ಬೊಲೆರೋ ಟ್ರಕ್ ನಡವೆ ಭೀಕರ ಅಪಘಾತ ; ಹಥ್ರಾಸ್ ಬಳಿ ಐವರು ಮಸಣಕ್ಕೆ..!
ನವದೆಹಲಿ : ಬೊಲೆರೊ ಮತ್ತು ಟ್ರಕ್ ಡಿಕ್ಕಿಯಾಗಿ ಗಂಗಾನದಿ ಸ್ನಾನಕ್ಕೆಂದು ಬಂದಿದ್ದ ಐವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದಿದೆ.
ರಾಜಸ್ಥಾನದ ಅಲ್ವಾರಸ್ ನಿವಾಸಿಗಳು ಐವರು ಉತ್ತರ ಪ್ರದೇಶದ ಹಥ್ರಾಸ್ಗೆ ಗಂಗಾಸ್ನಾನಕ್ಕೆಂದು ಬಂದಿದ್ದರು ಆದರೆ ದಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು,ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ದಾರಿಮಧ್ಯೆ ತರಕಾರಿ ತುಂಬಿದ ಟ್ರಕ್ ಒಂದು ನಿಯಂತ್ರಣ ತಪ್ಪಿ ಬೊಲೆರೋ ಗಾಡಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.