Wednesday, January 27, 2021

ದಕ್ಷಿಣ ಆಫ್ರಿಕದಲ್ಲಿ ಮತ್ತೊಂದು ಮಾರಕ ಕೊರೊನಾ ವೈರಸ್ ಪತ್ತೆ : ಬ್ರಿಟನ್ ನಲ್ಲಿ ಮತ್ತೆ ಸಂಪೂರ್ಣ ಲಾಕ್  ಡೌನ್ ಘೋಷಣೆ..!

ದಕ್ಷಿಣ ಆಫ್ರಿಕದಲ್ಲಿ ಮತ್ತೊಂದು ಮಾರಕ ಕೊರೊನಾ ವೈರಸ್ ಪತ್ತೆ : ಬ್ರಿಟನ್ ನಲ್ಲಿ ಮತ್ತೆ ಸಂಪೂರ್ಣ ಲಾಕ್  ಡೌನ್ ಘೋಷಣೆ..!

ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ತಳಿಯ ಸೋಂಕು ಇಂಗ್ಲೆಂಡ್ ತಳಿಯ ಸೋಂಕಿಗಿಂತಲೂ ಹೆಚ್ಚು ವೇಗವಾಗಿ ಹರಡಲಿದ್ದು, ಪ್ರಸ್ತುತ ಲಭ್ಯವಿರುವ ಲಸಿಕೆಗಳಿಂದ ಗುಣವಾಗುವುದಿಲ್ಲ ಬ್ರಿಟನ್‍ನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕೋಕ್ ತಿಳಿಸಿದ್ದಾರೆ.

 

ಕಳೆದ ಡಿಸೆಂಬರ್‍ನಲ್ಲಿ ಪತ್ತೆಯಾಗಿದ್ದ ಇಂಗ್ಲೆಂಡ್‍ನ ವೈರಸ್ ಶೇ.70ರಷ್ಟು ವೇಗವಾಗಿ ಹರಡಿದರೂ ಕೂಡ ಲಸಿಕೆಗೆ ಸ್ಪಂದಿಸಲಿದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ತಳಿಯ ವೈರಸ್ ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಮಾನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ರೂಪಾಂತರಿ ಸೋಂಕು ದಿನೇ ದಿನೇ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಔಷಧಿಗಳಿಗೆ ಸ್ಪಂದಿಸದೇ ಇರುವ ಬಗ್ಗೆ ವರದಿಯಾಗಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮ ವಹಿಸುತ್ತಿರುವುದಾಗಿ ಹ್ಯಾಂಕೋಕ್ ಹೇಳಿದ್ದಾರೆ.

ಬ್ರಿಟನ್ ನಲ್ಲಿ ಮತ್ತೆ ಸಂಪೂರ್ಣ ಲಾಕ್  ಡೌನ್ ಘೋಷಣೆ..!

ಬ್ರಿಟನ್: ಇಡೀ ವಿಶ್ವದ್ಯಾಂತ ಸದ್ಯ ಬ್ರಿಟನ್ ಮೂಲದ ರೂಪಾಂತರಿ ಕೊರೊನಾ ವೈರಸ್ ಆತಂಕ ಎದುರಾಗಿದೆ. ಭಾರತದಲ್ಲೂ ಇಂದು ಮತ್ತೆ 20 ಜನರಲ್ಲಿ ಹೊಸ ವೈರಸ್ ಕಾಣಿಸಿಕೊಂಡಿದೆ.

ಈ ಮೂಲಕ ರೂಪಾಂತರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 58ಕ್ಕೇರಿದೆ. ಅದ್ರಂತೆ ಇಡೀ ವಿಶ್ವದ ಹಲವು ದೇಶಗಳಲ್ಲಿ ಹೊಸ ತಳಿ ವೈರಸ್ ಆತಂಕ ಹೆಚ್ಚಾಗುತ್ತಲೇ ಇದೆ.

ಬ್ರಿಟನ್ ನಲ್ಲೂ ರೂಪಾಂತರಿ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೊಮ್ಮೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಹೌದು ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸರ್ ಅವರು, ಇಂಗ್ಲೆಂಡ್’ನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ಡೌ ಘೋಷಣೆ ಮಾಡಿದ್ದಾರೆ. ಫೆಬ್ರವರಿ ಮಧ್ಯದವರೆಗೂ ಲಾಕ್ಡೌನ್ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬುಧವಾರದಿಂದ ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಆಗಲಿವೆ. ಇಂಗ್ಲೆಂಡ್’ನಲ್ಲಿ ಕೊರೋನಾ ಮರಣ ದರ ಅತ್ಯಧಿಕವಾಗಿದ್ದು, ಈಗಾಗಲೇ ಮುಕ್ಕಾಲು ಭಾಗದಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದೆ.

ಆದ್ದರಿಂದ ಮೊದಲ ಲಾಕ್ ಡೌನ್ ಗಿಂತಲೂ ಕಠಿಣ ನಿಯಮಗಳು ಈ ಬಾರಿ ಜಾರಿಯಾಗಲಿದೆ ಎನ್ನಲಾಗ್ತಿದೆ.

ಮೂಲಗಳ ಪ್ರಕಾರ ಈಗಾಗಲೇ ಕೊರೋನಾ ಸೋಂಕಿನಿಂದಾಗಿ ಸುಮಾರು 27 ಸಾವಿರ ಜನರು ಆಸ್ಪತ್ರೆಯಲ್ಲಿದ್ದಾರೆ.

ಕಳೆದ ವರ್ಷ ಏಪ್ರಿಲ್ ನಲ್ಲಿ ಕಾಣಿಸಿಕೊಂಡ ಮೊದಲನೇ ಅಲೆಯಿಂದಾಗಿ ಶೇ.40 ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಕಳೆದ ಮಂಗಳವಾರ 80 ಸಾವಿರಕ್ಕು ಹೆಚ್ಚು ಜನರು ಕೇವಲ 24 ಗಂಟೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...
Copy Protected by Chetans WP-Copyprotect.