ಕಾಯಿನ್-ಟೊಮ್ಯಾಟೋದ ಮ್ಯಾಜಿಕ್ ಗೆ ಜನ ಫಿದಾ..ಜಾಲತಾಣದಲ್ಲಿ ವೀಡಿಯೋ ಸಖತ್ ವೈರಲ್..!
magic of Coin-Tomato .. Video viral in social media!
ಮಂಗಳೂರು: ಮನುಷ್ಯನನ್ನು ಬಾಹ್ಯವಾಗಿ ನೋಡಿ ಆತನ ಪ್ರತಿಭೆ ಗುರುತಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಒಂದು ಒಳ್ಳೇ ಉದಾಹರಣೆ ಈ ವ್ಯಕ್ತಿ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವ್ಯಕ್ತಿಯ ಮ್ಯಾಜಿಕ್ ವಿಡಿಯೋ ವೈರಲ್ ಆಗಿದೆ.
ನೋಡಿದವರು ವ್ಹಾವ್ ಅನ್ನದೇ ಇರುವುದಕ್ಕೆ ಸಾಧ್ಯನೇ ಇಲ್ಲ. ಅಷ್ಟು ಲೀಲಜಾಲವಾಗಿ ಇವರು ಮ್ಯಾಜಿಕ್ ಮಾಡುತ್ತಾರೆ. ಜಸ್ಟ್ ಒಂದು ಕಾಯಿನ್ ಹಾಗೂ ಟೊಮ್ಯಾಟೋದಲ್ಲಿ ಇವರು ಮಾಡುವ ಜಾದೂ ನೋಡಿದ್ರೆ ಯಾರಾದ್ರೂ ಅವರ ಕಲೆಗೆ ಮರುಳಾಗದೇ ಇರೋದಿಲ್ಲ.
ದಕ್ಷಿಣ ಕನ್ನಡ ಜಲ್ಲೆಯ ಕೆಲ ಪ್ರದೇಶಗಳಲ್ಲಿ ಅಡ್ಡಾಡಿ ಕಲೆ ತೋರಿಸಿ ಖುಶಿಯಿಂದ ಜನಕೊಟ್ಟ ಅಲ್ಪ ಹಣದಿಂದ ಜೀವನ ಸಾಗಿಸುತ್ತಿರುವ ಈ ವ್ಯಕ್ತಿಯ ಮೂಲ ಹೆಸರು ಗೊತ್ತಿಲ್ಲವಾದರೂ ಅವರು ಸಿದ್ದಿಸಿಕೊಂಡ ಕಲೆಗೆ ಮಾತ್ರ ಒಂದು ಹ್ಯಾಟ್ಸಾಫ್ ಹೇಳಲೇಬೇಕು..