Friday, July 1, 2022

ಬೆಳ್ತಂಗಡಿ: ಕನ್ಯಾಡಿ ದಿನೇಶ್ ಕೊಲೆ ಪ್ರಕರಣದ ಆರೋಪಿಗೆ ಜಾಮೀನು

ಬೆಳ್ತಂಗಡಿ: ಇಲ್ಲಿನ ಕನ್ಯಾಡಿಯ ದಿನೇಶ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿದೆ.


ಇಲ್ಲಿನ ಕನ್ಯಾಡಿ ರಾಮಮಂದಿರದ ಬಳಿ ವ್ಯಾಪಾರ ಮಾಡುತ್ತಿದ್ದ ದಿನೇಶ್ ಜಾಗದ ನೋಂದಣಿ ವಿಚಾರದಲ್ಲಿ ಆರೋಪಿ ಕೃಷ್ಣ ಫೆ.23ರಂದು ದಿನೇಶ್‍ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ವೀಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಹಲ್ಲೆಗೆ ಒಳಗಾಗಿದ್ದ ದಿನೇಶ್ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ದಿನೇಶ್ ಕೊನೆಯುಸಿರೆಳೆದಿದ್ದರು.

ಈ ಬಗ್ಗೆ ದಿನೇಶ್ ತಾಯಿ ಪದ್ಮಾವತಿ ಅವರು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

LEAVE A REPLY

Please enter your comment!
Please enter your name here

Hot Topics

ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಸರಕಾರ: ಪುತ್ತೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಪುತ್ತೂರು: ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ಬಂಡಾಯ ಶಾಸಕರೊಂದಿಗೆ ಮೈತ್ರಿ ಸರಕಾರ ರಚನೆ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಕಛೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ...

ಬಂಟ್ವಾಳ: ಗೋಕಳ್ಳತನ-ದನದ ಮಾಂಸ ಸಹಿತ ಆರೋಪಿಗಳು ವಶಕ್ಕೆ

ಬಂಟ್ವಾಳ: ಕಳ್ಳತನ ಮಾಡಿದ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ದನದ ಮಾಂಸ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೋಳ್ತಮಜಲು ಎಂಬಲ್ಲಿ...

ಮಹಿಳೆಯರ ಸ್ವಾವಲಂಬಿ ಬದುಕಿಗೆ ಭಾಷ್ಯ ಬರೆದ ಉಡುಪಿಯ ಸವಿತಾ ಶೇಟ್

ಉಡುಪಿ: ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉಡುಪಿಯ ಮಹಿಳೆಯೊಬ್ಬರು ಪ್ರೇರಣೆಯಾಗಿದ್ದಾರೆ. ಉಡುಪಿಯ ಒಳಕಾಡು ನಿವಾಸಿ ಸವಿತಾ ಶೇಟ್ ಎಂಬವರೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ಪೂರ್ತಿದಾಯಕರಾಗಿದ್ದಾರೆ.ಇವರ ಗಂಡ ಉದ್ಯಮಿಯಾಗಿದ್ದು ಹಾಗೂ ಮಗ ಶಿಕ್ಷಕರಾಗಿ ಕೆಲಸ...