Connect with us

LATEST NEWS

ಮತ್ತೋರ್ವ IPS ಅಧಿಕಾರಿ ರವಿ ಚನ್ನಣ್ಣನವರ್‌ ರಾಜಕೀಯಕ್ಕೆ..?

Published

on

ಬೆಂಗಳೂರು: ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ಘಟಕದ ರಾಜ್ಯಾಧ್ಯಕ್ಷ. ಈಗ ಅವರಂತೆಯೇ ರಾಜ್ಯದ ಮತ್ತೊಬ್ಬ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಗುಸು ಗುಸು ಸುದ್ದಿ ಹರಿದಾಡುತ್ತಿದೆ. ಕಾರಣ ಆ ಅಧಿಕಾರಿಯ ಮಠದ ಭೇಟಿಗಳು.


ಈಗಾಗಲೇ ಐಪಿಎಸ್‌ ಹುದ್ದೆ ತೊರೆದು ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾಗಿದ್ದು, ತಮಿಳುನಾಡು ರಾಜ್ಯಾಧ್ಯಕ್ಷರಾಗಿದ್ದಾರೆ. ಈ ಮಧ್ಯೆ ರವಿ ಚೆನ್ನಣ್ಣನವರ್​ ನಡೆ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಚುನಾವಣೆಗೆ ಪದಾರ್ಪಣೆ ಮಾಡ್ತಾರೆ ಅಂತಾ ಹೇಳಲಾಗ್ತಿದೆ. ಅದಕ್ಕಾಗಿ ಐಪಿಎಸ್​ ಅಧಿಕಾರಿ ಹಲವು ಮಠಗಳ ಯಾತ್ರೆ ಕೈಗೊಂಡಿದ್ದಾರೆ. ಚಿತ್ರದುರ್ಗದ ಬಸವ ಮಾಚಿದೇವ ಮಹಾಸ್ವಾಮಿಗಳನ್ನ ಭೇಟಿ ಮಾಡಿರುವ ಚೆನ್ನಣ್ಣನವರ್, ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳ ಆಶೀರ್ವಾದವನ್ನೂ ಪಡೆದಿದ್ದಾರೆ.


ಹರಿಹರ ಪೀಠದ ವಚನಾನಂದ ಶ್ರೀಗಲು, ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿವನ್ನೂ ಚೆನ್ನಣ್ಣನವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯನ್ನ ರವಿಯವರು ಹೊಂದಿದ್ದಾರೆ ಎನ್ನಲಾಗುತ್ತಿದೆ.
ದೊಡ್ಡಬಳ್ಳಾಪುರ ಅಥವಾ ನೆಲಮಂಗಲ ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ರವಿ ಚೆನ್ನಣ್ಣನವರ್​ ಅವರ ಮಠಗಳ ಯಾತ್ರೆಯ ಹಿಂದೆ ಇಷ್ಟೆಲ್ಲಾ ಸುದ್ದಿಗಳು ಗುಲ್ಲೆದ್ದಿವೆ. ಆದರೆ, ತಮ್ಮ ರಾಜಕೀಯ ಎಂಟ್ರಿಯ ಊಹಾಪೋಹಗಳ ಬಗ್ಗೆ ಖುದ್ದಿ ಅವರೇ ಸ್ಪಷ್ಟನೆ ನೀಡಬೇಕಿದೆ.

DAKSHINA KANNADA

ಮಂಗಳೂರು : ಬಂಟರ ಮಾತೃ ಸಂಘದ 103 ನೇ ವಾರ್ಷಿಕ ಸರ್ವ ಸದಸ್ಯರ ಸಭೆ

Published

on

ಮಂಗಳೂರು : ಆರ್ಥಿಕವಾಗಿ ಹಿಂದುಳಿದ ಬಂಟ ಸಮಾಜದವರ ಏಳಿಗೆಗೆ ಮತ್ತು ಸಮಗ್ರ ಅಭಿವೃದ್ದಿಗೆ ಬಂಟರ ಯಾನೆ ನಾಡವರ ಮಾತೃಸಂಘ ಸ್ಪಂದಿಸುತ್ತಿದೆ. ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ ಮತ್ತು ಒಟ್ಟು ಜೀವನದ ವ್ಯವಸ್ಥೆಗೆ ಬಂಟರ ಮಾತೃಸಂಘ ಸ್ಪಂದಿಸಿ ಕೆಲಸ ಮಾಡುತ್ತಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.


ಬಂಟ್ಸ್ ಹಾಸ್ಟೇಲ್ ನಲ್ಲಿರುವ ಗೀತಾ ಎಸ್. ಎಮ್.ಶೆಟ್ಟಿ ಸಭಾಭವನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ 2022-23 ನೇ ಸಾಲಿನ 103 ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ 115 ವರ್ಷಗಳ ಇತಿಹಾಸ ಇದೆ. ಈ ನಿಟ್ಟಿನಲ್ಲಿ ಮಾತೃಸಂಘದ ಬಹು ಕನಸಿನ ಯೋಜನೆಯಾದ ಶತಮಾನೋತ್ಸವ ಕಟ್ಟಡ ನಿರ್ಮಾಣ ಸಮಿತಿಗೆ ಎಂಆರ್ ಜಿ ಗ್ರೂಪ್ ನ ಚೆಯರ್ ಮೆನ್ ಕೆ ಪ್ರಕಾಶ್ ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಪ್ರಕಾಶ್ ಶೆಟ್ಟಿಯವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅದೇ ರೀತಿ ವಿಶ್ವ ಬಂಟರ ಮಾಹಿತಿ ಕೋಶ ಸಮಿತಿಗೆ ಹೇರಂಭ ಇಂಡಸ್ಟೀಸ್ ನ ಆಡಳಿತ ನಿರ್ದೇಶಕ ಕನ್ಯಾನ ಕೂಳೂರು ಸದಾಶಿವ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಒಂದು ಯೋಜನೆಗೆ ಒಂದು ಕೋಟಿ ರೂಪಾಯಿಗೂ ಮಿಕ್ಕಿ ಖರ್ಚಾಗಲಿದ್ದು, ಅದರ ಸಂಪೂರ್ಣ ವೆಚ್ಚವನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಭರಿಸಲಿದ್ದಾರೆಂದು ಅಜಿತ್ ಕುಮಾರ್ ರೈ ತಿಳಿಸಿದರು.
ಶ್ರೀ ರಾಮಕೃಷ್ಣ ಶಾಲಾ ಕಾಲೇಜ್ ನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಇಲ್ಲಿರುವ ಮಕ್ಕಳಿಗೆ ಹಲವಾರು ಸವಲತ್ತುಗಳು ದೊರಕುತ್ತಿದೆ. ಸಮಾಜದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು.

ಮೀಸಲಾತಿಯಲ್ಲಿ ಬಂಟರಿಗೆ ಅನ್ಯಾಯ :


ಬಂಟ ಸಮಾಜವನ್ನು ಕೇಂದ್ರ ಸರಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಸಮಾಜವು ಪ್ರವರ್ಗ 2 ( ಎ) ಯಲ್ಲಿ ಸೇರಲು ಅರ್ಹರಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3 (ಬಿ) ಯಲ್ಲಿ ಸೇರಿಸಿರುವ ಕಾರಣ ಸಮುದಾಯ ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತರಾಗಿ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.

ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಹಾಗೂ ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವನ್ನು ಪ್ರವರ್ಗ 3 (ಬಿ) ಯಿಂದ ಪ್ರವರ್ಗ 2 (ಎ) ಗೆ ಸೇರ್ಪಡೆಗೊಳಿಸಲು ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಿ ಮೀಸಲಾತಿಯಲ್ಲಿ ಸೇರಿಸುವ ಉದ್ದೇಶದಿಂದ ಹಾಗೂ ಸಮಾಜದ ನಿಜವಾದ ಸ್ಥಿತಿಗತಿಯನ್ನು ಸರಕಾರದ ಗಮನಕ್ಕೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಬಾಂಧವ್ಯ ಎಂಬ ನಾಮಾಂಕಿತದೊಂದಿಗೆ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈವಾಹಿಕ, ಆರೋಗ್ಯ, ವಸತಿ, ಧಾರ್ಮಿಕ ಮತ್ತು ಒಟ್ಟು ಜೀವನದ ವ್ಯವಸ್ಥೆ ಹಾಗೂ ಇತರ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಮಹೋನ್ನತವಾದ ದೂರಗಾಮಿ ಪರಿಣಾಮವನ್ನು ಬೀರುವ “ವಿಶ್ವ ಬಂಟರ ಮಾಹಿತಿ ಕೋಶ”ವನ್ನು ತಯಾರು ಮಾಡುವ ಒಂದು ಅನುಕರಣೀಯ ಶ್ರೇಷ್ಠ ಕೆಲಸವನ್ನು ಮಾಡಲು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಅಜಿತ್ ಕುಮಾರ್ ರೈ ತಿಳಿಸಿದರು.
ಸಾಮಾಜಿಕ ಜಾಲತಾಣದ ಮೂಲಕ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ವಿಶ್ವ ಬಂಟರ ಮಾಹಿತಿಕೋಶ ಪೂರ್ಣವಾದ ನಂತರ ಬಂಟ ಸಮಾಜ ಬಾಂಧವರ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯುವ ಅವಕಾಶ ಒದಗಿ ಬರುತ್ತದೆ. ಇದರಿಂದ ಸಮಾಜ ಬಾಂಧವರು ಹಲವಾರು ವಿಧದ ಪ್ರಯೋಜನಗಳನ್ನು ಪಡೆಯಬಹುದು ಎಂದರು‌.


2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ ಮಂಡಿಸಿದರು. 2022-23 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಸಿಎ. ರಾಮ್ ಮೋಹನ್ ರೈ ಟಿ ಮಂಡಿಸಿದರು. ಸಭೆಯಲ್ಲಿ ವಿದ್ಯಾರ್ಥಿ ಭವನಗಳ, ಶಾಲಾ ಕಾಲೇಜುಗಳ, ತಾಲೂಕು ಸಮಿತಿಗಳ ವಾರ್ಷಿಕ ವರದಿಯನ್ನು ಮಂಡಿಸಲಾಯಿತು.

ಇದನ್ನೂ ಓದಿ : ಮತ್ತೆ ಕಿರುತೆರೆಗೆ ಲಗ್ಗೆ ಇಟ್ಟ ನಟ ರೂಪೇಶ್ ಶೆಟ್ಟಿ; ‘Huu ಅಂತೀಯಾ…Uhuu ಅಂತೀಯಾ’ ಅಂದ್ರು ರಾಕ್ ಸ್ಟಾರ್!

ಉಮೇಶ್ ರೈ ಪದವುಮೇಗಿನ ಮನೆ, ಶಾಲಿನಿ ಶೆಟ್ಟಿ, ಸಂಜೀವ ರೈ, ಕಾವು ಹೇಮನಾಥ ಶೆಟ್ಟಿ, ವಸಂತ ಶೆಟ್ಟಿ, ಮಿಥುನ್ ಹೆಗ್ಡೆ ಉಡುಪಿ, ವಿಜಯ ಶೆಟ್ಟಿ ಕಾರ್ಕಳ, ಆವರ್ಸೆ ಸುಧಾಕರ ಶೆಟ್ಟಿ, ದಯಾನಂದ ರೈ ಮನವಳಿಕೆ, ಜಯರಾಮ ಭಂಡಾರಿ, ಸುಧೀರ್ ಕುಮಾರ್ ರೈ ವರದಿಗಳನ್ನು ಮಂಡಿಸಿದರು. 2023-24 ನೇ ಸಾಲಿಗೆ ಲೆಕ್ಕಪರಿಶೋಧಕರಾಗಿ ದಯಾಶರಣ್ ಶೆಟ್ಟಿ ಆಯ್ಕೆಯಾದರು.

ಅಜಿತ್ ಕುಮಾರ್ ರೈ ಸ್ವಾಗತಿಸಿದರು. ದೀಪಿಕಾ, ಸಿಂಧೂರ, ಸಹನಾ ಪ್ರಾರ್ಥನೆಗೈದರು. ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಪಡುಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Continue Reading

FILM

ಮತ್ತೆ ಕಿರುತೆರೆಗೆ ಲಗ್ಗೆ ಇಟ್ಟ ನಟ ರೂಪೇಶ್ ಶೆಟ್ಟಿ; ‘Huu ಅಂತೀಯಾ…Uhuu ಅಂತೀಯಾ’ ಅಂದ್ರು ರಾಕ್ ಸ್ಟಾರ್!

Published

on

ಮಂಗಳೂರು : ರೂಪೇಶ್ ಶೆಟ್ಟಿ ಕೋಸ್ಟಲ್ ವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಕಲಾವಿದ. ಕನ್ನಡ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಈಗಾಗಲೇ ಕಿರುತೆರೆಗೆ ಲಗ್ಗೆ ಇಟ್ಟಿರುವ ಅವರು ಬಿಗ್ ಬಾಸ್ ಸೀಸನ್ 9 ರ ವಿಜೇತರಾಗಿ ಹೊರಹೊಮ್ಮಿದ್ದರು. ಇದೀಗ ಮತ್ತೆ ಕಿರುತೆರೆಗೆ ಲಗ್ಗೆ ಇಡುತ್ತಿದ್ದಾರೆ.


ನಿರೂಪಕನಾಗಿ ಎಂಟ್ರಿ:


ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿರುವ ರೂಪೇಶ್ ಶೆಟ್ಟಿ ಕಿರುತೆರೆಗೆ ಮತ್ತೆ ಲಗ್ಗೆ ಇಡುತ್ತಿದ್ದಾರೆ. ಅದು ಹೊಸ ರಿಯಾಲಿಟಿ ಶೋನಲ್ಲಿ. ಹಾಗಂತ ಅವರು ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ನಿರೂಪಕರಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅದುವೇ ‘Huu ಅಂತೀಯಾ…Uhuu ಅಂತೀಯಾ’. ಇದೊಂದು ವಿಭಿನ್ನ ಬಗೆಯ ವಿನೂತನ ಗೇಮ್ ಶೋ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ವೀಕೆಂಡ್ ನಲ್ಲಿ ಈ ಶೋ ಪ್ರಸಾರವಾಗಲಿದೆ.
ರೂಪೇಶ್ ಶೆಟ್ಟಿ ಹಾಗೂ ಅರುಣ್ ಇಬ್ಬರು ಜೊತೆಯಾಗಿ ಈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಹೇಗಿರಲಿದೆ ಶೋ:

ಈ ಶೋನಲ್ಲಿ ಒಟ್ಟು ಮೂರು ಸುತ್ತುಗಳು ಇರುತ್ತವೆ. ಈ ಶೋನಲ್ಲಿ ಭಾಗವಹಿಸುವ ಸೆಲೆಬ್ರಿಟಿಗಳಿಗೆ ಬರೋಬ್ಬರಿ 6 ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಇರುತ್ತದೆ.
ಮೊದಲ ಸುತ್ತಿನಲ್ಲಿ ಸ್ಪರ್ಧಿಗಳು ಒಬ್ಬರ ನಂತರ ಒಬ್ಬರು ಆಟ ಆಡುತ್ತಾರೆ. ನಿರೂಪಕರು ನೀಡಿದ ಸತ್ಯ ಮತ್ತು ಸುಳ್ಳು ಸಂಗತಿಗಳನ್ನು ಸ್ಪರ್ಧಿಗಳು ಸರಿಯಾಗಿ ಆರಿಸಿದರೆ 1 ಲಕ್ಷ ರೂಪಾಯಿ ಗೆಲ್ಲಬಹುದು. ಎರಡನೇ ಸುತ್ತಿನಲ್ಲಿ ಸ್ಪರ್ಧಿಗಳಿಗೆ ಊಟದ ಸವಾಲು ಎದುರಾಗುತ್ತೆ. ಇದರಲ್ಲಿ ಗೆದ್ದವರಿಗೆ 2 ಲಕ್ಷ ರೂಪಾಯಿ ಸಿಗಲಿದೆ. ಹಾಗೇ ಕೊನೆಯ ಸುತ್ತಿನಲ್ಲಿ ಕೇವಲ ಇಬ್ಬರು ಸ್ಪರ್ಧಿಗಳು ಆಟ ಆಡುತ್ತಾರೆ. ಇಲ್ಲಿ ಗೆದ್ದವರಿಗೆ 3 ಲಕ್ಷ ರೂಪಾಯಿ ಸಿಗುತ್ತೆ.

ಇದನ್ನೂ ಓದಿ : ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

ಪ್ರಾರಂಭ ಯಾವಾಗ ?

‘Huu ಅಂತೀಯಾ…Uhuu ಅಂತೀಯಾ’ ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ. ಮೊದಲ ಸಂಚಿಕೆಯಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್ ಮೂವರು ಸೆಲೆಬ್ರೆಟಿಗಳು ಭಾಗವಹಿಸುತ್ತಿದ್ದಾರೆ.

Continue Reading

LATEST NEWS

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

Published

on

ಮಂಗಳೂರು/ಮುಂಬೈ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಮಂಡಿ ಕ್ಷೇತ್ರದಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್  ಸ್ಪರ್ಧೆ ಮಾಡಿದ್ದಾರೆ.   ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ ನಿಂದ ಹೊರಬರುವುದಾಗಿ ಕಂಗನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

kangana ranaut

ಕಳೆದ ಮಂಗಳವಾರ ಕಂಗನಾ ಚುನಾವಣೆಗೆ ಮಂಡಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಕಂಗನಾ ಸದ್ಯ ಸಿನೆಮಾದಿಂದ ದೂರ ಉಳಿದಿದ್ದು  ತಮ್ಮ ಸಂಪೂರ್ಣ ಸಮಯವನ್ನು ಪ್ರಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ಕಂಗನಾ ಮಂಡಿಯನ್ನು ಗೆದ್ದರೆ ಮುಂದಿನ ಯೋಜನೆಗಳೇನು ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ, ನನಗೆ ಚಲನಚಿತ್ರ ನಿರ್ಮಾಪಕರು ಸಾಕಷ್ಟು ಮಂದಿ ಹೇಳಿದ್ದಾರೆ ನೀನು ಉತ್ತಮ ನಟಿ, ರಾಜಕೀಯಕ್ಕೆ ಹೋಗಬೇಡಿ ಇಲ್ಲೇ ಇರು ಎಂದು ಆದರೆ ನಾನು ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗದಿಂದ ಹೊರಬರುತ್ತೇನೆ ಎಂದು ಹೇಳಿದರು.

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬಂಧನ..! ಶಾಸಕ ಪೂಂಜಾ ಪ್ರತಿಭಟನೆ

ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಂಗನಾ, ಸಿನೆಮಾದಿಂದಲೂ ಹೊರಬರಲು ಸಿದ್ಧರಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮತದಾನದ ಮೊದಲು, ನಟಿ ತನ್ನ 91 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬಹಿರಂಗಪಡಿಸಿದರು. ಇದರಲ್ಲಿ ಆಭರಣಗಳು, ಕಾರುಗಳು ಮತ್ತು ಸ್ಥಿರ ಆಸ್ತಿಗಳು ಸೇರಿವೆ. ಆಕೆಯ ಸಾಲವೂ 17 ಕೋಟಿ ರೂ. ಇದೆ.

ಹಿಮಾಚಲಪ್ರದೇಶದಲ್ಲಿ ಜೂನ್​ 1ರಂದು ಮತದಾನ ನಡೆಯಲಿದೆ.  ಕಂಗನಾ ಕೇವಲ 12ನೇ ತರಗತಿ ಪಾಸಾಗಿದ್ದರು, ಚಿತ್ರರಂಗದಲ್ಲಿ ಅದ್ಭುತ ನಟಿಯಾಗಿ ಬಿಂಬಿಸಿಕೊಂಡಿದ್ದಾರೆ. ಗ್ಯಾಂಗ್​ಸ್ಟರ್ ಚಿತ್ರದ ಮೂಲಕ ಕಂಗನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

‘ಆರ್‌ಸಿಬಿ’ ಸೂಪರ್‌ ಕಮ್‌ಬ್ಯಾಕ್..! ಕ್ರೀಡಾಂಗಣದಲ್ಲಿ ಸ್ಟಾರ್ಸ್‌ ಕಲರವ

Continue Reading

LATEST NEWS

Trending