Wednesday, January 27, 2021

ಅಜ್ಜಿಯ ಯೋಗಕ್ಷೇಮ ವಿಚಾರಿಸಲು ಬಂದಿದ್ದ ಮೊಮ್ಮಗ ಯಮನ ಪಾದ ಸೇರಿದ..!

ಅಜ್ಜಿಯ ಯೋಗಕ್ಷೇಮ ವಿಚಾರಿಸಲು ಬಂದಿದ್ದ ಮೊಮ್ಮಗ; ಯಮನ ಪಾದ ಸೇರಿದ..!

ಮಂಗಳೂರು: ಬೆಳ್ತಂಗಡಿಯಲ್ಲಿ  ಅನಾರೋಗ್ಯದಲ್ಲಿದ್ದ ಅಜ್ಜಿಯ ಯೋಗ ಕ್ಷೇಮ ವಿಚಾರಿಸಲೆಂದು ಪೋಷಕರೊಂದಿಗೆ ಬಂದಿದ್ದ ಎಂಟು ವರ್ಷದ ಪುಟ್ಬ ಬಾಲಕ, ಕಕ್ಕಿಂಜೆ ಸನಿಹದ ಚಿಬಿದ್ರೆ ಗ್ರಾಮದ ಅನ್ನಾರು ನದಿಯಲ್ಲಿ ಭಾನುವಾರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ.

ತೋಟತ್ತಾಡಿ ಗ್ರಾಮದ ದಡ್ಡು ನಿವಾಸಿ ಪುತ್ತಾಕ ಅವರ ಮೊಮ್ಮಗ ಇಹಾನ್ ಅಬ್ದುಲ್ಲ ಮೃತಪಟ್ಟ ಬಾಲಕ. ಚಿಕ್ಕಮಗಳೂರಿನಲ್ಲಿ ನೆಲೆಸಿರುವ ಪುತ್ತಾಕ ಅವರ ಮಗಳಾದ ಆಬಿದಾ ಮತ್ತು ಫಾರೂಕ್ ಅಬ್ದುಲ್ಲ ಅವರ ಪುತ್ರ  ಇಹಾನ್ ಅಬ್ದುಲ್ಲ ಅಜ್ಜಿಗೆ ಅನಾರೋಗ್ಯ ಇದ್ದುದ್ದರಿಂದ ತಂದೆ ತಾಯಿ,ಜೊತೆ ನಿನ್ನೆ ಕಕ್ಕಿಂಜೆಗೆ ಬಂದಿದ್ರು.ಉಪಹಾರ ಮುಗಿಸಿ ಮನೆಮಂದಿ ಜೊತೆ ಸೇರಿ ಪಕ್ಕದಲ್ಲೇ ಇರುವ ನದಿಗೆ ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೆಂದು ತೆರಳಿದ್ದರು. ಈ ಸಂದರ್ಭ ನದಿಯಲ್ಲಿ ಆಟ ಆಡ್ತಾ ಇದ್ದ ವೇಳೆ ಬಾಲಕ ಎಲ್ಲರ ಕಣ್ಣ ಮುಂದೆಯೇ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾನೆ.

ತಕ್ಷಣ ಬಾಲಕನ ಮಾವ ದಡ್ಡು ಸೂಫಿ ಸಹಿತ ಇತತರರು ಬಾಲಕನ್ನು ನೀರಿನಿಂದ ಮೇಲಕ್ಕೆತ್ತಿ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ಮಗು ಕೊನೆಯುಸಿರೆಳೆದಿತ್ತು.

ಘಟನೆ ಬಗ್ಗೆ ಬಾಲಕನ ತಂದೆ ಫಾರೂಕ್ ಅಬ್ದುಲ್ಲ ನೀಡಿದ ದೂರಿನಂತೆ ಧರ್ಮಸ್ಥಳ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ. ಇಹಾನ್  ತಂದೆ, ತಾಯಿ, ಸಹೋದರಿ, ಸಹೋದರನನ್ನು ಅಗಲಿದ್ದಾನೆ. ಸದ್ಯ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಶವ ಮಹಜರು  ನಡೆಸಲಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...
Copy Protected by Chetans WP-Copyprotect.