Connect with us

bangalore

ನಟಿಯ ವಿರುದ್ಧ ದಾಖಲಾಯ್ತು ಕೇಸ್: ಅತ್ತಿಗೆಗೆ ಕಿರುಕುಳ ಆರೋಪ-2 ವರ್ಷ ಜೈಲುಶಿಕ್ಷೆ

Published

on

ಬೆಂಗಳೂರು: ಹೆತ್ತವರ ಜತೆಗೂಡಿ ಅತ್ತಿಗೆಗೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ‘ಅನುಭವʼ ಚಿತ್ರದ ಖ್ಯಾತಿಯ ನಟಿ ಅಭಿನಯಗೆ ಎರಡು ವರ್ಷದ ಜೈಲು ಶಿಕ್ಷೆ ನೀಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ.


ವರದಕ್ಷಿಣೆ ನೀಡುವಂತೆ ಪೋಷಕರ ಜತೆ ಸೇರಿ ಅತ್ತಿಗೆಗೆ ನಟಿ ಅಭಿನಯ ಅವರು ಕಿರುಕುಳ ನೀಡಿದ ಆರೋಪವಿತ್ತು. ಇದೀಗ ಹೈಕೋರ್ಟ್ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ತಿ ಅವರ ಏಕಸದಸ್ಯ ಪೀಠ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಬಾಲ್ಯದಲ್ಲೇ ನಟಿ ಅಭಿನಯ ಕನ್ನಡ ಚಿತ್ರರಂಗಕ್ಕೆ ಪಾದಾಪರ್ಣೆ ಮಾಡಿದರು. ನಟಿ.1983 ರಲ್ಲಿ ಕಾಶಿನಾಥರ ಸೂಪರ್ ಹಿಟ್ ಚಿತ್ರ ಅನುಭವ’ದಲ್ಲಿ ಇವರ ನೈಜ ಅಭಿನಯ ಇಂದಿಗೂ ನೆನಪಿಸುತ್ತದೆ.

ಸಾಕಷ್ಟು ಚಿತ್ರಗಳಲ್ಲಿ ಸ್ವಾಭಾವಿಕ ಪಾತ್ರಗಳಲ್ಲಿ ನಟಿಸಿದ ಇವರುಕಂಡಕ್ಟರ್ ಕರಿಯಪ್ಪ’,ಡ್ರೈವರ್ ಡುಮ್ಮಣ್ಣ’,ಬದುಕು’ ಮುಂತಾದ ಕಿರುತೆರೆ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ.

ಇವರು ಛಾಯಾಗ್ರಾಹಕ ಉಮಾಕಾಂತ್ ಯವರ ಜೊತೆ 2009 ರಲ್ಲಿ ಧರ್ಮಸ್ಥಳದಲ್ಲಿ ವಿವಾಹವಾದರು.

ಮದುವೆ ನಂತರ ಬ್ರೇಕ್ ತೆಗೆದುಕೊಂಡಿದ್ದ ನಟಿ, ಈಚೆಗೆ ಮತ್ತೇ ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ವಾಪಾಸ್ಸಾಗಿದ್ದರು.

bangalore

FILM: ಎಲ್ಲೆಲ್ಲೂ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಸಾಂಗ್ ಹವಾ

Published

on

‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಹಾಡು ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆಯಾಗುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ..

ಬೆಂಗಳೂರು: ಕೆಲ ದಿನಗಳ ಹಿಂದೆ ಕನ್ನಡದ ‘ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ’ ರೀಲ್ಸ್ ಭಾರೀ ವೈರಲ್ ಆಗಿತ್ತು. ರಾತ್ರಿ ಬೆಳಗಾಗೋದ್ರಲ್ಲಿ ಇದನ್ನು ಹಾಡಿದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಸೆಲೆಬ್ರಿಟಿ ಲೆವೆಲ್ ಗೆ ಸುದ್ದಿಯಾಗಿದ್ರು.

ಇದೀಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಹಾಡು ಬಿಡುಗಡೆಗೊಂಡ ದಿನ 5 ಮಿಲಿಯನ್ ವೀಕ್ಷಣೆಯಾಗುವ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.. ‘I am barbie girl’ ಎಂಬ ಇಂಗ್ಲಿಷ್ ಹಾಡಿನ ಟ್ಯೂನ್​ಗೆ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಹಾಡಿದ್ದಾರೆ.

ಈಗ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಎಂಬ ರೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ.

‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್​ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ

ಬೆಂಗಳೂರ್ ತೋರಸ್ತೀನಿ. ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ ಎನ್ನುವ ವಿಕಿ ಪೀಡಿಯಾ ವಿಕಾಸ್ ಅವರ ರೀಲ್ಸ್ ಗೆ ಜನಾ ಫಿದಾ ಆಗಿದ್ದಾರೆ.

ಒಂದು ದಿನದ ಹಿಂದೆಯಷ್ಟೇ ಫೇಸ್​ಬುಕ್​ನಲ್ಲಿ ಮತ್ತು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

ಲಕ್ಷಾಂತರ ಜನರು ಲೈಕ್ ಮಾಡಿದ್ದು ಸಾವಿರಾರು ಜನರು ಈ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ.

ಈ ಹಾಡನ್ನು ಕ್ರಿಯೇಟ್ ಮಾಡಿದವರು ವಿಕಿಪಿಡಿಯಾ ಖ್ಯಾತಿಯ ವಿಕ್ಕಿ ಎಂಬುವವರು. ಬಹುತೇಕರಿಗೆ ಇವರ ಪರಿಚಯ ಮಾಡಬೇಕಾಗಿಲ್ಲ. ಸಾಕಷ್ಟು ಹಾಸ್ಯದ ವೀಡಿಯೋಗಳನ್ನು ಇವರು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೈರಲ್ ಆಗಿದ್ದಲ್ಲದೇ ವಿಕ್ಕಿ ಅವರಿಗೆ ಬಹಳಷ್ಟು ಪ್ರಸಿದ್ದಿ ತಂದುಕೊಟ್ಟಿದೆ.

Continue Reading

bangalore

ಮುಂದಿನ ವಾರವೇ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್‌- ರಿಲೀಸ್ ಡೇಟ್?

Published

on

ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್   ಸೆ.22ರಂದು ರಿಲೀಸ್ ಆಗುತ್ತಿದೆ. 

ಬೆಂಗಳೂರು: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ಭಾಷೆಯಲ್ಲಿ ಬರಲು ಸಜ್ಜಾಗಿದೆ.

ಕನ್ನಡಿಗರನ್ನು ಸಪ್ತ ಸಾಗರದಾಚೆ ಎಲ್ಲೋ ಕರೆದೊಯ್ದಿದ್ದ ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌, ಇದೀಗ ಇದೇ ಚಿತ್ರವನ್ನು ತೆಲುಗು ಭಾಷೆಗೂ ಡಬ್‌ ಮಾಡಿ ಅಲ್ಲಿನವರನ್ನು ಸೆಳೆಯಲು ಸಜ್ಜಾಗಿದ್ದಾರೆ.

ಎಸ್. ಸೆ.22ರಂದು ‘ಸಪ್ತಸಾಗರದಾಚೆ ಎಲ್ಲೋ’ ತೆಲುಗು ವರ್ಷನ್‌ನಲ್ಲಿ ಬರುತ್ತಿದೆ.ಹೇಮಂತ್ ನಿರ್ದೇಶಿಸಿದ ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದಾರೆ.

ಮನು-ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಹಾಗಾಗಿ ತೆಲುಗು ಅಂಗಳಕ್ಕೆ ಹಾರಲು ಸಜ್ಜಾಗಿದೆ. ‘ಸಪ್ತ ಸಾಗರಲು ದಾಟಿ’ ಎಂಬ ಟೈಟಲ್‌ನಲ್ಲಿ ತೆಲುಗು ಸಿನಿಮಾ ಸೆ.22ರಂದು ಗ್ರ್ಯಾಂಡಾಗಿ ಬಿಡುಗಡೆಯಾಗುತ್ತಿದೆ.

ತೆಲುಗು ಆಡಿಯನ್ಸ್ ಗೂ ರಕ್ಷಿತ್‌ ಶೆಟ್ಟಿ ಅವರದ್ದು ಪರಿಚಿತ ಮುಖ. ಶ್ರೀಮನ್ನಾರಾಯಣ ಮತ್ತು ಚಾರ್ಲಿ ಸಿನಿಮಾಗಳಿಂದಲೇ ರಕ್ಷಿತ್‌ ಹೆಚ್ಚು ಸದ್ದು ಮಾಡಿದ್ದರು.

ಅದರಲ್ಲೂ 777 ಚಾರ್ಲಿ ಚಿತ್ರವನ್ನು ಬಹುವಾಗಿ ಇಷ್ಟಪಟ್ಟಿದ್ದರು. ಇದೀಗ ಸೂಪರ್ ಡೂಪರ್ ಹಿಟ್ ಸಿನೆಮಾ ತೆಲುಗಿನ ಅಂಗಳಕ್ಕೂ ಕಾಲಿಡಲು ಮುಂದಾಗಿದೆ. ಚಿತ್ರ್ಕೆ ತೆಲುಗು ಆಡಿಯನ್ಸ್ ಎಷ್ಟು ಮಾರ್ಕ್ಸ್ ಕೊಡ್ತಾರೆ ಎನ್ನೋದನ್ನ ಕಾದು ನೋಡಬೇಕು.

Continue Reading

bangalore

ಬೆಂಗಳೂರಿನಲ್ಲಿ 3 ದಿನ ಕಂಬಳೋತ್ಸವ : ಖ್ಯಾತ ನಟಿ ಅನುಷ್ಕಾ ಶೆಟ್ಟಿ ಉದ್ಘಾಟನೆ

Published

on

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದೊಂದಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ಉದ್ಘಾಟನೆಗೆ ಮಂಗಳೂರು ಮೂಲದ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಆಗಮನ.

 

ಬೆಂಗಳೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ಉದ್ಘಾಟನೆಗೆ ಮಂಗಳೂರು ಮೂಲದ ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಅವರನ್ನು ಆಹ್ವಾನಿಸಲಾಗಿದೆ.

ಇದೇ ನವೆಂಬರ್ 24, 25 ಮತ್ತು 26ರಂದು ಕಂಬಳವನ್ನು ಆಯೋಜನೆ ಮಾಡಿದ್ದು, ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ.

ಮೂಲತಃ ಮಂಗಳೂರಿನಾಕೆಯೇ ಆಗಿರುವ ಅನುಷ್ಕ ಶೆಟ್ಟಿ ಕಂಬಳಾಭಿಮಾನಿಯೂ ಹೌದು. ಊರಿನ ಅಥವ ಕುಟುಂಬದ ಯಾವುದೇ ಕಾರ್ಯಕ್ರಮಗಳಿಗೂ ಸ್ವೀಟಿ ತಪ್ಪದೇ ಹಾಜರಿರುತ್ತಾರೆ. ದೈವ-ದೇವರುಗಳ ಕಾರ್ಯಗಳಿಗೆ ಅನುಷ್ಕ ಶೆಟ್ಟಿ ಮೊದಲ ಪ್ರಾಶಸ್ತ್ಯವನ್ನು ನೀಡುತ್ತಾರೆ.

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಿದ್ದು, ಇದಕ್ಕಾಗಿ ಭಾರೀ ಸಿದ್ಧತೆ ಕೂಡ ಮಾಡಲಾಗುತ್ತಿದೆ.

ಈ ವರ್ಷ ತುಳು ಕೂಟಕ್ಕೆ 50 ವರ್ಷ ತುಂಬಿರುವ ಹಿನ್ನೆಲೆ ಬೆಂಗಳೂರಿನಲ್ಲಿ‌ ಕಂಬಳ‌ ಮಾಡಲು ಸಿದ್ದತೆ ನಡೆಯುತ್ತಿದೆ.ರಾಜಧಾನಿಗೆ ಬರಲು ಕಂಬಳದ ಕೋಣಗಳು ಸಿದ್ದಗೊಂಡಿದ್ದು, ಸಿಲಿಕಾನ್ ಸಿಟಿ ಜನರಿಗೆ ಇದು ಕೊಂಚ ವಿಶೇಷ ಹಾಗೂ ವಿಭಿನ್ನ ಕ್ರೀಡೆ ಎನಿಸುವುದರಲ್ಲಿ ಸಂದೇಹ ಇಲ್ಲ.

ಕಂಬಳ, ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ- ಪುಷ್ಟವಾಗಿ ಬೆಳಸಿದ ಕೋಣಗಳನ್ನ ಹಸನಾಗಿ ಹದ ಮಾಡಿ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ.ಇದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕ್ರೀಡೆ.
‘ಬೆಂಗಳೂರು ಕಂಬಳ, ನಮ್ಮ ಕಂಬಳ’ ಎಂಬ ಶಿರ್ಷಿಕೆಯಡಿ ಕಂಬಳ ಆಯೋಜಿಸಲಾಗಿದ್ದು, ಸುಮಾರು 150 ಕೋಣಗಳು ಭಾಗಿಯಾಗಲಿವೆ ಎಂದು ಹೇಳಲಾಗುತ್ತಿದೆ.

Continue Reading

LATEST NEWS

Trending