BELTHANGADY
52 ಗ್ರಾಹಕರ ಹೆಸರಿನಲ್ಲಿ ನಕಲಿ ಚಿನ್ನವಿಟ್ಟು ಬ್ಯಾಕಿಂಗೂ-ಗ್ರಾಹಕರಿಗೂ ಮೂರು ನಾಮವಿಟ್ಟ ಬೆಳ್ತಂಗಡಿಯ ಮನ್ಮಥ ಆಚಾರಿ
ಬೆಳ್ತಂಗಡಿ: ಇಲ್ಲಿನ ಗ್ರಾಮೀಣ ವಿಕಾಸ ಬ್ಯಾಂಕ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಿನ್ನ ಪರೀಕ್ಷಕ, ನಕಲಿ ಚಿನ್ನವನ್ನು ಬರೋಬ್ಬರಿ 52 ಜನರ ಹೆಸರಿನಲ್ಲಿಟ್ಟು ಬ್ಯಾಂಕ್ಗೆ ಹಾಗೂ ಅಲ್ಲಿನ ಗ್ರಾಹಕರಿಗೆ ಮೂರು ನಾಮ ಎಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ಮೋಸಹೋದವರು ಕಣ್ಣೀರು ಹಾಕುತ್ತಿದ್ದಾರೆ.
ಇದೀಗ ಚಿನ್ನ ಇಟ್ಟ 52 ಜನರ ಮೇಲೆ ಎಫ್ಐಆರ್ ಆಗಿದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದಲ್ಲಿರುವ ಅರಸಿನಮಕ್ಕಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಆಭರಣ ಈಡಿನ ಮೇಲೆ ಸಾಲ ನೀಡುವ ಸಮಯ ಚಿನ್ನದ ಪರಿಶುದ್ಧತೆಯನ್ನು ಮಾಡುವ ಪರೀಕ್ಷಕ ಮನ್ಮಥ ಆಚಾರಿ, ಮತ್ತು ಬ್ಯಾಂಕಿನಲ್ಲಿ 2010ರಿಂದ 2019ರವರೆಗೆ ಮ್ಯಾನೇಜರ್ ಆಗಿದ್ದ ದಾಮೋದರ ನಾಯಕ್,
ಜಯ ಎಸ್, ಎನ್ ಎ ಗಿರಿಧರ ಮತ್ತು ದಿನೇಶ್ ಎಂಬವರು ಪಿತೂರಿ ನಡೆಸಿ 52 ಮಂದಿ ಗ್ರಾಹಕರಿಗೆ ಹಣದ ವಿಚಾರದಲ್ಲಿ ವಂಚನೆ ಮಾಡಿದ್ದಾರೆ ಎಂದು ವಂಚನೆಗೆ ಒಳಗಾಗಿರುವ ಸಂತ್ರಸ್ತರು ಆರೋಪಿಸಿದ್ದಾರೆ. ಜೊತೆಗೆ ಈ ಬಗ್ಗೆ ತನಿಖೆ ನಡೆಸುವಂತೆ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಬ್ಯಾಂಕಿಗೆ ಗ್ರಾಹಕರು ತರುವ ಆಭರಣವನ್ನು ಅಡವು ಇಟ್ಟು ಸಂತ್ರಸ್ತರ ಹೆಸರಿನಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಸಾಲ
ಮಂಜೂರು ಮಾಡಿ ಖಾತೆಗೆ ಹಣ ಜಮೆ ಮಾಡಿದ ಕೂಡಲೇ ನಗದೀಕರಿಸಿ ಮನ್ಮಥ ಆಚಾರಿಗೆ ಪಾವತಿಸುವಂತೆ ವ್ಯವಸ್ಥೆ ಮಾಡಿದ್ದಾರೆ.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮೋಸ ಹೋದ ಸಂತ್ರಸ್ತರಿಗೆ ಅವರ ಚಿನ್ನಾಭರಣವನ್ನು ಮರಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಮರ್ಥವಾಗಿ ತನಿಖೆ ನಡೆಸಿ ಬ್ಯಾಂಕ್ ಸಿಬ್ಬಂದಿ ಮತ್ತು ಚಿನ್ನ ಪರೀಕ್ಷಕ ಒಳ ಸಂಚು ನಡೆಸಿ ನಕಲಿ ಚಿನ್ನ ಅಡಮಾನವಿರಿಸಿ ಬ್ಯಾಂಕಿಗೆ ನಷ್ಟ ಉಂಟು ಮಾಡಿ ವಂಚಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಸೂಕ್ತ ಶಿಕ್ಷೆ ವಿಧಿಸುವಂತೆ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ಗಣೇಶ್ ಕೆ, ಕರುಣಾಕರ ಶಶೀಲ, ರವೀಂದ್ರ ಅರಸಿನ ಮಕ್ಕಿ, ಸುಧೀರ್ ಕುಮಾರ್ ಎಂ ಎಸ್, ಸಂದೀಪ್ ಶಶಿಲ ಮೊದಲಾದವರಿದ್ದರು.
ಕಣ್ಣೀರಿಟ್ಟ 52 ಜನ
ಇಂದು ಬೆಳ್ತಂಗಡಿಯಿಂದ ಬಸ್ ಮೂಲಕ ಬಂದು ಜಿಲ್ಲಾ ಎಸ್ಪಿ ಕಚೇರಿಗೆ ಭೇಟಿ ನೀಡಿದ 52 ಜನರೂ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಹಲವು ಮಹಿಳೆಯರು ಪರೀಕ್ಷಕ ಮನ್ಮಥ ಆಚಾರಿ ನಮಗೆ ಮೋಸ ಮಾಡಿದ್ದಾನೆ. ನಾವು ಬಡವರಾಗಿದ್ದು, ಈ ಸಂಚಿನಿಂದ ಮುಕ್ತಗೊಳಿಸಿ ಎಂದು ಅಲವತ್ತುಕೊಂಡರು.
BELTHANGADY
ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ
ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.
ಮುಂದೆ ಓದಿ..; ಕಾಗೆ ನಿಜಕ್ಕೂ ನಮ್ಮ ಪಿತೃನಾ..?
ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
BANTWAL
ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ
ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.
ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ
ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.
BELTHANGADY
ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾ*ವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ
ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮಕ್ಕೆ ಸಂಬಂಧಪಟ್ಟಂತೆ ಕೊಯ್ಯೂರು ರಸ್ತೆಯ ಬದ್ಯಾರು ಎಂಬಲ್ಲಿ ಹೆಚ್ ಪದ್ಮಗೌಡ ಎಂಬವರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ*ದೇಹ ಪತ್ತೆಯಾಗಿದೆ.
ಮುಂದೆ ನೋಡಿ..; ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!
ಈ ಕೆರೆಗೆ ಸುತ್ತ ಕಾಂಕ್ರೀಟ್ ರಿಂಗ್ ಅಳವಡಿಸಿದ್ದು ನೀರು ಕುಡಿಯಲು ಬಂದ ಕಾಡುಕೋಣ ಮೂರ್ನಾಲ್ಕು ದಿನಗಳ ಹಿಂದೆಯೇ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಹೆಚ್ಚೂ ಕಮ್ಮಿ 10 ಕ್ವಿಂಟಾಲ್ ತೂಕ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಕೊಳೆತು ವಾಸನೆ ಬೀರುತ್ತಿತ್ತು. ಶೌರ್ಯ ವಿಪತ್ತು ತಂಡಕ್ಕೆ ಬಂದ ಮಾಹಿತಿಯಂತೆ ಉಜಿರೆ- ಬೆಳಾಲು ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ಮುಳುಗು ಪರಿಣತ ಹರೀಶ ಕೂಡುಗೆ, ಮುಹಮ್ಮದ್ ಶರೀಫ್ ಬೆಳಾಲು, ಅವಿನಾಶ್ ಭಿಡೆ ಅರಸಿಮನಕ್ಕಿ, ರವೀಂದ್ರ ಉಜಿರೆ, ಸುರೇಂದ್ರ ಉಜಿರೆ, ಅನಿಲ್ ಚಾರ್ಮಾಡಿ, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಧರ್ಮಸ್ಥಳ, ನಳಿನ್ ಕುಮಾರ್ ಧರ್ಮಸ್ಥಳ ಮೊದಲಾದವರು ಸಾರ್ವಜನಿಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಕಾಡುಕೋಣದ ಕಳೇಬರವನ್ನು ಮೇಲೆತ್ತಿದ್ದಾರೆ. ಬಳಿಕ ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ಪ್ರಕ್ರೀಯೆ ನಡೆಸಿದ್ದು, ತೋಟದಲ್ಲೇ ಹೊಂಡ ತೋಡಿ ಅಂತ್ಯಸಂಸ್ಕಾರ ನಡೆಸಲಾಗಿದೆ.
- FILM6 days ago
“ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?
- DAKSHINA KANNADA6 days ago
ನಮ್ಮ ಮಾತುಗಳಿಗೆ ಅಸ್ತು ಅನ್ನುವ ಅಶ್ವಿನಿ ದೇವತೆಗಳು – ಯಾರಿವರು?
- LATEST NEWS6 days ago
ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್ ಲೈಸೆನ್ಸ್ ಪಡೆದ ಏಷ್ಯಾದ ಮೊದಲ ಮಹಿಳೆ!
- DAKSHINA KANNADA5 days ago
ಪತ್ನಿ ಮಗಳೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಪದ್ಮರಾಜ್ ಪೂಜಾರಿ