ಮಂಗಳೂರು: ಮುಸ್ಲಿಂ ಯುವಕನೊಬ್ಬ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಆಕೆ ನೀಡಿರುವ ದೂರಿನಲ್ಲಿ ‘ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ ಮೊಬೈಲ್ ಶಾಪ್‌ನಲ್ಲೇ ಮೊಬೈಲ್ ರಿಚಾರ್ಜ್ ಮಾಡುತ್ತಿದ್ದೆ.
ಆಗ ಖಲೀಲ್‌ನ ಪರಿಚಯವಾಗಿತ್ತು. 2021ರ ಜನವರಿ 14ರಂದು ಖಲೀಲ್ ಒಳ್ಳೆಯ ಕೆಲಸ ಮತ್ತು ಹಣ ಕೊಡುವುದಾಗಿ ಆಮಿಷವೊಡ್ಡಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಲಾಪುವಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಮಹಿಳೆಯರಿಗೆ ಪರಿಚಯಿಸಿದ.
ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು, ಕುರಾನ್ ಓದಲು ಒತ್ತಾಯ ಮಾಡಿ ನಮಾಝ್ ಮಾಡಿಸಿದ್ದ. ಅನಂತರ ಲೈಂಗಿಕ ಕಿರುಕುಳ ನೀಡಿದ್ದಾನೆ. ಹಿಂದೂ ಹೆಸರನ್ನು ಆಯಿಷಾ ಎಂದು ಬದಲಾಯಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೆಲಸದಿಂದ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾನೆ.
ಬುರ್ಖಾ ಧರಿಸುವಂತೆ ಒತ್ತಾಯಿಸಿ ಬುರ್ಖಾ ತಂದು ಕೊಟ್ಟಿದ್ದಾನೆ. ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹರಿಗೆ ವೈದ್ಯೆ ಡಾ ಜಮೀಲಾ , ಖಲೀಲ್ ಮತ್ತು ಇದಕ್ಕೆ ಸಹಕಾರ ನೀಡಿದ ಒಟ್ಟು 6 ಮಂದಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.