ಕತಾರ್: ಕತಾರ್ ದೇಶ ಈಗಾಗಲೇ ತನ್ನ ಚೊಚ್ಚಲ ಫುಟ್ಬಾಲ್ ವರ್ಲ್ಡ್ ಕಪ್ ಆತಿಥ್ಯದಿಂದ ವಿಶ್ವದೆಲ್ಲೆಡೆ ಸದ್ದಾಗುತ್ತಿದ್ದರೆ ಭಾರತದಲ್ಲಿ ಕೋಮು ಸಾಮರಸ್ಯ ಸಾರುವ ಮೂಲಕ ದೇಶ ಮತ್ತೆ ಜಾತ್ಯತೀತ ರಾಷ್ಟ್ರವಾಗಬೇಕು ಎಂದು ಯುವ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊಯಾತ್ರೆ ಕೈಗೊಂಡಿದ್ದಾರೆ.
ಇದಕ್ಕೆ ದೇಶದ ಉದ್ದಗಲಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಫಿಫಾ ಫುಟ್ಬಾಲ್ ವಿಶ್ವ ಕಪ್ ಪಂದ್ಯದಲ್ಲಿಯೂ ಅದು ಸದ್ದು ಮಾಡಿದೆ.
ಸೌದಿಯ ರಿಯಾದ್ ನಲ್ಲಿ ಉದ್ಯಮ ನಡೆಸುತ್ತಿರುವ ಮಂಗಳೂರಿನ ಸುರತ್ಕಲ್ ಸಮೀಪದ ಮಂಗಳಪೇಟೆಯ ಹರ್ಷದ್ ಫುಟ್ಬಾಲ್ ವೀಕ್ಷಣೆಗೆ ಕತಾರ್ ನ ಲುಸೈಲ್ ಮೈದಾನಕ್ಕೆ ತೆರಳಿದ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಾಯಕ ರಾಹುಲ್ ಗಾಂಧಿ ಅವರ ಯಾತ್ರೆಗೆ ತನ್ನ ಸ್ನೇಹಿತರಾದ ಅಕೀಲ್ ಹಾಗೂ ತೌಸಿಫ್ ಜತೆಗೂಡಿ ಶುಭ ಕೋರಿದರು.
ಹಲವಾರು ದೇಶದ ಅಭಿಮಾನಿಗಳ ಮಧ್ಯೆ ತಮ್ಮ ದೇಶ ಹಾಗೂ ನಾಯಕನ ಮೇಲಣ ಅಭಿಮಾನವನ್ನು ಲಕ್ಷಾಂತರ ಜನರ ಮುಂದೆ ಪ್ರದರ್ಶಿಸಿ ಬೆಂಬಲ ಸೂಚಿಸಿದರು.
ಪ್ರಸಕ್ತ ಸೌದಿ ಅರೇಬಿಯಾದಲ್ಲಿ ಇರುವ ಅವರು ತನ್ನ ಕಾಲೇಜು ವಿದ್ಯಾಭ್ಯಾಸದ ದಿನಗಳಲ್ಲಿ ರಾಜ್ಯ ವಿದ್ಯಾರ್ಥಿ ಸಂಘದ ನಾಯಕರಾಗಿ ಕಾರ್ಯನಿರ್ವಹಿಸಿ ಹಲವಾರು ಸಾಮಾಜಿಕ ಕಳಕಳಿ ಮತ್ತಿತರ ಕಾರ್ಯಕ್ರಮವನ್ನು ಕೈಗೊಂಡಿದ್ದರು.