ಬೆಂಗಳೂರು: ‘ಜೆಜೆ ನಗರದಲ್ಲಿ ನಡೆದ ಚಂದ್ರು ಎಂಬ ಯುವಕನ ಕೊಲೆಯ ವಿಚಾರದಲ್ಲಿ ಪೊಲೀಸ್ ಕಮಿಷನರ್ ಹೇಳಿರುವುದು ಸುಳ್ಳು. ಗೃಹ ಸಚಿವರು ಹೇಳಿರುವುದು ಸತ್ಯ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಚಂದ್ರು ಹತ್ಯೆ ಮಾಡಿರುವುದು ಮುಸ್ಲಿಮ್ ಗೂಂಡಾಗಳು. ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಅಂತ ಚಂದ್ರುವಿನ ಸ್ನೇಹಿತ ಹೇಳಿದ್ದಾರೆ. ಬೈಕ್ ಗಳ ನಡುವೆ ಡಿಕ್ಕಿ ಆಗಿದ್ದು ನಿಜ. ಆಗ ಉರ್ದುವಿನಲ್ಲಿ ಮಾತನಾಡಿ ಎಂದು ಹೇಳಿದ್ದಾರೆ. ಉರ್ದು ಬರುವುದಿಲ್ಲ ಎಂದು ಹೇಳಿದಾಗ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕೊಲೆಗೆ ಕಾರಣ ಏನು ಎಂಬ ವಿಚಾರದಲ್ಲಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿರುವುದು ಸುಳ್ಳು. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿರುವುದು ಸತ್ಯ, ಈ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.
ಮೃತನ ಸ್ನೇಹಿತ ಸೈಮನ್ ಹೇಳಿರುವುದು ಸತ್ಯ. ಆ ಜಾಗದಲ್ಲಿ ಸ್ಥಳೀಯರಿದ್ರು, ಸೈಮನ್ ಅಲ್ಲೇ ಇದ್ದ. ಚುಚ್ಚಿರುವುದನ್ನು ನೋಡಿದ್ದಾನೆ. ಉರ್ದು ಬರಲ್ಲ ಅಂತ ಹೇಳಿದಾಗ ಚುಚ್ಚಿದ್ದಾರೆ. ಮೃತ ಚಂದ್ರು ತಾಯಿ, ಚಿಕ್ಕಮ್ಮ, ಸೈನಮ್ ಎಲ್ಲಾ ನಿಜ ಹೇಳಿದ್ದಾರೆ ಆದರೆ ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.