ಪಚ್ಚನಾಡಿಯಲ್ಲಿ ಕಾಗೆಗಳ ಕಳೇಬರ ಸ್ಥಳೀಯರಲ್ಲಿ ಹಕ್ಕಿ ಜ್ವರದ ಭೀತಿ..!
ಮಂಗಳೂರು: ಮಂಗಳೂರು ನಗರದ ಹೊರವಲಯದ ಪಚ್ಚನಾಡಿ ಬಳಿ ಮೂರು ಸತ್ತ ಕಾಗೆಗಳ ಕಳೇಬರ ಪತ್ತೆಯಾಗಿದೆ. ಇಂದು ಮುಂಜಾನೆ ಪಚ್ಚನಾಡಿ ಸ್ಮಶಾನದ ಬಳಿಯ ನಿರಾಶ್ರಿತರ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಈ ಕಾಗೆಗಳ ಕಳೆಬರ ಒಂದೇ ಕಡೆ ಕಾಣಲು ಸಿಕ್ಕಿದ್ದು ಸ್ಥಳಿಯರಲ್ಲಿ ಹಕ್ಕಿ ಜ್ವರದ ಭೀತಿ ಮನೆ ಮಾಡಿದೆ.ನೆರೆಯ ಕೇರಳ ರಾಜ್ಯದಲ್ಲಿ ಈಗಾಗಲೇ ವ್ಯಾಪಕವಾಗಿ ಹರಡಿರುವ ಹಕ್ಕಿ ಜ್ವರ ಭೀತಿಯಿದ್ದು , ಹೊರ ಜಿಲ್ಲೆ- ರಾಜ್ಯಗಳಿಂದ ಕೋಳಿಗಳನ್ನು ಜಿಲ್ಲೆಗೆ ತರುವುದನ್ನು ನಿಷೇಧಿಸಲಾಗಿದೆ.
ಮಂಗಳೂರಿನ ಆರೋಗ್ಯ ಅಧಿಕಾರಿಗಳಿಗೆ ಕಾಗೆಗಳು ಸತ್ತ ಬಗ್ಗೆ ಮಾಹಿತಿ ನೀಡಲಾಗಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ತೆರಳಿ ಪರೀಶೀಲನೆ ನಡೆಸಿದ್ದಾರೆ.