BELTHANGADY
Belthangady: ಚೂರಿಯಿಂದ ಇರಿದು ಮಗನನ್ನು ಕೊಲೆಗೈದ ತಂದೆ..!!
ಬೆಳ್ತಂಗಡಿ: ವೈದ್ಯಕೀಯ ಚಿಕಿತ್ಸೆಯ ದಾಖಲೆಯ ವಿಚಾರದಲ್ಲಿ ತಂದೆ-ಮಗನ ನಡುವೆ ಜಗಳ ಉಂಟಾಗಿ ಗಲಾಟೆ ವಿಕೋಪಕ್ಕೆ ತೆರಳಿ ತಂದೆಯೇ ಮಗನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಅ.29ರ ರಾತ್ರಿ ಉಜಿರೆಯಲ್ಲಿ ನಡೆದಿದೆ.
ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಕೃಷ್ಣಯ್ಯ ಆಚಾರ್(75) ಅವರ ಪುತ್ರ ಜಗದೀಶ್(30ವ) ಎಂಬವರು ಈ ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ತಂದೆ ಕೃಷ್ಣಯ್ಯ ಆಚಾರ್ ಮಗನನ್ನು ಕೊಲೆಗೈದ ಆರೋಪಿ.
ಭಾನುವಾರ ರಾತ್ರಿಯ ವೇಳೆ ವೈದ್ಯಕೀಯ ಚಿಕಿತ್ಸೆಯ ದಾಖಲೆ ನೀಡುವಂತೆ ತಂದೆ ಹಾಗೂ ಮಗನ ನಡುವೆ ಮಾತಿನ ಜಗಳ ನಡೆದಿದೆ. ಇದು ವಿಕೋಪಕ್ಕೆ ತಿರುಗಿದಾಗ ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದಾರೆ. ಈ ವೇಳೆ ಮಗ ಜಗದೀಶ್ ಕಾಲಿನಿಂದ ತುಳಿದು ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕೃಷ್ಣಯ್ಯ ಆಚಾರ್ ಅಲ್ಲೇ ಕಪಾಟಿನಲ್ಲಿದ್ದ ಚೂರಿಯನ್ನು ತೆಗೆದು ಹೊರಬಂದು ಜಗದೀಶನಿಗೆ ಎಡ ಭುಜಕ್ಕೆ ಹಾಗೂ ಎಡ ಎದೆ ಭಾಗಕ್ಕೆ ಚೂರಿಯಿಂದ ಇರಿದಿದ್ದಾರೆ. ಇರಿತಕ್ಕೆ ಒಳಗಾಗಿ ಕುಸಿದು ಬಿದ್ದು ಜಗದೀಶ್ ಮೃತಪಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ಜಗದೀಶನ ಅಣ್ಣ ಗಣೇಶ್ ನೀಡಿರುವ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ ನಂ 107/2023 ಕಲಂ;302 ಐಪಿಸಿ ಪ್ರಕರಣ ದಾಖಲಿಸಲಾಗಿದೆ.
BELTHANGADY
ಭಾರೀ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಸಾಲು ಸಾಲು ಗುಡ್ಡ ಕುಸಿತ; ಫುಲ್ ಟ್ರಾಫಿಕ್ ಜಾಮ್
ಚಿಕ್ಕಮಗಳೂರು: ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮವಾಗಿ ಚಾರ್ಮಡಿ ಘಾಟ್‌ನಲ್ಲಿ ಸಾಲು ಸಾಲು ಗುಡ್ಡ ಕುಸಿತವಾಗಿದೆ. ಧಾರಾಕಾರ ಮಳೆಯಿಂದ ನೀರು ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದ್ದು, ಹೀಗಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳು ಹಿಂದಕ್ಕೂ ಹೋಗದೇ, ಮುಂದಕ್ಕೆ ಹೋಗದೆ ಮಧ್ಯವೇ ಪರದಾಡುವಂತಾಗಿದೆ.
ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಕ್ಕಿಂಜೆ, ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಜಲಮಯವಾಗಿದೆ. ನೆರಿಯಾ, ಪುಲ್ಲಾಜೆ ಸೇತುವೆಗಳು ಮುಳುಗಡೆಯಗಿದೆ.
ಚಾರ್ಮಾಡಿಯ 3ನೇ ತಿರುವಿನಲ್ಲಿ ರಸ್ತೆ ಮೇಲೆ ನೀರು ನದಿಯಂತೆ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
BELTHANGADY
ಬೆಳ್ತಂಗಡಿ: ಸಹಾಯದ ಹೆಸರಲ್ಲಿ ಅಪರಿಚಿತರಿಂದ ವಂಚನೆ
ಬೆಳ್ತಂಗಡಿ: ಸಹಾಯ ಮಾಡುವ ಹೆಸರು ಹೇಳಿ ಬ್ಯಾಂಕ್ ಖಾತೆಯಿಂದ ಇನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಅಬೂಬಕ್ಕರ್ (71) ಅವರ ಹಣ ಎಗರಿಸಿದ ಘಟನೆ ಬೆಳ್ತಂಗಡಿ ಗೇರಕಟ್ಟೆ ಕೆನರಾ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ನಡೆದಿದೆ.
ಅ.2 ರಂದು ಮಧ್ಯಾಹ್ನ 12 ಗಂಟೆಗೆ ಹಣ ಡ್ರಾ ಮಾಡುತ್ತಿರುವಾಗ ಒಳ ಪ್ರವೇಶಿಸಿದ ಅಪರಿಚಿತರಿಬ್ಬರು ಹಿಂದಿಯಲ್ಲಿ ಮಾತಾಡಿ ಸಹಾಯಕ್ಕೆ ಬಂದಿದ್ದರು. ಅಬಾಬಕ್ಕರ್ ಸಹಾಯದ ಅಗತ್ಯ ಇಲ್ಲ ಎಂದು ಹೇಳಿದರೂ, ಒಳಗಡೆಯೇ ನಿಂತಿದ್ದರು. ಮಧ್ಯಾಹ್ನ 12 ಗಂಟೆಗೆ ಹಣ ತೆಗೆದು ಎಟಿಎಂ ಕೇಂದ್ರದಿಂದ ಕಾರ್ಡ್ ಸಹಿತ ಹೊರಗೆ ಹೋಗಿದ್ದರು. ನಂತರ ಅ.4 ರಂದು ಅಳಿಯ ಹಾಗೂ ಮಗ ಹಾಕಿದ ಹಣವನ್ನು ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಹೋದಾಗ ಕಾರ್ಡ್ ರೀಡ್ ಆಗಲಿಲ್ಲ.
ಅನುಮಾನದಿಂದ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಎಟಿಎಂ ಕಾರ್ಡ್ ಬದಲಾಗಿದೆ ಎಂದು ತಿಳಿಸಿದ್ದು, ನಂತರ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿದ್ದ 49,200 ರೂ. ಅನ್ನು ವಂಚಿಸಿರುವುದು ಗೊತ್ತಾಯಿತು.
ಅ.2 ರಂದು ಎಟಿಎಂ ಕೇಂದ್ರದಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಎಟಿಎಂ ಕೇಂದ್ರದಲ್ಲಿ ತೆಗೆದು ಕಳವು ಮಾಡಿದ್ದು, ಈ ಬಗ್ಗೆ ವಂಚಿಸಿ ಕಳವು ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹಕರಿಸಿ, ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗುತ್ತಿದೆ.
ಸಂಪರ್ಕಿಸಬೇಕಾದ ಸಂಖ್ಯೆ: 08256-232093
BELTHANGADY
ಉಕ್ಕಿ ಹರಿದ ನದಿಗಳು; ರಾತ್ರೋ ರಾತ್ರಿ ಭಯಾನಕ ವಾತವರಣ ಸೃಷ್ಠಿ
ಬೆಳ್ತಂಗಡಿ: ಅಚಾನಕ್ಕಾಗಿ ಬಂದ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಜನರು ಆತಂಕಕ್ಕೊಳಗಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನಿನ್ನೆ (ಅ.8) ರಾತ್ರಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಚಾರ್ಮಾಡಿ, ದಿಡುಪೆ, ನೆರಿಯ ಭಾಗದ ನದಿಗಳಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆಗೆ ನೀರು ನುಗ್ಗಿದೆ.
ನೆರಿಯಾದಲ್ಲಿ ಸೇತುವೆ ಮುಳುಗಡೆಯಾಗಿದಲ್ಲದೆ ಅಲ್ಲಲ್ಲಿ ರಸ್ತೆಗೆ ತೋಟಗಳಿಗೆ ನೀರು ನುಗ್ಗಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಉಂಟಾಗಿದೆ. ಸ್ಥಳೀಯರು ಹೇಳುವಂತೆ 2019 ರ ನೆರೆಯ ನಂತರ ಮಂಗಳವಾರ ರಾತ್ರಿ ನದಿಗಳಲ್ಲಿ ಅತೀ ಹೆಚ್ಚು ನೀರು ಬಂದಿದೆ. ರಾತ್ರಿ 7 ಗಂಟೆಯಿಂದ 9 ಗಂಟೆಯವರೆಗೆ ನೀರಿನ ಮಟ್ಟ ಏರಿಕೆ ಕಂಡಿದ್ದು ಮತ್ತೆ ಇಳಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
- LATEST NEWS6 days ago
ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಹಂಚಿಕೆ; ನಾಲ್ವರು ವಿದ್ಯಾರ್ಥಿಗಳ ಬಂಧನ
- FILM3 days ago
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
- BIG BOSS7 days ago
ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು.. ಏನಿದು ವಿವಾದ?
- DAKSHINA KANNADA5 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು