Friday, July 1, 2022

ಬೆಳ್ತಂಗಡಿ: ದುಷ್ಕರ್ಮಿಗಳು ಹಾನಿಗೊಳಿಸಿದ ಸ್ಥಳದಲ್ಲೇ 24 ಗಂಟೆಯೊಳಗೆ ಹಾರಾಡಿದ ಭಗವಾಧ್ವಜ

ಬೆಳ್ತಂಗಡಿ: ಇಲ್ಲಿನ ಕೊಕ್ಕಡದಲ್ಲಿ ಭಗವಾದ್ವಜ ಹಾಗೂ ಅದರ ಕಂಬವನ್ನು ಕಿಡಿಗೇಡಿಗಳು ಹಾಳುಗೆಡವಿ ನೆಲಕ್ಕುರುಳಿಸಿದ 24 ಗಂಟೆಯೊಳಗೆ ಮತ್ತೆ ಅದೇ ಸ್ಥಳದಲ್ಲಿ ನಿರ್ಮಿಸಿದ್ದಾರೆ.


ಏ. 17ರ ಭಾನುವಾರ ರಾತ್ರಿ ವೇಳೆ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಜಂಕ್ಷನ್ ನಲ್ಲಿದ್ದ ಭಗವಾದ್ವಜ ಹಾಗೂ ಅದರ ಕಂಬವನ್ನು ಕಿಡಿಗೇಡಿಗಳು ನೆಲಕ್ಕುರುಳಿಸಿದ್ದರು.

ಈ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಘಟನೆ ನಡೆದು 24 ಗಂಟೆಯೊಳಗೆ ಸ್ಥಳೀಯ ಹಿಂದೂ ಕಾರ್ಯಕರ್ತರು ಸೇರಿ ಅದೇ ಜಾಗದಲ್ಲಿ ಕಟ್ಟೆಯನ್ನು ನಿರ್ಮಿಸಿ ಬೃಹತ್ ಭಗವದ್ವಜ ಹಾರಾಡುವಂತೆ ಮಾಡಿದ್ದಾರೆ.

ಧ್ವಂಸಗೊಳಿಸಿದ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮುಲ್ಕಿ: ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಕೃಷಿ ಗ್ರಾಮಗಳಿಗೆ DYFI ನಿಯೋಗ ಭೇಟಿ

ಮಂಗಳೂರು: ಭೂಸ್ವಾಧೀನದ ಉದ್ದೇಶ, ಪುನರ್ವಸತಿಯ ಕುರಿತಾಗಿ ಸ್ಪಷ್ಟ ಮಾಹಿತಿ ಒದಗಿಸದೆ ಸಾವಿರ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಮುಲ್ಕಿ ತಾಲೂಕಿನ ಕೃಷಿ ಪ್ರಧಾನ ಗ್ರಾಮಗಳಾದ ಬಳ್ಕುಂಜೆ, ಐಕಳ, ಕೊಲ್ಲೂರು, ಕರ್ನಿರೆ ಮೊದಲಾದ ಗ್ರಾಮಗಳಿಗೆ...

ಇಂದಿನಿಂದ ಸಿಂಗಲ್‌ ಯೂಸ್‌ ಪ್ಲಾಸ್ಟಿಕ್‌ ಬ್ಯಾನ್‌: ಬಳಸಿದ್ರೆ 5 ವರ್ಷ ಜೈಲು

ನವದೆಹಲಿ: 'ದೇಶದಲ್ಲಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧವು ಜುಲೈ 1 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಈ ಆದೇಶ ಮೀರಿ ಪ್ಲಾಸ್ಟಿಕ್‌ ಉತ್ಪಾದಿಸಿ ಅದನ್ನು ಸರಬರಾಜು ಮಾಡುವ ಮತ್ತು ದಾಸ್ತಾನು ಇಡುವುದು ಕಂಡುಬಂದರೆ ಅಂತಹ...

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...