Wednesday, June 29, 2022

ಸ್ವ ಇಚ್ಛೆಯಿಂದ ವಿವಾಹವಾದ್ರೂ ಅಪ್ರಾಪ್ತರಾದರೇ ಗಂಡನೊಂದಿಗಿರಲು ಸಾಧ್ಯವಿಲ್ಲ;ಅಲಹಾಬಾದ್ ಹೈಕೋರ್ಟ್ ತೀರ್ಪು..!

ಸ್ವ ಇಚ್ಛೆಯಿಂದ ವಿವಾಹವಾದ್ರೂ ಅಪ್ರಾಪ್ತರಾದರೇ ಗಂಡನೊಂದಿಗಿರಲು ಸಾಧ್ಯವಿಲ್ಲ;ಅಲಹಾಬಾದ್ ಹೈಕೋರ್ಟ್ ತೀರ್ಪು..!

Allahabad High Court verdict! The youngest cannot be with a husband;

ಅಲಹಾಬಾದ್: ಮನೆಯವರ ಅನುಮತಿ ಇಲ್ಲದೆ ಅಪ್ರಾಪ್ತೆ ಮದುವೆಯಾದಲ್ಲಿ ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಪ್ರಾಪ್ತ ವಯಸ್ಕಳಾಗುವವರೆಗೆ ಮದುವೆಯನ್ನು ಒಪ್ಪಿಕೊಳ್ಳುವ ಅಥವಾ ಬೇರೆ ಯಾರೊಂದಿಗಾದ್ರೂ ವಾಸಿಸಲು ಸ್ವತಂತ್ರಳು ಎಂದು ನ್ಯಾಯಮೂರ್ತಿ ಜೆ.ಜೆ ಮುನೀರ್ ನ್ಯಾಯಪೀಠ ಕಳೆದ ವಾರ ತೀರ್ಪು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ  2020ರ ನವೆಂಬರ್ 24ರಂದುಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಅಪ್ರಾಪ್ತ ಬಾಲಕಿ ತನ್ನ ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದಿದೆ, ಬಾಲಕಿ ಪ್ರಾಪ್ತ ವಯಸ್ಸಿಗೆ ಬಂದ ನಂತ್ರ ಮದುವೆಯನ್ನ ಒಪ್ಪಿಕೊಳ್ಳುವ ಅಥವಾ ಅದನ್ನ ಬಿಟ್ಟು ಬೇರೆ ಯಾರೊಂದಿಗಾದರೂ ವಾಸಿಸಲು ಸ್ವತಂತ್ರಳಾಗುತ್ತಾಳೆ ಎಂದು ನ್ಯಾಯಮೂರ್ತಿ ಜೆ.ಜೆ. ಮುನೀರ್ ಅವರಿದ್ದ ನ್ಯಾಯಪೀಠ ಕಳೆದ ವಾರ ಈ ತೀರ್ಪು ನೀಡಿದೆ.

ಹಾಪುರ್ ಮ್ಯಾಜಿಸ್ಟೈರಿಯಲ್ ಕೋರ್ಟ್ ನೀಡಿದ್ದ ತೀರ್ಪನ್ನ ಪ್ರಶ್ನಿಸಿ, , ಬಾಲಕಿಯ ತಂದೆ, ಹಾಪುರ್ ನಿವಾಸಿ ಪಿಂಟೋ ಎಂಬುವವನು ಆಮಿಷವೊಡ್ಡಿ ತನ್ನ ಮಗಳನ್ನ ಮದುವೆಯಾದಾಗ ಬಾಲಕಿಗೆ ಕೇವಲ 16 ವರ್ಷ ವಯಸ್ಸಿನವಳೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅದ್ರಂತೆ ಹುಡುಗಿಗೆ ಇನ್ನು ಮದುವೆಯ ವಯಸ್ಸಾಗಿಲ್ಲ.ಆದ್ರೆ, ತಾನು ತನ್ನ ಪತಿಯನ್ನ ಸ್ವ ಇಚ್ಛೆಯಿಂದ ಮದುವೆಯಾಗಿದ್ದು, ಹುಡುಗಿ  ಪೋಷಕರೊಂದಿಗೆ ಇರಲು ನಿರಾಕರಿಸಿದ್ದಾಳೆ.

ಬಳಿಕ  ಸಂಬಂಧಪಟ್ಟವರ ವಿಚಾರಣೆ ನಂತರ ಕೋರ್ಟ್ ಕಾನೂನಿನ ಪ್ರಕಾರ ವಿವಾಹ ಅನೂರ್ಜಿತವಾಗಿದೆ ಎಂದು ಹೇಳಿದ್ದು . ಹುಡುಗಿ ಮದುವೆಯ ಸೂಕ್ತ ವಯಸ್ಸು ತಲುಪಿದಾಗ, ಆಕೆಯ ವಿವಾಹವನ್ನ ಒಪ್ಪಿಕೊಳ್ಳುವುದು ಅಥವಾ ಅದನ್ನ ರದ್ದು ಮಾಡುವ ಮುಕ್ತ ಅವಕಾಶ ಆಕೆಗಿರುತ್ತದೆ ಎಂದು ಕೋರ್ಟ್ ಹೇಳಿದೆ.

ಇನ್ನು ಬಾಲಕಿ ಪ್ರಾಪ್ತ ವಯಸ್ಸಿಗೆ ಬರುವವರೆಗೆ ತವರು ಮನೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

LEAVE A REPLY

Please enter your comment!
Please enter your name here

Hot Topics

ಉಳ್ಳಾಲ: ಹಡಗಿನಲ್ಲಿ ತೈಲ ಸೋರಿಕೆ ಆರಂಭ-ಮೀನುಗಾರಿಕೆ ನಿಷೇಧಿಸಿದ ಜಿಲ್ಲಾಡಳಿತ

ಮಂಗಳೂರು: ನಗರದ ಹೊರವಲಯ ಉಳ್ಳಾಲದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಮುಳುಗಿದ ಸಿರಿಯಾ ದೇಶದ ಪ್ರಿನ್ಸೆಸ್ ಮಿರಾಲ್ ಹಡಗಿನಿಂದ ತೈಲ ಸೋರಿಕೆ ಆರಂಭವಾಗಿದೆ. ಈ ಹಿನ್ನೆಲೆ ಮೀನುಗಾರಿಕೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಲೆಬನಾನ್​ಗೆ ಟಿಯಾಂಜಿನ್​ನಿಂದ...

ಮಂಗಳೂರಿನಲ್ಲಿ ಇಂದು ಮತ್ತು ನಾಳೆ ಮೂಡುಬಿದ್ರೆ, ಸುರತ್ಕಲ್ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯ

ಮಂಗಳೂರು: ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11ಕೆವಿ ಕಾರ್‌ಸ್ಟ್ರೀಟ್ ಫೀಡರ್‍ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.ಆದ ಕಾರಣ ಇಂದು ಬೆಳಿಗ್ಗೆ 10 ರಿಂದ 5ರವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾರ್‍ಸ್ಟ್ರೀಟ್, ದಯಾನಂದ...

ಮಂಗಳೂರು: ನಾ ಕಾರಂತ ಪೆರಾಜೆಗೆ ‘ಬ್ರ‍್ಯಾಂಡ್ ಮಂಗಳೂರು ಪ್ರಶಸ್ತಿ’

ಮಂಗಳೂರು: ಸೌಹಾರ್ದತೆ ಮತ್ತು ಮಾನವೀಯ ಮೌಲ್ಯದ ಬದುಕನ್ನು ಪ್ರತಿ ಬಿಂಬಿಸುವ ವರದಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ "ಬ್ರ‍್ಯಾಂಡ್ ಮಂಗಳೂರು" ಪ್ರಶಸ್ತಿಗೆ ಅಡಿಕೆ ಪತ್ರಿಕೆಯ ನಾ ಕಾರಂತ ಪೆರಾಜೆ ಆಯ್ಕೆಯಾಗಿದ್ದಾರೆ.ಸುಧಾ ಪತ್ರಿಕೆಯಲ್ಲಿ...