Connect with us

bengaluru

ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಸಂಬಂಧಿಗೆ ಚೂರಿ ಇರಿದ ಆರೋಪಿ ಅರೆಸ್ಟ್..!

Published

on

ಬೆಂಗಳೂರು: ಪತ್ನಿ ಜತೆಗೆ ಅಕ್ರಮ ಸಂಬಂಧ ಹೊಂದಿದ ಕಾರಣಕ್ಕೆ ಸೋದರ ಸಂಬಂಧಿಗೆ ಮಾರಕಾಸ್ತ್ರದಿಂದ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ತಿಲಕನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಿಲಕನಗರ ನಿವಾಸಿ ತಬ್ರೇಜ್ ಪಾಷಾ(37) ಕೊಲೆಯಾದ ವ್ಯಕ್ತಿ. ಕೆಂಗೇರಿ ನಿವಾಸಿ ಶಬೀರ್ ಕೃತ್ಯ ಎಸಗಿದ ಬಂಧಿತ ಆರೋಪಿ.
ತಬ್ರೇಜ್ ಪಾಷಾ ಮತ್ತು ಶಬೀರ್ ಸೋದರ ಸಂಬಂಧಿಕರಾಗಿದ್ದರು. ತಬ್ರೇಜ್ ಪಾಷಾ ಚೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಶಬೀರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ತಬ್ರೇಜ್ ಪಾಷಾನು ಶಬೀರ್ ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರಕ್ಕೆ ಒಂಬತ್ತು ತಿಂಗಳ ಹಿಂದೆ ಆರೋಪಿ ಶಬೀರ್, ತಬ್ರೇಜ್ ಪಾಷಾನ ಮನೆ ಬಳಿ ಬಂದು ಗಲಾಟೆ ಮಾಡಿದ್ದ. ಈ ಗಲಾಟೆ ನಡೆದ ಬಳಿಕ ಇವರಿಬ್ಬರ ನಡುವೆ ದ್ವೇಷ ಬೆಳೆದಿತ್ತು.

ಕೊಲೆ ನಡೆದಿದ್ದು ಹೇಗೆ..?

ತಬ್ರೇಜ್ ಪಾಷಾ ಎಂದಿನಂತೆ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೆಲಸಕ್ಕೆ ತೆರಳಿದ್ದ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಬೀರ್ ಪತ್ನಿಗೆ ಕರೆ ಮಾಡಿ ಊಟಕ್ಕೆ ಮನೆಗೆ ಬರುತ್ತಿರುವುದಾಗಿ ಹೇಳಿದ್ದಾನೆ. ಈ ವಿಷಯ ತಿಳಿದ ಶಬೀರ್ ಆತನನ್ನು ಮಾರ್ಗ ಮಧ್ಯೆಯೆ ಅಡ್ಡಗಟ್ಟಿ ಮಾರಕಾಸ್ತ್ರದಿಂದ ತಬ್ರೇಜ್‌ ಪಾಷಾನ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಹತ್ತಾರು ಬಾರಿ ಇರಿದಿದ್ದಾನೆ ಎನ್ನಲಾಗಿದೆ. ಈ ಪರಿಣಾಮ ತೀವ್ರ ರಕ್ತಸ್ರಾವವಾಗಿ ತಬ್ರೇಜ್ ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ತಿಲಕನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

bengaluru

ಹೈಕೋರ್ಟ್​ ಕಲಾಪವನ್ನೂ ಬಿಡದ ಸೈಬರ್​ ಹ್ಯಾಕರ್ಸ್​​-ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್

Published

on

ಬೆಂಗಳೂರು: ಸೈಬರ್‌ ಖದೀಮರ ಉಪಟಳ ಎಲ್ಲಿಯವರೆಗೆ ತಲುಪಿದೆ ಎಂದರೆ ಅದು ಇದೀಗ ಕರ್ನಾಟಕ ಹೈಕೋರ್ಟ್ ಕಲಾಪಕ್ಕೂ ತಟ್ಟಿದೆ.

ಮಂಗಳವಾರ ಸಂಜೆ ಹೈಕೋರ್ಟಿನ ಹಾಲ್‌ ನಂಬರ್‌ 6, 12, 18, 23, 24, 26 ಮತ್ತು ಇತರ ಹಾಲ್‌ ಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾಗಲೇ ಲಿಂಕ್‌ ಮೂಲಕ ಭಾಗವಹಿಸಿದ್ದ ಅಪರಿಚಿತ ಆರೋಪಿಗಳು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಈ ಬಗ್ಗೆ ಹೈಕೋರ್ಟಿನ ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಅವರು ಸೆಂಟ್ರಲ್‌ ಸೆನ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿ ಲೈವ್‌ ಸ್ಟ್ರೀಮಿಂಗ್‌ ಮತ್ತು ವೀಡಿಯೋ ಕಾನ್ಫರೆನ್ಸ್‌ ಸೌಲಭ್ಯವನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಸಂಜೆ ಹೈಕೋರ್ಟ್ ಕಲಾಪದ ವೇಳೆ ವೀಡಿಯೋ ಕಾನ್ಫರೆನ್ಸ್‌ ಆ್ಯಪ್‌ ಅನ್ನು ಹ್ಯಾಕ್‌ ಮಾಡಿ ಆಶ್ಲೀಲ ದೃಶ್ಯಾವಳಿಯನ್ನು ಅಪ್‌ ಲೋಡ್‌ ಮಾಡಲಾಗಿತ್ತು. ಅಶ್ಲೀಲ ವೀಡಿಯೋ ಪ್ರಸಾರವಾಗುತ್ತಿದ್ದಂತೆ ಅದನ್ನು ನಿರ್ವಹಣೆ ಮಾಡುತ್ತಿದ್ದ ಸಿಬಂದಿಯನ್ನು ಕರೆದು ವಿಚಾರಿಸಿದಾಗ ಸೈಬರ್‌ ಹ್ಯಾಕ್‌ ಆಗಿರುವ ವಿಷಯ ಗೊತ್ತಾಗಿದೆ. ಕೂಡಲೇ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

Continue Reading

bengaluru

ಅನಿಮಲ್ ಸಿನಿಮಾ ನೋಡಿದ್ರಾ..? ನಟಿಯರ ಹಾಟ್ ಸೀನ್ ವೈರಲ್..!

Published

on

Film: ಬಾಲಿವುಡ್ ನ ಅನಿಮಲ್ ಸಿನಿಮಾ ಈಗಾಗಲೆ ಬಿಡುಗಡೆಗೊಂಡು ಒಂದೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದ ಬೆನ್ನಲೆ ಆ ಚಿತ್ರದಲ್ಲಿ ಕಾಣಿಸಿಕೊಂಡ ಹಸಿಬಿಸಿ ಸೀನ್ ಗಳು ವೈರಲ್ ಆಗ್ತಾ ಇದೆ.

ಆ ಸಿನಿಮಾದಲ್ಲಿ ನಟನಾಗಿ ರಣಬೀರ್ ಜೊತೆ ನಟಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಕೆಲವೊಂದು ದೃಶ್ಯಗಲ್ಲಿ ರಣಬೀರ್ ಜೊತೆ ನಟಿ ತೃಪ್ತಿ ದಿಮ್ರಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇವರಿಬ್ಬರ ವಿಡಿಯೋಗಳು ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲೇ ತೃಪ್ತಿ ದಿಮ್ರಿಯ ನಟಿಯ ಫಾಲೋವರ್ಸ್ ಸಂಖ್ಯೆಯು 1.5 ಮಿಲಿಯನ್ ಗೆ ತಲುಪಿದೆ.

ಅನಿಮಲ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ ನಟಿಯ ಪಾತ್ರದಿಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗ್ತ ಇದೆ ರಣಬೀರ್ ಜೊತೆ ನಟಿ ತೃಪ್ತಿ ದಿಮ್ರಿಯು ಹಾಟ್ ಸೀನ್ ಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಡಿ. 1ರಂದು ತೆರೆಗೆ ಬಂದ ಬೆನ್ನಲೆ ಸಿನಿಮಾದ ಅಬ್ಬರ ಮೇಲಕ್ಕೇರಿದೆ. ಈ ಸಿನಿಮಾ ರಿಲೀಸ್ ಆದ ಬೆನ್ನಲೆ ದಿನಕ್ಕೆ 100 ಕೋಟಿ ಕಲೆಕ್ಷನ್ ಪಡೆದಿದ್ದು, ಮೂರು ದಿನದ ಒಟ್ಟು ಕಲೆಕ್ಷನ್ 300ಕೋಟಿಯಾಗಿದೆ.

Continue Reading

bangalore

Bigboss: ನಾಯಿ ಮರಿಯಾದ ಬಿಗ್ ಬಾಸ್ ಸಂಗೀತಾ

Published

on

Bigboss: ಬಿಗ್ ಬಾಸ್ ನಲ್ಲಿ ಸಂಗೀತಾ ಅವರು ಕೆಲವೊಂದು ಟಾಸ್ಕ್ ನಲ್ಲಿ ತೆಗೆದುಕೊಂಡ ನಿರ್ಧಾರ ಫ್ಯಾನ್ಸ್ ಗಳಿಗೆ ಹಿಡಿಸಲಿಲ್ಲ. ಅಲ್ಲಿಂದ ಅವರ ಫ್ಯಾನ್ ಫಾಲೊವರ್ಸ್ ನ ಸಂಖ್ಯೆ ಸುಮಾರು 11 ಸಾವಿರಕ್ಕೂ ಅಧಿಕ ಇಳಿಕೆಯಾಗಿದೆ.

ಕಾರ್ತಿಕ್ ನ ಗುಂಪಿನಲ್ಲಿದ್ದ ಸಂಗೀತಾ ಬಳಿಕ ವಿನಯ್ ತಂಡಕ್ಕೆ ಸೇರಿದ್ದಳೂ. ಇದೀಗ ವಾಪಸು ಕಾರ್ತಿಕ್ ಗುಂಪಿಗೆ ಸೇರಿಕೊಂಡಿದ್ದಾಳೆ.
ಆದರೂ ಕೂಡ ಸಂಗೀತನ ಫ್ಯಾನ್ಸ್ ಗಳಿಗೆ ಈಗ ಸಂಗೀತನ ನಡೆತೆಗಳು ಇಷ್ಟ ಆಗುತ್ತಿಲ್ಲ.

ಇದೀಗ ಬಿಗ್ ಬಾಸ್ ನಲ್ಲಿ ನೀಡಿರುವ ಟಾಸ್ಕ್ ನಲ್ಲಿ ಎಲ್ಲ ಸ್ಪರ್ಧಿಗಳಿ ಒಂದೊಂದು ಟಾಸ್ಕ್ ಕೊಟ್ಟಿದ್ದಾರೆ. ಅದರಲ್ಲಿ ಸಂಗೀತಾಗೆ ಅಳುವ ನಾಯಿಮರಿಯಂತಹ ಟಾಸ್ಕ್ ಸಿಕ್ಕಿದ್ದು, ನಾಯಿಯಂತೆ ಅದರ ಧ್ವನಿಯಂತೆ ಅನುಕರಣೆ ಮಾಡಿದ್ದಾರೆ.

ಇದಕ್ಕೆ ತುಕಾಲಿ ಸಂತೋಷ್ ಸಾಥ್ ನೀಡಿದ್ದಾರೆ. ಅಲ್ಲದೇ ಬಿಗ್ಗ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್​ ಮತ್ತು ವರ್ತೂರ್​ ಸಂತೋಷ್​​ಗೆ ಬಿಗ್​ ಬಾಸ್​​ ಸಂಗೀತಾ ಮತ್ತು ಕಾರ್ತಿಕ್​ ಅವರನ್ನು ಅನುಕರಿಸುವ ಟಾಸ್ಕ್​ ನೀಡಿದ್ದರು. ಅದರಂತೆ ಇಬ್ಬರೂ ಕೂಡ ಆ ಪಾತ್ರವನ್ನು ಭಿನ್ನವಾಗಿ ಮಾಡಿ ಎಲ್ಲ ಸ್ಪರ್ಧಿಗಳನ್ನು ನಕ್ಕು ನಗಿಸಿದ್ದಾರೆ. ಅಲ್ಲದೆ ಸಂಗೀತಾ ಶೃಂಗೇರಿಗೆ ಕರೆಕ್ಟ್ ಆಗಿ ಟಾಂಗ್ ಕೊಟ್ಟಿದ್ದಾರೆ.

 

Continue Reading

LATEST NEWS

Trending