ವೈಎಸ್‍ನಲ್ಲಿ 53, ಕೃಷಿಯಲ್ಲಿ 61, ವೃಷಭ್ ವಿ.ಜವಳಿ ಪಶುವೈದ್ಯಕೀಯದಲ್ಲಿ 26,

ಬಿ ಫಾರ್ಮಾದಲ್ಲಿ 36, ಬಿಎನ್‍ವೈಎಸ್‍ನಲ್ಲಿ 49, ಅನುಜ್ಞಾ ಕೆ ಬಿಎನ್‍ವೈಎಸ್‍ನಲ್ಲಿ 29, ಕೃಷಿಯಲ್ಲಿ 59, ಪಶುವೈದ್ಯಕೀಯದಲ್ಲಿ 62, ಬಿ ಫಾರ್ಮಾದಲ್ಲಿ 95, ಸ್ಕಂದ ಶಾನಭಾಗ್ ಪಶುವೈದ್ಯಕೀಯದಲ್ಲಿ 29, ಬಿ ಫಾರ್ಮಾದಲ್ಲಿ 35, ಕೃಷಿಯಲ್ಲಿ 97,

ಪವನ್ ಎಸ್. ಧೂಳಶೆಟ್ಟಿ ಕೃಷಿಯಲ್ಲಿ 30, ಬಿಎನ್‍ವೈಎಸ್‍ನಲ್ಲಿ 68, ಪಶುವೈದ್ಯಕೀಯದಲ್ಲಿ 91, ವಿಶಾಲ್ ಎಸ್. ಕೃಷಿಯಲ್ಲಿ 39, ಸಾತ್ವಿಕ್ ಎ.ಎಸ್. ಕೃಷಿಯಲ್ಲಿ 40, ಪಶುವೈದ್ಯಕೀಯದಲ್ಲಿ 50, ಬಿಎನ್‍ವೈಎಸ್‍ನಲ್ಲಿ 52, ಬಿ ಫಾರ್ಮಾದಲ್ಲಿ 59ನೇ ರ‍್ಯಾಂಕ್ ಗಳಿಸಿದ್ದಾರೆ.
ಸ್ನೇಹಲ್ ಮಹಿಮಾ ಕ್ಯಾಸ್ಟಲಿನೊ ಕೃಷಿಯಲ್ಲಿ 44, ಬಿಎನ್‍ವೈಎಸ್‍ನಲ್ಲಿ 85, ಶ್ರೀಸಂಪತ್ ಎಸ್.ಡಿ. ಪಶುವೈದ್ಯಕೀಯದಲ್ಲಿ 49, ಬಿಎನ್‍ವೈಎಸ್‍ನಲ್ಲಿ 51, ಬಿ ಫಾರ್ಮಾದಲ್ಲಿ 60, ಅಭಿಷೇಕ್ ಬಿ. ವೈ. ಕೃಷಿಯಲ್ಲಿ 52,

ತುಬಾಚಿ ಕೃತಿಕ್ ಚನ್‍ಗೌಡ ಬಿಎನ್‍ವೈಎಸ್‍ನಲ್ಲಿ 57, ಪಶುವೈದ್ಯಕೀಯದಲ್ಲಿ 73, ಸಮರ್ಥ್ ಎಸ್. ಬೆಟಗೇರಿ ಬಿಎನ್‍ವೈಎಸ್‍ನಲ್ಲಿ 59, ಪಶುವೈದ್ಯಕೀಯದಲ್ಲಿ 65, ಬಿ ಫಾರ್ಮಾದಲ್ಲಿ 81, ನಮಿತಾ ಎನ್. ಬಿಎನ್‍ವೈಎಸ್‍ನಲ್ಲಿ 71,

ಹಿಮಾಂಶು ಎಲ್. ಕೃಷಿಯಲ್ಲಿ 72, ಸೂರ್ಯದೀಪ್ ಎಸ್. ಕೃಷಿಯಲ್ಲಿ 82, ಬಿಎನ್‍ವೈಎಸ್‍ನಲ್ಲಿ 93, ಭರತ್ ಕುಮಾರ್ ವೈ ಆರ್‌ ಕೃಷಿಯಲ್ಲಿ 84, ಯಶಸ್ವಿನಿ ಎಸ್. ಬಾಳಪ್ಪನವರ್ ಬಿಎನ್‍ವೈಎಸ್‍ನಲ್ಲಿ 87, ಪಶುವೈದ್ಯಕೀಯದಲ್ಲಿ 92, ಅಭಿ ಎಸ್. ಕುಮಾರ್ ಕೃಷಿಯಲ್ಲಿ 90, ದಿಶಾಂತ್ ಕೆ. ಪಶುವೈದ್ಯಕೀಯದಲ್ಲಿ 98ನೇ ರ‍್ಯಾಂಕ್‌ ಗಳಿಸಿದ್ದಾರೆ ಎಂದು ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

DAKSHINA KANNADA

ಮೇ 3 ರಂದು ಗಬ್ಬರ್ ಸಿಂಗ್ ತುಳು ಸಿನಿಮಾ ತೆರೆಗೆ

Published

on

ಮಂಗಳೂರು: ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ಸತೀಶ್ ಬಾರ್ಕೂರು ನಿರ್ಮಾಣದ ಗಬ್ಬರ್ ಸಿಂಗ್ ತುಳು ಚಲನ ಚಿತ್ರ ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ.

ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಗಬ್ಬರ್ ಸಿಂಗ್ ತುಳು ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಈ ಚಿತ್ರವನ್ನುಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಗಬ್ಬರ್ ಸಿಂಗ್ ಸಿನಿಮಾ ಈಗಾಗಲೇ ಮಸ್ಕತ್ ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

“ಗಬ್ಬರ್ ಸಿಂಗ್” ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದೆ. ಈ ಸಿನಿಮಾದ ಕಥೆ, ಚಿತ್ರಕಥೆ, ನಿರ್ಮಾಪಕರು ಸತೀಶ್ ಪೂಜಾರಿ ಬಾರ್ಕೂರ್ , ನಿರ್ದೇಶನದ ಜವಾಬ್ದಾರಿಯನ್ನು ಪ್ರದೀಪ್ ವಹಿಸಿದ್ದಾರೆ. ಮಧು ಸುರತ್ಕಲ್ ಸಂಭಾಷಣೆ ರಚಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಾಯಿಕೃಷ್ಣ, ಉಮೇಶ್ ಮಿಜಾರ್, ರವಿರಾಮ ಕುಂಜ, ಗಿರೀಶ್ ಎಂ. ಶೆಟ್ಟಿ ಕಟೀಲ್, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್, ಉದಯ ಆಳ್ವ ಇಡ್ಯಾ, ಸಂದೀಪ್ ಭಕ್ತ, ಕಿರಣ್ ಮಲ್ಪೆ, ಪೂರ್ಣಿಮಾ ಶೆಟ್ಟಿ, ಪವಿತ್ರ ಶೆಟ್ಟಿ,ಚಂದ್ರಹಾಸ ಶೆಟ್ಟಿ ಮಾಣಿ, ಸಂಪತ್ ಲೋಬೋ, ಆಶಾ ಶೆಟ್ಟಿ ಶಿಬರೂರು, ಲಹರಿ ಶೆಟ್ಟಿ ಪಡ್ರೆ, ಶಿಲ್ಪಾ ಶೆಟ್ಟಿ, ಭವ್ಯಾ ಶೆಟ್ಟಿ ಸುರತ್ಕಲ್ ಸಂತೋಷ್, ಚಂದ್ರಹಾಸ ಶೆಟ್ಟಿ ಕಪ್ಪೆಟ್ಟು, ಫ್ರಾಂಕಿ ಕೊಳಲಗಿರಿ, ಉಮೇಶ್ ಶೆಟ್ಟಿ ಹಾವಂಜೆ, ಬೇಬಿ ಆಧ್ಯಾ ಉಡುಪಿ ಮೊದಲಾದವರಿದ್ದಾರೆ.

ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಕಲೆ: ವೆಂಕಟೇಶ್ ಬೆಂಗಳೂರು, ಸಂಗೀತ: ಡೊಲ್ಪಿನ್ ಕೊಳಲಗಿರಿ. ಹಿನ್ನಲೆ ಸಂಗೀತ: ಕಾರ್ತಿಕ್ ಮುಲ್ಕಿ, ಸಾಹಸ: ಅಲ್ಟಿಮೆಟ್ ಶಿವ್ ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ : ಶರತ್ ಬರ್ಕೆ, ಸಹ ನಿರ್ದೇಶನ: ಪುಷ್ಪರಾಜ ರೈ, ಜಯರಾಜ್, ಸಹಾಯ: ಭಾಗ್ಯರಾಜ್ ಮಾಡಿದ್ದಾರೆ.

ಪ್ರೀಮಿಯರ್ ಶೋ

ಈಗಾಗಲೇ ಮಸ್ಕತ್, ಕತಾರ್ ಉಡುಪಿ, ಸುರತ್ಕಲ್ ನಲ್ಲಿ ಗಬ್ನರ್ ಸಿಂಗ್ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಸಾಂಸಾರಿಕ ಕತೆಯ ಜೊತೆ ಇಲ್ಲಿ ಹಾಸ್ಯವೂ ಚೆನ್ನಾಗಿ ವಕ್೯ಹೌಟ್ ಆಗಿದೆ. ನವೀನ್ ಪಡೀಲ್, ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ರವಿರಾಮ ಕುಂಜ ಇವರ ಹಾಸ್ಯ ಸಕ್ಕತ್ತಾಗಿದೆ. ಜೊತೆಗೆ ಗಿರೀಶ್ ಶೆಟ್ಟಿ ಕಟೀಲು, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್ ಮೊದಲಾದವರ ಪಾತ್ರಗಳೂ ಕೂಡಾ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು, ನಟ ಭೋಜರಾಜ ವಾಮಂಜೂರು, ಮಧು ಸುರತ್ಕಲ್, ಚಂದ್ರ ಶೇಖರ ನಾನಿಲ್ ಹಳೆಯಂಗಡಿ, ನಟ ಶರಣ್ ಶೆಟ್ಟಿ
ನಟಿ ವೆನ್ಸಿಟಾ ಇದ್ದರು.

Continue Reading

LATEST NEWS

ಹೈಟೆನ್ಶನ್‌ ವಯರ್‌ನಿಂದ ಏಣಿಗೆ ವಿದ್ಯುತ್ ಪ್ರವಹಿಸಿ ಇಲೆಕ್ಟ್ರಿಷಿಯನ್ ಸಾ*ವು!

Published

on

ಮಂಗಳೂರು: ಮಂಗಳೂರು ನಗರದ ಕಾವೂರು ಪೆಟ್ರೋಲ್ ಪಂಪ್‌ನಲ್ಲಿ ಏಣಿಯೊಂದು ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ಗಂಭೀರ ಗಾಯಗೊಂಡ ವ್ಯಕ್ತಿಯೊಬ್ಬರು ಮೃ*ತಪಟ್ಟ ಘಟನೆ ನಡೆದಿದೆ.

ಉತ್ತರ ಪ್ರದೇಶದ ವಾರಣಾಸಿ ನಿವಾಸಿ, ಕಾವೂರು ಪೆಟ್ರೋಲ್ ಪಂಪ್‌ವೊಂದರ ಸಿಬ್ಬಂದಿ ಸಂದೀಪ್ ಕುಮಾರ್ ವರ್ಮಾ (45) ಮೃ*ತಪಟ್ಟವರು.  ಕಾವೂರು ಪೆಟ್ರೋಲ್ ಪಂಪ್‌ನಲ್ಲಿ ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಇವರು ರವಿವಾರ(ಎ.28) ಕೆಲಸ ನಿಮಿತ್ತ ಏಣಿ ಕೊಂಡೊಯ್ದು ವಿದ್ಯುತ್ ಕಂಬಕ್ಕೆ ಒರಗಿಸಿಟ್ಟಿದ್ದರು. ಈ ಸಂದರ್ಭ ಹೈಟೆನ್ಷನ್ ವಯರ್‌ನಿಂದ ವಿದ್ಯುತ್ ಪ್ರವಹಿಸಿ ಸಂದೀಪ್ ಕುಮಾರ್ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ  ಮೃ*ತಪಟ್ಟಿದ್ದಾರೆ.

ಮುಂದೆ ಓದಿ..; 2ನೇ ಮಹಡಿಯ ರೂಫ್ ಮೇಲೆ ಬಿದ್ದ 8 ತಿಂಗಳ ಮಗು; ಮಗುವನ್ನು ರಕ್ಷಿಸಿದ ರೋಚಕ ಕ್ಷಣಗಳ ವೀಡಿಯೋ ವೈರಲ್

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಈ ತಿಂಗಳಿನಲ್ಲಿ ಬರುತ್ತೆ ಪಿಎಂ ಕಿಸಾನ್ ಯೋಜನೆಯ 17ನೇಕಂತು..!

Published

on

ದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಿಂದ ಪ್ರತೀ ವರ್ಷ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದ್ದು, ಮೂರು ಕಂತುಗಳಲ್ಲಿ 2000 ರೂ. ನೇರವಾಗಿ ಕೃಷಿಗರ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇದೀಗ ರೈತರು 17ನೇ ಕಂತಿನ ನಿರೀಕ್ಷೆಯಲ್ಲಿದ್ದು, ಮೇ.2024ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಂತನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.  ಆದರೆ ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ.

16ನೇ ಕಂತನ್ನು ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್‌ ನಿಧಿ ಯೋಜನೆಯ ಕಂತನ್ನು ರೈತರಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು 17ನೇ ಕಂತಿಗಾಗಿ ಕಾದು ನೋಡಬೇಕಿದೆ. ಈ ಯೋಜನೆಯ ಕಂತುಗಳನ್ನು ವರ್ಷದಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಮೊದಲನೆಯ ಕಂತು ಏಪ್ರಿಲ್-ಜುಲೈನಲ್ಲಿ, ಎರಡನೆಯದು ಆಗಸ್ಟ್-ನವೆಂಬರ್ ನಲ್ಲಿ ಮತ್ತು ಮೂರನೆಯದು ಡಿಸೆಂಬರ್-ಮಾರ್ಚ್‌ನಲ್ಲಿ ನೀಡಲಾಗುತ್ತದೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಈಗಾಗಲೇ 16ನೇ ಕಂತನ್ನು ಫೆಬ್ರವರಿಯಲ್ಲಿ ನೀಡಿದ್ದು, 17 ನೇ ಕಂತು ಮೇ ತಿಂಗಳಿನಲ್ಲಿ ವರ್ಗಾವಣೆಯಾಗಬಹುದು ಎನ್ನಲಾಗಿದ್ದು, ನಿರ್ದಿಷ್ಟ ದಿನಾಂಕ ಮಾತ್ರ ನಿಗದಿಯಾಗಿಲ್ಲ.

 

 

Continue Reading

LATEST NEWS

Trending