ವಿಟ್ಲ: ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದು ಓರ್ವ ಗಂಭೀರವಾಗಿ ಗಾಯಗೊಂಡು, ಉಳಿದ್ದ ಇಬ್ಬರಿಗೆ ಗಾಯವಾದ ಘಟನೆ ಬಂಟ್ವಾಳದ ತಾಲೂಕಿನ ವಿಟ್ಲದಲ್ಲಿ ನಡೆದಿದೆ.
ವಿಟ್ಲ ಬಸ್ಟ್ಯಾಂಡ್ ಕಡೆಯಿಂದ ಬಂದ ಕಾರು ಜಟಧಾರಿ ದೈವಸ್ಥಾನದ ಎದುರು ತಿರುವಿನಲ್ಲಿ ಮರಕ್ಕೆ ಢಿಕ್ಕಿ ಹೊಡೆದಿದೆ.
ಕಾರಿನಲ್ಲಿ ಕೇರಳ ಮೂಲದ ಮೂವರಿದ್ದರು. ಅದರಲ್ಲಿ ಇಬ್ಬರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಇದೇ ಕಾರು ದ್ವಿಚಕ್ರ ವಾಹನ ಮತ್ತು ಒಂದು ಕಾರಿಗೆ ಡಿಕ್ಕಿ ಹೊಡೆದು ಬಂದಿತ್ತು. ಕಾರಿನಲ್ಲಿದ್ದವರು ಕುಡಿತದ ಅಮಲಿನಲ್ಲಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.