ಕಾಸರಗೋಡು: ಕಾಸರಗೋಡಿನ ಬದಿಯಡ್ಕ ಎಂಬಲ್ಲಿ ಖ್ಯಾತ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ದಂತ ವೈದ್ಯ ಡಾ.ಕೃಷ್ಣಮೂರ್ತಿ ಎಸ್. (57) ಅವರು ನಾಪತ್ತೆಯಾಗಿರುವುದರ ಬಗ್ಗೆ ದೂರು ದಾಖಲಾಗಿದೆ.
ಡಾ.ಕೃಷ್ಣಮೂರ್ತಿ ಅವರು ನ.8 ರಂದು ಮಧ್ಯಾಹ್ನ ಅವರು ನಾಪತ್ತೆಯಾಗಿದ್ದು ಅವರ ಬೈಕ್ ಕುಂಬಳೆಯಲ್ಲಿ ಪತ್ತೆಯಾಗಿದೆ.
ಇನ್ನು ಇವರ ನಾಪತ್ತೆಯ ಬಗ್ಗೆ ಅವರ ಕುಟುಂಬ ಸದಸ್ಯರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಮಾಹಿತಿ ಲಭಿಸಿದವರು 8296818248 ನಂಬರಿಗೆ ಅಥವಾ ಬದಿಯಡ್ಕ ಪೊಲೀಸ್ ಠಾಣೆಗೆ(04998 284033) ಸಂಪರ್ಕಿಸಲು ಕೋರಲಾಗಿದೆ.
ಡಾ.ಕೃಷ್ಣಮೂರ್ತಿ ಅವರು ನೀಲಿ ಬಣ್ಣದ ಅಂಗಿ ಹಾಗು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.