Saturday, September 18, 2021

ಬೆಂಗಳೂರು : ರಾತ್ರಿ ಪಾಳಿ ಪೊಲೀಸರಿಗೆ ಸಿಕ್ತು ರಾಶಿ ರಾಶಿ ಚಿನ್ನಾಭರಣ..!

ಬೆಂಗಳೂರು : ರಾತ್ರಿ ಪಾಳಿ ಪೊಲೀಸರಿಗೆ ಸಿಕ್ತು ರಾಶಿ ರಾಶಿ ಚಿನ್ನಾಭರಣ..!

ಬೆಂಗಳೂರು: ಬೆಂಗಳೂರಿನ ರಾತ್ರಿ ಪಾಳಿ ಗಸ್ತಿನಲ್ಲಿದ್ದ ಪೊಲೀಸರಿಗೆ ಭಾರಿ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಕೊಟ್ಯಾಂತರ ಮೌಲ್ಯದ ಈ ಚಿನ್ನಾಭರಣಗಳ ಜೊತೆಗೆ ಸಾಕಷ್ಟು ಅನುಮಾನಗಳು ಹುಟ್ಟುಹಾಕಿವೆ.

ಪೊಲೀಸ್ ಸಿಬ್ಬಂದಿ ಹನುಮಂತ ಹಾಗೂ ಆನಂದ ಅವರು ದೊಡ್ಡ ಪೇಟೆ ವೃತ್ತದ ಬಳಿ ವಾಹನ ಪರಿಶೀಲಿಸುತ್ತಿದ್ದಾಗ ಆಯಕ್ಟೀವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಭಾರಿ ಚಿನ್ನಾಭರಣ ಪತ್ತೆಯಾಗಿದೆ.

ವಿಚಾರಣೆ ವೇಳೆ ನಗರ್ತ್ ಪೇಟೆಯ ಎಸ್.ಎಸ್ ಜ್ಯೂವೆಲ್ಲರ್ಸ್​ಗೆ ಸೇರಿದ ಚಿನ್ನಭಾರಣ ಎಂದು ತಿಳಿದುಬಂದಿದ್ದು, ಮುಂಬೈ ಮೂಲದ‌ ದಳಪತ್ ಸಿಂಗ್ ಹಾಗೂ ರಾಜಸ್ತಾನದ ವಿಕಾಸ್ ಎಂಬವವರ ಬಳಿ ಚಿನ್ನಾಭರಣ ಸಿಕ್ಕಿದೆ.

ಒಟ್ಟು 6.55 ಗ್ರಾಂ ಚಿನ್ನ, 67 ನೆಕ್ಲೇಸ್ ಜಪ್ತಿಯಾಗಿದ್ದು, ಅಂದಾಜು 3 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಎನ್ನಲಾಗಿದೆ.

ಸದ್ಯ ಇಬ್ಬರನ್ನು ಕೆ.ಆರ್​ ಮಾರ್ಕೆಟ್​ ಪೊಲೀಸರು ಬಂಧಿಸಿದ್ದು, ಪತ್ತೆಯಾದ ಚಿನ್ನ ಅಸಲಿನಾ? ಅಥವಾ ನಕಲಿನಾ? ಎಂಬುದರ ಬಗ್ಗೆ ಪರಿಶೀಲನೆ ಮುಂದುವರೆಸಿದ್ದಾರೆ.

ಜಪ್ತಿಯಾದ ಆಭರಣಗಳೆಲ್ಲ ಆಯಂಟಿಕ್​ ಪೀಸ್ ಆಗಿದ್ದು, ಮುಂಬೈನಲ್ಲಿ ತಯಾರಾಗಿರುವುದಾಗಿ ತಿಳಿದುಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಕೊರಿಯರ್ ಮೂಲಕ ಬಂದಿತ್ತು.

ಬಳಿಕ ಬೆಂಗಳೂರಿನಲ್ಲಿ ಚಿನ್ನಾಭರಣ ತೆಗೆದುಕೊಂಡು ಬ್ಯಾಗ್​ನಲ್ಲಿ ಹಾಕಿಕೊಂಡು ಅಂಗಡಿಗೆ ಹೋಗಿ ಸ್ಯಾಂಪಲ್ ತೋರಿಸ್ತಿದ್ರು. ಅಂಗಡಿಯವರು ಆರ್ಡರ್ ಕೊಟ್ರೆ ಮತ್ತೆ ತಯಾರು ಮಾಡಿ ಕೊಡುತ್ತಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...