ಛತ್ತೀಸ್‌ಘಡ: ಯುವಕನೊಬ್ಬನು ಡ್ರೈವಿಂಗ್ ಬಾರದ ತನ್ನ ಪ್ರೇಯಸಿಗೆ ಚಲಾಯಿಸಲು ಕಾರು ನೀಡಿದ್ದು, ಆಕೆ ಬೈಕ್ ಸವಾರರಿಬ್ಬರಿಗೆ ಢಿಕ್ಕಿ ಹೊಡೆದು ಇಬ್ಬರೂ ಮೃತಪಟ್ಟ ದಾರುಣ ಘಟನೆ ಛತ್ತೀಸ್‌ಘಡದ ಬಿಲಾಸ್‌ಪುರದಲ್ಲಿ ನಡೆದಿದೆ.
ರವೀಂದ್ರ ಎಂಬಾತ ತನ್ನ ಗೆಳತಿಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ. ಈ ವೇಳೆ ರವೀಂದ್ರ ತನ್ನ ಗೆಳತಿಗೆ ಕಾರು ಚಲಾಯಿಸಲು ಕೊಟ್ಟಿದ್ದ.
ಈಕೆಗೆ ಕಾರು ಚಲಾಯಿಸಲು ತಿಳಿದಿಲ್ಲದ ಕಾರಣ ಸ್ವಲ್ಪ ದೂರ ಓಡಿಸಿದ ನಂತರ ಎಕ್ಷಷಲೇಟರ್ ಜೋರಾಗಿ ಒತ್ತಿದ್ದಾಳೆ. ಈ ವೇಳೆ ಎದುರಿನಿಂದ ಬಂದ ಬೈಕ್‌ಗೆ ಕಾರು ಢಿಕ್ಕಿ ಹೊಡೆದಿದೆ.
ಆಕೆಯ ಈ ಬೇಜಾವಬ್ದಾರಿಯಿಂದ ತುಳಸಿರಾಮ್ ಯಾದವ್ ಮತ್ತು ಶುಕುವಾರ ಬಾಯಿ ಕೇವತ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ಗಮನಿಸಿದ ಸ್ಥಳೀಯರು ಆ ಪ್ರೇಮಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜನರೇ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.