Connect with us

    FILM

    ಶೂ ಕದ್ದ ಡೆಲಿವರಿ ಬಾಯ್‌ಗೆ ಸಾಥ್ ನೀಡಿದ ಬಾಲಿವುಡ್ ನಟ…! ನಟನ ವಿರುದ್ಧ ಆಕ್ರೋಶ ಹೊರ ಹಾಕಿದ ನೆಟ್ಟಿಗರು..!!

    Published

    on

    ಸೋಶಿಯಲ್ ಮೀಡಿಯಾದಲ್ಲಿ ಡೆಲಿವರಿ ಬಾಯ್ ಒಬ್ಬ ಫುಡ್ ಡೆಲಿವರಿ ಮಾಡಲು ಹೋಗಿ ಅಲ್ಲೆ ಮನೆಯ ಹೊರಗಡೆ ಇದ್ದ ಕಾಸ್ಟ್ಲೀ ಶೂ ವೊಂದನ್ನು ಕದ್ದಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಕ್ರೋಶವು ವ್ಯಕ್ತವಾಗಿತ್ತು.

    sonusood

    ಇದೀಗ ಡೆಲಿವರಿ ಬಾಯ್ ಪರ ನಟ ಸೋನು ಸೂದ್ ಬ್ಯಾಟ್ ಬೀಸಿದ್ದಾರೆ. ರೋಹಿತ್ ಅರೋರಾ ಎಂಬ ವ್ಯಕ್ತಿ ಈ ಹಿಂದೆ ತಮ್ಮ ಎಕ್ಸ್​​​​ ಖಾತೆಯಲ್ಲಿ ಡೆಲಿವರಿ ಬಾಯ್​​​​ ಶೂ ಕದ್ದಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಸೋನು ಸೂದ್ ಎಕ್ಸ್​​​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಶೂ ಕಳ್ಳತನ ಮಾಡಿರುವ ಡೆಲಿವರಿ ಬಾಯ್ ಪರ ಮಾತನಾಡಿದ್ದಾರೆ.

    ಈ ಕುರಿತಾಗಿ ಸೋನ್ ಸೂದ್ ಎಕ್ಸ್‌ ನಲ್ಲಿ ಪೋಸ್ಟರ್‌ಅನ್ನು ಕೂಡಾ ಹಂಚಿಕೊಂಡಿದ್ದಾರೆ. ಆತನ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳಬೇಡಿ. ಬದಲಾಗಿ ಅವನಿಗೆ ಒಂದು ಜೊತೆ ಶೂ ತೆಗೆದುಕೊಡಿ ಎಂದು ಹೇಳಿದ್ದಾರೆ. ಅದರೆ ನೆಟ್ಟಿಗರು ನಟನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಇದನ್ನೂ ಓದಿ..; ಫುಡ್ ಡೆಲಿವರಿಗಾಗಿ ಮನೆ ಬಾಗಿಲಿಗೆ ಬಂದ… ಕಾಸ್ಟ್ಲೀ ಶೂ ಸೈಲೆಂಟಾಗಿ ಎತ್ತಾಕೊಂಡು ಹೋದ..!!

    ಡೆಲಿವರಿ ಬಾಯ್​​​ ಮಾಡಿರುವುದನ್ನು ಸಮರ್ಥಿಸಿಕೊಂಡ ನಟ ಅವನನ್ನು ಶಿಕ್ಷಿಸುವ ಬದಲು ಅವನಿಗೆ ಹೊಸ ಜೋಡಿ ಶೂಗಳನ್ನು ನೀಡಿ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ಅಕ್ರೋಶಕ್ಕೆ ಕಾರಣವಾಗಿದೆ. ಸೋನು ಸೂದ್ ಅವರ ಈ ಹೇಳಿಕೆಯನ್ನು ಅನೇಕರು ವಿರೋಧಿಸಿದ್ದಾರೆ. ಕಳ್ಳತನಕ್ಕೆ ನಟ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದೊಂದು ವಿಚಿತ್ರ ಹೇಳಿಕೆ ಎಂದು ಅನೇಕರು ಸೋನು ಸೂದ್ ಅವರ ಪೋಸ್ಟ್​​​ಗೆ ಕಮೆಂಟ್​​ ಮಾಡಿದ್ದಾರೆ. ಇದೀಗ ಇವರ ಪೋಸ್ಟ್ ಗೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಇವರು ಹಂಚಿಕೊಂಡಿರುವ ಪೋಸ್ಟ್ 8 ಲಕ್ಷ ವೀಕ್ಷಣೆಯನ್ನು ಪಡೆದಿದ್ದು, ಕಮೆಂಟ್‌ಗಳ ಸುರಿಮಳೆಯೇ ಹರಿದು ಬರ್ತಿದೆ.

     

     

     

     

    FILM

    ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್..!

    Published

    on

    ಬೆಂಗಳೂರು/ಮಂಗಳೂರು: ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನವಾಗಿದೆ. 21 ವರ್ಷ ಪ್ರಾಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದಡಿಯಲ್ಲಿ ಕೊರಿಯೋಗ್ರಾಫರ್ ಬಂಧನವಾಗಿದೆ.

    ಇತ್ತೀಚಿಗೆ ಖ್ಯಾತ ಕೊರಿಯೋಗ್ರಾಫರ್‌ ಜಾನಿ ಮಾಸ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಸ್ಟರ್ ವಿರುದ್ಧ 21 ವರ್ಷದ ಸಹಾಯಕ ಡ್ಯಾನ್ಸರ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿಂದಿ, ತೆಲುಗು, ಕನ್ನಡ, ತಮಿಳು ಸಿನೆಮಾಗಳಿಗೆ ಮಾತ್ರವಲ್ಲದೆ ಸ್ಟಾರ್ ನಟರಿಗೆ ಕೊರಿಯೋಗ್ರಫಿ ಮಾಡಿರುವ ಕೋರಿಯೋಗ್ರಾಫರ್ ಇದೀಗ ಬಂಧನಕ್ಕೊಳಗಾಗಿದ್ದಾರೆ.

    ಏನಿದು ಘಟನೆ?
    ಯುವತಿಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಜೀರೋ ಎಫ್‌ಐಆರ್ ದಾಖಲಾಗಿತ್ತು. ಆ ಬಳಿಕ ನೃತ್ಯ ನಿರ್ದೇಶಕ ತಲೆ ಮರೆಸಿಕೊಂಡಿದ್ದರು. ಮೂರು ದಿನಗಳಿಂದ ಹುಡುಕಾಡುತ್ತಿದ್ದ ಹೈದರಾಬಾದ್‌ನ ಪೊಲೀಸರು ನಾಲ್ಕು ತಂಡಗಳಾಗಿ ಶೋಧ ನಡೆಸಿದ್ದರು. ಇಂದು (ಸೆಪ್ಟೆಂಬರ್ 19) ಬೆಳಗ್ಗೆ ಗೋವಾದಲ್ಲಿ ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಕಡೆ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಪ್ರಕರಣ ಕೂಡ ಇವರ ಮೇಲೆ ದಾಖಲಾಗಿದೆ. ಮಹಿಳಾ ನೃತ್ಯ ನಿರ್ದೇಶಕಿಯೊಬ್ಬರ ಮೇಲೆ ಚಿತ್ರೀಕರಣದ ವೇಳೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿ ದೂರು ನೀಡಿದ್ದರು. ಅಲ್ಲದೆ ಔಟ್ ಡೋರ್ ಶೂಟಿಂಗ್ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪ ಮಾಡಿದ್ದಾರೆ.

    ನಟ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್ ಗೆ ಕೊ*ಲೆ ಬೆದರಿಕೆ ಹಾಕಿದ ಮಹಿಳೆ

    ಈ ದೂರಿನ ಬೆನ್ನಲ್ಲೇ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಸೆಕ್ಷನ್ 376, 506, 323 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನರಸಿಂಗಿ ಠಾಣೆಯ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದ್ದು, ಝೀರೊ ಎಫ್‌ಐಆರ್ ಕೂಡ ದಾಖಲಾಗಿತ್ತು. ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಯುವತಿಯನ್ನು ವಿಚಾರಣೆ ಮಾಡಿದ್ದರು. ಆಕೆಯ ಮನೆಯಲ್ಲಿಯೇ ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

    Continue Reading

    FILM

    ನಟ ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್ ಗೆ ಕೊ*ಲೆ ಬೆದರಿಕೆ ಹಾಕಿದ ಮಹಿಳೆ

    Published

    on

    ಮಂಗಳೂರು/ಮುಂಬೈ : ನಟ ಸಲ್ಮಾನ್‌ ಖಾನ್‌ ತಂದೆ, ಹಿರಿಯ ಸಾಹಿತಿ ಸಲೀಂ ಖಾನ್ ಅವರಿಗೆ ವಾಕಿಂಗ್ ವೇಳೆ ಮಹಿಳೆಯೊಬ್ಬರು ಬೆದರಿ*ಕೆ ಹಾಕಿದ್ದಾರೆ ಎನ್ನಲಾಗಿದೆ.  ಮುಂಜಾನೆಯ ವಾಕಿಂಗ್ ಸಮಯದಲ್ಲಿ ಮಹಿಳೆಯೊಬ್ಬಳು ಡಾನ್‌ ಲಾರೆನ್ಸ್‌ ಬಿಷ್ಣೋಯ್‌ ಹೆಸರಿನಲ್ಲಿ ಬೆದರಿ*ಕೆ ಹಾಕಿದ್ದಾಗಿ ವರದಿಯಾಗಿದೆ. ಈ ಬಗ್ಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಾಕಿಂಗ್ ವೇಳೆ ಹತ್ತಿರಕ್ಕೆ ಬಂದಿದ್ದ ಮಹಿಳೆ ಸಲೀಂ ಖಾನ್‌ ಅವರಿಗೆ, ಸರಿಯಾಗಿ ನಡೆದುಕೊಳ್ಳಿ, ಇಲ್ಲದೆ ಇದ್ದರೆ ಸಲ್ಮಾನ್‌ ಖಾನ್‌ ಅವರಿಗೆ ಕೊ*ಲೆ ಬೆದರಿ*ಕೆ ಹಾಕಿರುವ ಡಾನ್‌ ಲಾರೆನ್ಸ್‌ಗೆ ಕರೆ ಮಾಡುವುದಾಗಿ ಹೇಳಿದ್ದಾಗಿ ದೂರು ನೀಡಲಾಗಿದೆ. ಮಹಿಳೆ ಯಾರು? ಎಲ್ಲಿಂದ ಬಂದವಳು ? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಸಲ್ಮಾನ್‌ ಖಾನ್‌ ನಗರದಿಂದ ಹೊರಟ ಕೆಲವೇ ಗಂಟೆಯಲ್ಲಿ ಈ ಘಟನೆ ನಡೆದಿದೆ

    ಎಪ್ರಿಲ್‌ ತಿಂಗಳಲ್ಲಿ ಸಲ್ಮಾನ್ ಖಾನ್‌ ಅವರ ಬಾಂದ್ರದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಗುಂಡಿನ ದಾ*ಳಿ ನಡೆಸಲಾಗಿತ್ತು. ಇದು ಲಾರೆನ್ಸ್ ಬಿಷ್ಣೋಯ್‌ ಸಹೋದರ ಅನ್ಮೋಲ್ ಬಿಷ್ಣೋಯ್‌ ಮಾಡಿರುವುದಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದ. ಸಲ್ಮಾನ್ ಖಾನ್‌ ವಿಚಾರಣೆಯ ವೇಳೆಯಲ್ಲಿ ತನ್ನ ಕುಟುಂಬಕ್ಕೆ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನಿಂದ ಬೆದರಿ*ಕೆ ಇದೆ ಎಂದು ಹೇಳಿಕೆ ನೀಡಿದ್ದರು.

    ಇದನ್ನೂ ಓದಿ : ಶಾಸಕ ಮುನಿರತ್ನ ಸೇರಿದಂತೆ 7 ಮಂದಿ ವಿರುದ್ಧ ಅತ್ಯಾಚಾ*ರ ಕೇಸ್ ದಾಖಲು

    ಇದೀಗ ಸಲ್ಮಾನ್ ಖಾನ್‌ ತಂದೆ ಸಲೀಂ ಖಾನ್‌ ಅವರಿಗೆ ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಕುಟುಂಬಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಹಿಳೆ ಯಾರು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    Continue Reading

    FILM

    ಮೊದಲ ಬಾರಿಗೆ ದರ್ಶನ್ ಭೇಟಿಗೆ ಬಂದ ತಾಯಿ..! ದರ್ಶನ್‌ಗಾಗಿ ತಾಯಿ ತಂದಿದ್ದೇನು ಗೊತ್ತಾ?

    Published

    on

    ಮೈಸೂರು/ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಬಿಡುಗಡೆ ಭಾಗ್ಯ ಇನ್ನೂ ದೊರೆತಿಲ್ಲ. ಇನ್ನು ಜೈಲಲ್ಲಿರುವ ದರ್ಶನ್ ಭೇಟಿಗೆ ಚಿತ್ರರಂಗದ ನಟ ನಟಿಯರು ಭೇಟಿ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರಲ್ಲಿ ತಾಯಿಯಯನ್ನು ಕಾಣುವ ಹಂಬಲ ವ್ಯಕ್ತಪಡಿಸಿದ್ದರು. ಈ ಹಿಂದೆಯೇ ತಾಯಿ ಮೀನಾ ಕೂಡಾ ದರ್ಶನ್ ಭೇಟಿ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.

    ದರ್ಶನ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ಸೆ.30ರವರೆಗೆ ಜೈಲೇ ಗತಿ

    ಇದೀಗ ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಅಕ್ಕ, ಭಾವ ಮತ್ತು ಅವರ ಮಕ್ಕಳು ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿದ್ದಾರೆ.  ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್​​ರನ್ನು ಕಾಣಲು ಮಗ ದಿನಕರ್​ ತೂಗುದೀಪ ಜೊತೆ ಬಂದಿದ್ದರು. ಬಳ್ಳಾರಿ ಜೈಲಿಗೆ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ ಬಂದಿದ್ದಾರೆ. ಮಗನನ್ನು ಕಾಣುವ ತವಕದಲ್ಲಿ ತನ್ನ ಮಗಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ.

    ದರ್ಶನ್​ ನೋಡಲು ಬಂದ ವೇಳೆ ತಾಯಿ ಮೀನು ತೂಗುದೀಪ ಮತ್ತು ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ತಂದಿದ್ದಾರೆ. ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದಾರೆ. ಮಡದಿ ವಿಜಯಲಕ್ಷ್ಮೀ, ಸ್ನೇಹಿತರು ಈಗಾಗಲೇ ದರ್ಶನ್​​ರನ್ನು ಭೇಟಿ ಮಾಡಿದ್ದಾರೆ. ಆದರೆ ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್​ ದರ್ಶನ್​​ರನ್ನು ಭೇಟಿ ಮಾಡಿರಲಿಲ್ಲ.

    Continue Reading

    LATEST NEWS

    Trending