bengaluru
ನಟ ನಾಗಭೂಷಣ್ ಕಾರು ಅಪಘಾತ – ಮಹಿಳೆ ಸಾವು..!
ಬೆಂಗಳೂರು: ಕನ್ನಡದ ಹೆಸರಾಂತ ನಟ ನಾಗಭೂಷಣ್ ಅವರು ಚಲಾಯಿಸುತ್ತಿದ್ದ ಕಾರು ದಂಪತಿಗಳಿಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನಪ್ಪಿದ್ದು, ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ 9 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆಯ ಸಾವಿಗೆ ಕಾರಣರಾದ ನಟ ನಾಗಭೂಷಣ್ ಅವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಸಂತಪುರದ ನಿವಾಸಿ ಪ್ರೇಮಾ (48) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ನಾಗಭೂಷಣ್ ಶೂಟಿಂಗ್ ಮುಗಿಸಿಕೊಂಡು ಬರುವಾಗ ರಸ್ತೆಯಲ್ಲಿ ಅಡ್ಡಬಂದ ಪಾದಚಾರಿ ದಂಪತಿಗಳಾದ ಪ್ರೇಮಾ ಮತ್ತು ಕೃಷ್ಣ ಅವರಿಗೆ ಕಾರು ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ದಂಪತಿಗಳಿಬ್ಬರಿಗೂ ತೀವ್ರ ಗಾಯವಾಗಿದ್ದು, ಗಾಯಾಳುಗಳನ್ನು ಖುದ್ದಾಗಿ ನಾಗಭೂಷಣ್ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮಾ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಪತಿ ಕೃಷ್ಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಾಹಿತಿ ಪಡೆಯುತ್ತಿದ್ದಾರೆ.
ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
bengaluru
ಹೈಕೋರ್ಟ್ ಕಲಾಪವನ್ನೂ ಬಿಡದ ಸೈಬರ್ ಹ್ಯಾಕರ್ಸ್-ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಅಶ್ಲೀಲ ದೃಶ್ಯ ಅಪ್ಲೋಡ್
ಬೆಂಗಳೂರು: ಸೈಬರ್ ಖದೀಮರ ಉಪಟಳ ಎಲ್ಲಿಯವರೆಗೆ ತಲುಪಿದೆ ಎಂದರೆ ಅದು ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಕ್ಕೂ ತಟ್ಟಿದೆ.
ಮಂಗಳವಾರ ಸಂಜೆ ಹೈಕೋರ್ಟಿನ ಹಾಲ್ ನಂಬರ್ 6, 12, 18, 23, 24, 26 ಮತ್ತು ಇತರ ಹಾಲ್ ಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾಗಲೇ ಲಿಂಕ್ ಮೂಲಕ ಭಾಗವಹಿಸಿದ್ದ ಅಪರಿಚಿತ ಆರೋಪಿಗಳು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ಹೈಕೋರ್ಟಿನ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಅವರು ಸೆಂಟ್ರಲ್ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ವೀಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಸಂಜೆ ಹೈಕೋರ್ಟ್ ಕಲಾಪದ ವೇಳೆ ವೀಡಿಯೋ ಕಾನ್ಫರೆನ್ಸ್ ಆ್ಯಪ್ ಅನ್ನು ಹ್ಯಾಕ್ ಮಾಡಿ ಆಶ್ಲೀಲ ದೃಶ್ಯಾವಳಿಯನ್ನು ಅಪ್ ಲೋಡ್ ಮಾಡಲಾಗಿತ್ತು. ಅಶ್ಲೀಲ ವೀಡಿಯೋ ಪ್ರಸಾರವಾಗುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬಂದಿಯನ್ನು ಕರೆದು ವಿಚಾರಿಸಿದಾಗ ಸೈಬರ್ ಹ್ಯಾಕ್ ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.
bengaluru
ಅನಿಮಲ್ ಸಿನಿಮಾ ನೋಡಿದ್ರಾ..? ನಟಿಯರ ಹಾಟ್ ಸೀನ್ ವೈರಲ್..!
Film: ಬಾಲಿವುಡ್ ನ ಅನಿಮಲ್ ಸಿನಿಮಾ ಈಗಾಗಲೆ ಬಿಡುಗಡೆಗೊಂಡು ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಬೆನ್ನಲೆ ಆ ಚಿತ್ರದಲ್ಲಿ ಕಾಣಿಸಿಕೊಂಡ ಹಸಿಬಿಸಿ ಸೀನ್ ಗಳು ವೈರಲ್ ಆಗ್ತಾ ಇದೆ.
ಆ ಸಿನಿಮಾದಲ್ಲಿ ನಟನಾಗಿ ರಣಬೀರ್ ಜೊತೆ ನಟಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕೆಲವೊಂದು ದೃಶ್ಯಗಲ್ಲಿ ರಣಬೀರ್ ಜೊತೆ ನಟಿ ತೃಪ್ತಿ ದಿಮ್ರಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇವರಿಬ್ಬರ ವಿಡಿಯೋಗಳು ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೇ ತೃಪ್ತಿ ದಿಮ್ರಿಯ ನಟಿಯ ಫಾಲೋವರ್ಸ್ ಸಂಖ್ಯೆಯು 1.5 ಮಿಲಿಯನ್ ಗೆ ತಲುಪಿದೆ.
ಅನಿಮಲ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ ನಟಿಯ ಪಾತ್ರದಿಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗ್ತ ಇದೆ ರಣಬೀರ್ ಜೊತೆ ನಟಿ ತೃಪ್ತಿ ದಿಮ್ರಿಯು ಹಾಟ್ ಸೀನ್ ಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.
ಡಿ. 1ರಂದು ತೆರೆಗೆ ಬಂದ ಬೆನ್ನಲೆ ಸಿನಿಮಾದ ಅಬ್ಬರ ಮೇಲಕ್ಕೇರಿದೆ. ಈ ಸಿನಿಮಾ ರಿಲೀಸ್ ಆದ ಬೆನ್ನಲೆ ದಿನಕ್ಕೆ 100 ಕೋಟಿ ಕಲೆಕ್ಷನ್ ಪಡೆದಿದ್ದು, ಮೂರು ದಿನದ ಒಟ್ಟು ಕಲೆಕ್ಷನ್ 300ಕೋಟಿಯಾಗಿದೆ.
bangalore
Bigboss: ನಾಯಿ ಮರಿಯಾದ ಬಿಗ್ ಬಾಸ್ ಸಂಗೀತಾ
Bigboss: ಬಿಗ್ ಬಾಸ್ ನಲ್ಲಿ ಸಂಗೀತಾ ಅವರು ಕೆಲವೊಂದು ಟಾಸ್ಕ್ ನಲ್ಲಿ ತೆಗೆದುಕೊಂಡ ನಿರ್ಧಾರ ಫ್ಯಾನ್ಸ್ ಗಳಿಗೆ ಹಿಡಿಸಲಿಲ್ಲ. ಅಲ್ಲಿಂದ ಅವರ ಫ್ಯಾನ್ ಫಾಲೊವರ್ಸ್ ನ ಸಂಖ್ಯೆ ಸುಮಾರು 11 ಸಾವಿರಕ್ಕೂ ಅಧಿಕ ಇಳಿಕೆಯಾಗಿದೆ.
ಕಾರ್ತಿಕ್ ನ ಗುಂಪಿನಲ್ಲಿದ್ದ ಸಂಗೀತಾ ಬಳಿಕ ವಿನಯ್ ತಂಡಕ್ಕೆ ಸೇರಿದ್ದಳೂ. ಇದೀಗ ವಾಪಸು ಕಾರ್ತಿಕ್ ಗುಂಪಿಗೆ ಸೇರಿಕೊಂಡಿದ್ದಾಳೆ.
ಆದರೂ ಕೂಡ ಸಂಗೀತನ ಫ್ಯಾನ್ಸ್ ಗಳಿಗೆ ಈಗ ಸಂಗೀತನ ನಡೆತೆಗಳು ಇಷ್ಟ ಆಗುತ್ತಿಲ್ಲ.
ಇದೀಗ ಬಿಗ್ ಬಾಸ್ ನಲ್ಲಿ ನೀಡಿರುವ ಟಾಸ್ಕ್ ನಲ್ಲಿ ಎಲ್ಲ ಸ್ಪರ್ಧಿಗಳಿ ಒಂದೊಂದು ಟಾಸ್ಕ್ ಕೊಟ್ಟಿದ್ದಾರೆ. ಅದರಲ್ಲಿ ಸಂಗೀತಾಗೆ ಅಳುವ ನಾಯಿಮರಿಯಂತಹ ಟಾಸ್ಕ್ ಸಿಕ್ಕಿದ್ದು, ನಾಯಿಯಂತೆ ಅದರ ಧ್ವನಿಯಂತೆ ಅನುಕರಣೆ ಮಾಡಿದ್ದಾರೆ.
ಇದಕ್ಕೆ ತುಕಾಲಿ ಸಂತೋಷ್ ಸಾಥ್ ನೀಡಿದ್ದಾರೆ. ಅಲ್ಲದೇ ಬಿಗ್ಗ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಮತ್ತು ವರ್ತೂರ್ ಸಂತೋಷ್ಗೆ ಬಿಗ್ ಬಾಸ್ ಸಂಗೀತಾ ಮತ್ತು ಕಾರ್ತಿಕ್ ಅವರನ್ನು ಅನುಕರಿಸುವ ಟಾಸ್ಕ್ ನೀಡಿದ್ದರು. ಅದರಂತೆ ಇಬ್ಬರೂ ಕೂಡ ಆ ಪಾತ್ರವನ್ನು ಭಿನ್ನವಾಗಿ ಮಾಡಿ ಎಲ್ಲ ಸ್ಪರ್ಧಿಗಳನ್ನು ನಕ್ಕು ನಗಿಸಿದ್ದಾರೆ. ಅಲ್ಲದೆ ಸಂಗೀತಾ ಶೃಂಗೇರಿಗೆ ಕರೆಕ್ಟ್ ಆಗಿ ಟಾಂಗ್ ಕೊಟ್ಟಿದ್ದಾರೆ.
ತಮಾಷೆ ಹೋಗಿ ಅಮಾಸೆ ಆಗುತ್ತಾ ಈ ಟಾಸ್ಕ್?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/jVo8daqbyw
— Colors Kannada (@ColorsKannada) December 4, 2023
- Ancient Mangaluru6 days ago
ಕುಂದಾಪುರ: 15 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ
- DAKSHINA KANNADA6 days ago
ಉಡುಪಿ : ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಜೀವಾಂತ್ಯ
- bangalore5 days ago
ಇವ್ರು ಯಾರಂತ ಗೊತ್ತಾಯ್ತ ಫ್ರೆಂಡ್ಸ್? ನ್ಯೂ ಕಪಲ್ಸ್ ಫಾರಿನ್ ಟ್ರಿಪ್ ಅಂತೆ..!
- bangalore4 days ago
ದೈವಕೋಲ ವೀಕ್ಷಣೆಗೆ ಟೂರ್ ಪ್ಯಾಕೇಜ್ – ತುಳುವರ ಧಾರ್ಮಿಕ ಭಾವನೆಗೆ ಪೆಟ್ಟು..!