ಪುತ್ತೂರು: ದೈವಸ್ಥಾನದ ವಠಾರದಲ್ಲಿ ಜಾಗದಲ್ಲಿ ಹಿಂದೂ ಸ್ನೇಹಿತರ ಜೊತೆ ಕ್ರಿಕೆಟ್ ಆಡುತ್ತಿದ್ದ ಕ್ರೈಸ್ತ ಯುವಕನನ್ನು ಬಿಜೆಪಿ ಮುಖಂಡನೋರ್ವ ನಿಂದಿಸಿ ಯುವಕನ ಮೇಲೆ ಹಲ್ಲೆಗೆ ಮುಂದಾದ ಘಟನೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಯಕನ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸುಳ್ಯದ ಜಯನಗರದ ಮೊಗೆರ್ಕಳ ದೈವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಕ್ರೈಸ್ತ ಯುವಕನೋರ್ವ ಹಿಂದೂ ಸ್ನೇಹಿತರ ಜೊತೆ ಎಂದಿನಂತೆ ಆಟವಾಡುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ಬಿಜೆಪಿ ಮುಖಂಡ ಪ್ರವೀಣ್ ‘ಹಿಂದೂಗಳ ಜಾಗದಲ್ಲಿ ಕ್ರೈಸ್ತ ಯುವಕ ಆಡೋದು ಬೇಡ. ಚರ್ಚ್ ವಠಾರದಲ್ಲಿ ಕ್ರಿಶ್ಚಿಯನ್ನರು ಬೇರೆ ಧರ್ಮದವರಿಗೆ ಆಟವಾಡಲು ಬಿಡುತ್ತಾರೆಯೇ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಅಲ್ಲಿದ್ದ ಯುವಕರು ನಾವು ಈ ಹಿಂದೆ ಅಲ್ಲಿ ಆಟವಾಡಿದ್ದೇವೆ ಎಂದು ಹೇಳಿದ್ದಾರೆ. ಆಟದಲ್ಲಿ ಧರ್ಮವಿಲ್ಲ ಅಂತಾ ಮನವರಿಕೆ ಮಾಡಲು ಯುವಕರು ಪ್ರಯತ್ನ ಪಟ್ಟರೂ ಆತ ಕ್ಯಾರೇ ಅನ್ನದೇ ಚರ್ಚ್,ಮಸೀದಿಗಳ ಜಾಗದಲ್ಲಿ ಹಿಂದೂಗಳನ್ನು ಆಡೋಕೆ ಬಿಡ್ತಾರಾ? ಎಂದು ಪ್ರಶ್ನಿಸಿದ್ದಾನೆ.
ಈ ವೇಳೆ ನೀವು ಆಟದಲ್ಲಿ ಧರ್ಮವನ್ನು ಎಳೆದು ತರುವುದು ಸರಿಯಲ್ಲ ಎಂದು ವಾದಿಸಿದರೂ ಪಟ್ಟು ಬಿಡದೆ ನೀನು ಹಿಂದೂ ಅಲ್ಲವಲ್ಲ ನೀನು ಕ್ರೈಸ್ತ ಮೈದಾನದಿಂದ ಹೊರ ನಿಲ್ಲು. ನಾವು ಹಿಂದೂಗಳು ನಮ್ಮಲ್ಲೇ ನೋಡಿಕೊಳ್ಳುತ್ತೇವೆ. ನಿನಗೆ ಅವಕಾಶ ಕೊಟ್ಟಿದ್ದೇ ಜಾಸ್ತಿ ಅಂತಾ ಗದರಿಸಿ ಹಲ್ಲೆಗೆ ಮುಂದಾಗಿ ಮೈದಾನದಿಂದ ಹೊರಗೆ ಕಳುಹಿಸಿದ್ದಾನೆ. ಈತ ಇದೇ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷನಾಗಿರುವ ಪ್ರವೀಣ್ ಹೇಳಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು, ಬಿಜೆಪಿ ಮುಖಂಡನ ಆಟಾಟೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.