Tuesday, January 31, 2023

ನಂತೂರಿನಲ್ಲಿ ಜೋಡಿ ಮೇಲೆ ದಾಳಿ-ಮೂವರು ಹಿಂದೂ ಕಾರ್ಯಕರ್ತರು ಅರೆಸ್ಟ್

ಮಂಗಳೂರು:ಮಂಗಳೂರಿನ ನಂತೂರು ಸರ್ಕಲ್‌ ಬಳಿ ಗುರುವಾರ ಸಂಜೆ ಭಿನ್ನ ಕೋಮಿನ ಜೋಡಿ ಮೇಲೆ ದಾಳಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಸುರತ್ಕಲ್‌ ನಿವಾಸಿ ಮುತ್ತು(18), ಪ್ರಕಾಶ್‌(21) ಮತ್ತು ಅಸೈಗೋಳಿ ನಿವಾಸಿ ರಾಕೇಶ್‌(23) ಎಂಬವರನ್ನು ಬಂಧಿಸಿದ್ದಾರೆ.


ಈ ಮೂವರೂ ಭಜರಂಗದಳ ಮತ್ತು ವಿಶ್ವಹಿಂದು ಪರಿಷತ್‌ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 24ರಂದು ಸಂಜೆ ಕಾರ್ಕಳದ ನಿಟ್ಟೆಯಿಂದ ತನ್ನ ಸಹಪಾಠಿ ಎಂದು ಹೇಳಿಕೊಂಡಿರುವ ಯುವತಿಯ ಜೊತೆಗೆ ಅಗಮಿಸುತ್ತಿದ್ದ ಜೆಪ್ಪು ನಿವಾಸಿ ಸೈಯ್ಯದ್ ರಶೀಮ್‌ನನ್ನು ನಂತೂರು ಸರ್ಕಲ್‌ ಬಳಿ ಏಕಾಏಕಿ ಬಸ್ಸನ್ನು ಅಡ್ಡ ಹಾಕಿ ಒಳನುಗ್ಗಿದ ತಂಡ, ಯುವಕನ ಬಳಿ ಇದ್ದ ಐಡಿ ಕಾರ್ಡ್‌ ತೋರಿಸಲು ಹೇಳಿ ಬಳಿಕ ಬಸ್ಸಿನಿಂದ ಕೆಳಕ್ಕೆ ಎಳೆದು ಹಾಕಿ ಹಲ್ಲೆ ನಡೆಸಿದ್ದರು.

ಆತನ ಜೊತೆಗೆ ಇದ್ದ ಭಿನ್ನ ಕೋಮಿನ ಯುವತಿಗೂ ಅಶ್ಲೀಲ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದರು. ಅದಲ್ಲದೇ ಆರೋಪಿಗಳು ದೊಣ್ಣೆ, ಬೆತ್ತ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದರು ಎಂದು ಸಂತ್ರಸ್ತ ಯುವಕ ಸೈಯ್ಯದ್‌ ರಶೀಮ್‌ ಕದ್ರಿ ಠಾಣೆಗೆ ದೂರು ನೀಡಿದ್ದರು.

ಸೈಯ್ಯದ್ ರಶೀಮ್‌ ಹಾಗೂ ಯುವತಿ ನಗರದ ಕಾಲೇಜಿನ ಸಹಪಾಠಿಗಳಾಗಿದ್ದರು. ಅಕ್ಟೋಬರ್‌ ತಿಂಗಳಿನಲ್ಲೂ ಭಿನ್ನ ಕೋಮಿನ ಯುವತಿ ಜೊತೆಗೆ ಬೆಂಗಳೂರಿಗೆ ಹೋಗುತ್ತಿದ್ದಾಗ ಮುಸ್ಲಿಂ ಯುವಕನನ್ನು ಬಸ್ಸಿನಿಂದ ಕೆಳಕ್ಕೆ ಇಳಿಸಿದ ಭಜರಂಗದಳ ಕಾರ್ಯಕರ್ತರು ಪಂಪ್ವೆಲ್ ಬಳಿ ಹಲ್ಲೆ ನಡೆಸಿದ್ದರು.

ನಂತೂರಿನ ಸೈ್ಯದ್‌ ರಶೀಮ್‌ ಮೇಲೆ ನಡೆದ ಹಲ್ಲೆ ಪ್ರಕರಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಡಿಜಿಪಿ ಅಲೋಕ್‌ ಕುಮಾರ್ ಅವರು ಟ್ವೀಟ್‌ ಮೂಲಕ ತಿಳಿಸಿದ್ದರು.

LEAVE A REPLY

Please enter your comment!
Please enter your name here

Hot Topics

ಮುಂಬೈ- ಅಹ್ಮದಾಬಾದ್ ಹೆದ್ದಾರಿಯಲ್ಲಿ ಬಸ್‌ ಗೆ ಕಾರು ಡಿಕ್ಕಿ : ನಾಲ್ವರು ಮೃತ್ಯು..!

ಮುಂಬೈ:ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ಎಂಬಲ್ಲಿ ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯ ಚರೋಟಿಯಲ್ಲಿ  ಮುಂಜಾನೆ ಐಷಾರಾಮಿ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್...

15 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 32ರ ಮಹಿಳೆ..!

ಮುಂಬೈ: ಮಹಿಳೆಯೊಬ್ಬಳು 15 ವರ್ಷದ ಬಾಲಕನ ಮೇಲೇ ಲೈಂಗಿಕ ದೌರ್ಜನ್ಯ (Sexual Abuse) ಎಸಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ನಡೆದಿದೆ.ಈ ಸಂಬಂಧ ಮಹಿಳೆಯ ವಿರುದ್ಧ ಪೋಸ್ಕೋ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.32...

“ನಾಯಿ ಥರ ಅವರ ಹಿಂದೆ ಹೋಗ್ತಾರಲ್ವಾ..ನಾಚಿಕೆ ಇಲ್ವಾ.!?” ಉಳ್ಳಾಲ ಪೊಲೀಸರಿಗೆ ಶಾಸಕ ಖಾದರ್ ಕ್ಲಾಸ್..!

ಮಂಗಳೂರು: ಜನ ಸಾಮಾನ್ಯರ ಮನೆಯ ತಳಪಾಯ ಬಿದ್ದುಹೋಗುವ ಸ್ಥಿತಿ ನಿರ್ಮಾಣ ಮಾಡಿದ ಮರಳು ಮಾಫಿಯಾ ವಿರುದ್ದ ಉಳ್ಳಾಲ ಶಾಸಕ ಯು ಟಿ. ಖಾದರ್ ಗರಂ ಆಗಿದ್ದಾರೆ.ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗದ ಉಳ್ಳಾಲ ಪೊಲೀಸರು...