Saturday, May 21, 2022

ಬಂಟ್ವಾಳದಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ: ಪ್ರಕರಣ ದಾಖಲು

ಬಂಟ್ವಾಳ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಹಿತ ಕರ್ತವ್ಯನಿರತ ಸಿಬ್ಬಂದಿ ಮೇಲೆ ಕೈಮಾಡಿ, ನಿಂದಿಸಿ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.


ಈ ಕುರಿತು ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ದೂರಿನಂತೆ ಉಮ್ಮರ್ ಫಾರೂಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಈತನ ಪತ್ನಿ ಹೆರಿಗೆಗಾಗಿ  ಒಳರೋಗಿಯಾಗಿ ದಾಖಲಾಗಿದ್ದ ಸಂದರ್ಭ ರಾತ್ರಿ ಸುಮಾರು 11ರ ವೇಳೆ ಹೆಂಡತಿಯನ್ನು ನೋಡಬೇಕು ಎಂದು ಸಿಬ್ಬಂದಿಯಲ್ಲಿ ಕೇಳಿದ ಸಂದರ್ಭ, ರಾತ್ರಿ ಸಮಯ ಮಹಿಳೆ ವಾರ್ಡ್ ಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರೂ ಆರೋಪಿ, ಕೈಯಿಂದ ದೂಡಿ ಒಳಗೆ ಹೋಗಿರುತ್ತಾನೆ. ಬಳಿಕ ಸಿಬ್ಬಂದಿ ಕರ್ತವ್ಯ ನಿರತ ವೈದ್ಯರಿಗೆ ತಿಳಿಸಿದಾಗ ವೈದ್ಯರು ಬಂದು ರಾತ್ರಿ ಸಮಯದಲ್ಲಿ ಹೆರಿಗೆ ವಾರ್ಡ್ ಗೆ ಹೋಗಲು ಅವಕಾಶ ಇರುವುದಿಲ್ಲ ಎಂದು ಹೇಳಿದಾಗ ಆರೋಪಿ ನಿಂದಿಸಿ ದೂಡಿ ಬೆದರಿಕೆ ಹಾಕಿ ಹೋಗಿದ್ದಾಗಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮರಕ್ಕೆ ಡಿಕ್ಕಿ ಹೊಡೆದ ಟೆಂಪೋ ಟ್ರಾಕ್ಸ್: 3 ಮಕ್ಕಳು ಸೇರಿ 7 ಮಂದಿ ದುರಂತ ಅಂತ್ಯ

ಧಾರವಾಡ: ಟೆಂಪೋ ಟ್ರಾಕ್ಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 7 ಜನ ಮೃತಪಟ್ಟಿದ್ದಾರೆ. 13 ಜನರಿಗೆ ಗಾಯಗಳಾಗಿವೆ. ಅನನ್ಯ, ಹರೀಶ, ಶಿಲ್ಪಾ , ನೀಲವ್ಚ, ಮಧುಶ್ರೀ, ಮಹೇಶ್ವರಯ್ಯ, ಶಂಭುಲಿಂಗಯ್ಯ, ಸಾವನ್ನಪ್ಪಿದ ದುರ್ದೈವಿಗಳು.ಬಾಡ ಗ್ರಾಮದ ಬಳಿ...

ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ ಉದಯ್ ಚೌಟ ಇನ್ನಿಲ್ಲ

ಬಂಟ್ವಾಳ: ಏಕಲವ್ಯ ಪ್ರಶಸ್ತಿ ವಿಜೇತ ಕಬಡ್ಡಿ ಆಟಗಾರ, ಉದಯ್ ಚೌಟ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.ಬಂಟ್ವಾಳ ತಾಲೂಕು ಮಾಣಿಯ ಬದಿಗುಡ್ಡೆ ನಿವಾಸಿಯಾಗಿರುವ ಉದಯ್ ಚೌಟ ಕಬಡ್ಡಿ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದರು.ಅಲ್ಲದೇ ದ.ಕ...

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿ

ಪುತ್ತೂರು: ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಮುಖಾಮುಖಿ ಢಿಕ್ಕಿಯಾಗಿ ಕಾರು ಹಾಗೂ ಬಸ್ಸು ಜಖಂಗೊಂಡ ಘಟನೆ ಪುತ್ತೂರು–ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕೋಡಿಂಬಾಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಇಂದು ಬೆಳಿಗ್ಗೆ 7.30ರ ಸುಮಾರಿಗೆ ಕೋಡಿಂಬಾಡಿಯ ವಿನಾಯಕ ನಗರದ...