LATEST NEWS
ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಅರೆಸ್ಟ್-20 ಲಕ್ಷ ರೂ. ಮೌಲ್ಯದ ಸೊತ್ತು ವಶ
ಚಿಕ್ಕಮಗಳೂರು: ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಆತನಿಂದ ಚಿನ್ನ, ಬೆಳ್ಳಿ ಸಹಿತ ಸುಮಾರು 20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ಮೂಲದ ಹಾಲಿ ಬೆಂಗಳೂರು ನಿವಾಸಿ ಅಹ್ಮದ್ ಕಬೀರ್(36) ಬಂಧಿತ ಆರೋಪಿ.
ನಗರ ಠಾಣೆಯ ಪಿಎಸ್ಸೈ ನಾಗೇಂದ್ರ ನಾಯ್ಕ ಜ.2ರಂದು ಮಧ್ಯರಾತ್ರಿ ಗಸ್ತಿನಲ್ಲಿದ್ದ ವೇಳೆ ನಗರದ ಕಲ್ಯಾಣ ನಗರ ಬಡಾವಣೆ ವ್ಯಾಪ್ತಿಯಲ್ಲಿ ಕಾರೊಂದರಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿರುವುದನ್ನು ಗಮನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಡೆದು ಪರಿಶೀಲಿಸಿದಾಗ ಕಾರಿನಲ್ಲಿ ಪಿಸ್ತೂಲ್, ರಾಡ್ ಮತ್ತಿತರ ವಸ್ತುಗಳು ಪತ್ತೆಯಾಗಿವೆ. ನಂತರ ಆರೋಪಿಯನ್ನು ವಶಕ್ಕೆ ಪಡದು ವಿಚಾರಣೆಗೊಳಪಡಿಸಿದಾಗ ಆತ ಸುಮಾರು 10 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ 292 ಗ್ರಾಂ ಚಿನ್ನ ಹಾಗೂ 300 ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ 1 ಕಾರು ಹಾಗೂ 2 ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
ಈ ಆರೋಪಿ ಇತ್ತೀಚೆಗೆ ತನ್ನ ಸಹಚರರೊಂದಿಗೆ ಸೇರಿ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಿರೇಗದ್ದೆ ಪ್ರಾಥಮಿಕ ಸಹಕಾರಿ ಸಂಘದ ಕಟ್ಟಡದಲ್ಲಿ ಕಳ್ಳತನ ಮಾಡಿರುವುದೂ ಬೆಳಕಿಗೆ ಬಂದಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಗರ ಠಾಣೆಯ ಪೊಲೀಸರು ಎಸ್ಪಿ, ಎಎಸ್ಪಿ ಹಾಗೂ ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ನಗರಠಾಣೆಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದು, ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಕೆಲಸವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
LATEST NEWS
Kundapura: ಲಂಚ ಪ್ರಕರಣ- ಸಬ್ ಇನ್‌ಸ್ಪೆಕ್ಟ್ರರ್ ಶಂಭುಲಿಂಗಯ್ಯ ಅಮಾನತು
ಕುಂದಾಪುರ: ಕೋಟ ಠಾಣೆ ಉಪನಿರೀಕ್ಷಕರಾಗಿದ್ದು, ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗಯ್ಯ ಅವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಅಮಾನತುಗೊಳಿಸಿರುವುದಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಕಾಲೇಜಿನ ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು. ಈ ಕುರಿತು ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅಚ್ಚಾಡಿಯ ಖಾಸಗಿ ಕಾಲೇಜಿನಲ್ಲಿ ಆಡಳಿತ ಮಂಡಳಿಯೊಳಗೆ ಗಲಾಟೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್ ಹಾಗೂ ಮಹಿಮಾ ಮಧು ಭಾಸ್ಕರ್ ಅವರು ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಮಧು ಭಾಸ್ಕರ್ ವಿರುದ್ದ ದೂರು ದಾಖಲಿಸಲು ಹಾಗೂ ಮಹಿಮಾ ವಿರುದ್ದದ ದೂರಿಗೆ ಬಿ ರಿಪೋರ್ಟ್ ನೀಡುವುದಾಗಿ ಆಗ ಠಾಣಾಧಿಕಾರಿಯಾಗಿದ್ದ ಶಂಭು ಲಿಂಗಯ್ಯ ಲಂಚ ಪಡೆದಿದ್ದರು. ಅದರಲ್ಲೂ ಹತ್ತಿರದ ಸಂಬಂಧಿಯೋರ್ವರ ಖಾತೆಗೆ ಸ್ವಲ್ಪ ಮೊತ್ತದ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ಧವಿದ್ದು ಠಾಣಾಧಿಕಾರಿಗಳನ್ನು ತತ್‌ಕ್ಷಣ ಅಮಾನತುಗೊಳಿಸಬೇಕು ಎಂದು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಮುಖ ಎನ್ನಲಾದ ದಿನೇಶ್ ಗಾಣಿಗ ಕೋಟ ವೀಡಿಯೋ ಮೂಲಕ ಎಸ್ ಪಿ ಅವರನ್ನು ವಿನಂತಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒಒಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ನಿಯೋಜಿಸಲಾಗಿತ್ತು.
BANTWAL
ವೈನ್ ಶಾಪ್ ಗೆ ಬಂದಿದ್ದ ಆಸಾಮಿ ಮೊಬೈಲ್ ಕದ್ದು ಎಸ್ಕೇಪ್..!!
ಪುತ್ತೂರು: ವೈನ್ ಶಾಪ್ ಗೆ ಬಂದಿದ್ದ ವ್ಯಕ್ತಿಯೋರ್ವ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದೆ.
ವ್ಯಕ್ತಿಯೋರ್ವ ಗ್ರಾಹಕರ ಸೋಗಿನಲ್ಲಿ ವೈನ್ ಶಾಪ್ ಗೆ ಬಂದಿದ್ದ. ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ಮೊಬೈಲ್ ಗೆ ಕನ್ನ ಹಾಕಿದ್ದಾನೆ. ಬಳಿಕ ಶಾಪ್ ನವರು ಬೇರೆ ಕಡೆ ತಿರುಗುವಾಗ ಈಚೆಯಿಂದ ಈ ಕದೀಮ ಮೊಬೈಲ್ ಅನ್ನು ಎಗರಿಸಿ ಬ್ಯಾಗ್ ಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.
ವೈನ್ ಶಾಪ್ ನಲ್ಲಿರುವ ರಾಜೇಶ್ ಎಂಬವರ ಮೊಬೈಲ್ ಕಳವು ಆಗಿತ್ತು. ಕೂಡಲೇ ಅವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಆಗ ಮೊಬೈಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bangalore
ಬಿಗ್ ಬಾಸ್ ಮನೆಯಲ್ಲಿ ನಮ್ರತಾ-ಸ್ನೇಹಿತ್ ಲವ್ವಿ-ಡವ್ವಿ
Bigboss: ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್- ಸಂಗೀತಾ ಇಬ್ಬರ ಒಂದು ಜೋಡಿ ಆದರೆ ಇತ್ತ ಸ್ನೇಹಿತ್ ಮತ್ತು ನಮ್ರತಾ ಇವರಿಬ್ಬರ ಪ್ರೇಮ ಕತೆ ಶುರುವಾಗಿದೆ.
ಕ್ಯಾಪ್ಟೆನ್ಸಿ ವಿಚಾರದಲ್ಲಿ ನಮ್ರತಾ ಹಾಗೂ ಸ್ನೇಹಿತ್ ಮುನಿಸಿಕೊಂಡಿದ್ದು, ಇದೀಗ ಮತ್ತೇ ಅವರ ಫ್ರೆಂಡ್‌ಶಿಪ್ ಶುರುವಾಗಿದೆ. ‘ ನಾನು ನಿಮ್ಮ ಪ್ರೀತಿನ ಒಪ್ಪಿಕೊಂಡ್ರೆ ಏನು ಮಾಡ್ತೀರಾ ಎಂದು ಸ್ನೇಹಿತ್ ಗೆ ನಮ್ರತಾ ಹೇಳಿದ್ದಾರೆ. ಅವರ ಮಾತಿಗೆ ಸ್ನೇಹಿತ್ ನಾಚಿ ನೀರಾಗಿದ್ದಾರೆ. ಇದೀಗ ಇವರಿಬ್ಬರ ಲವ್ವಿ-ಡವ್ವಿಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಸ್ನೇಹಿತ್ ಕ್ಯಾಪ್ಟನ್ ಆಗಿದ್ದಾಗ ಟಾಸ್ಕ್‌ನಿಂದ ನಮ್ರತಾ ಅವರನ್ನು ಹೊರಗೆ ಹಾಕಿದ್ದರು. ಬಳಿಕ ನಮ್ರತಾ ಅವರ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದರು.
ಕಳೆದ 60 ದಿನಗಳಿಂದ ನಡೆಯುತ್ತಿರೋ ಸೀನ್ ಅಂದರೆ ನಮ್ರತಾ ಹಿಂದೆ ಹೋಗೋದನ್ನ ಸ್ನೇಹಿತ್ ಬಿಟ್ಟಿಲ್ಲ. ನಮ್ರತಾಗೆ ಆಗಾಗ ಪ್ರೇಮ ನಿವೇದನೆ ಮಾಡುತ್ತಲೇ ಬಂದಿದ್ದಾರೆ. ನಮ್ರತಾ ಬೀಳಲ್ಲ, ಸ್ನೇಹಿತ್ ಬಿಡಲ್ಲ. ಇದೀಗ ಇದೆನ್ನೆಲ್ಲಾ ಗಮನಿಸಿ ನಮ್ರತಾ, ಸರಿ ನಾನು ನಿಮ್ಮ ಪ್ರೀತಿಯನ್ನ ಒಪ್ಪಿಕೊಂಡರೆ ಮುಂದೇನು? ಫ್ಯೂಚರ್ ಪ್ಲ್ಯಾನ್ ಏನು ಎಂದು ಕೇಳಿದ್ದಾರೆ. ಹೇಳಿ ಈಗ ನಾನು ಪ್ರೀತಿ ಮಾಡ್ತೀನಿ ಅಂದ್ರೆ ಏನು ಮಾಡ್ತೀರಿ ಎಂದು ನೇರವಾಗಿ ಪ್ರಶ್ನೆ ಎಸೆದರು.
ಆದರೆ, ಈ ಪ್ರಶ್ನೆಗೆ ಏನು ಉತ್ತರಿಸಬೇಕು ಎಂಬುದೇ ಸ್ನೇಹಿತ್‌ಗೆ ತಿಳಿಯಲಿಲ್ಲ. ಅವರು ನಕ್ಕು ಸುಮ್ಮನಾದರು. ಹೇಳಿ ಈಗ ನಾನು ಪ್ರೀತಿಸುತ್ತೇನೆ ಎಂದರೆ ಏನು ಮಾಡ್ತೀರಾ. ಇಷ್ಟು ದಿನ ಸುಮ್ಮನೆ ಕಾಳು ಹಾಕಿದ್ರಾ ಎಂದು ಮರು ಪ್ರಶ್ನೆ ಹಾಕಿದರು. ಬಿಗ್ ಬಾಸ್‌ನಿಂದ ಹೊರಗೆ ಹೋದ ಬಳಿಕ ಮನೆಯವರ ಜೊತೆ ಮಾತನಾಡೋಣ.
ಒಂದು ವರ್ಷ ಮದುವೆ ಆಗೋದು ಬೇಡ. ನಿಮ್ಮಿಷ್ಟದ ಜಾಗಕ್ಕೆ ಹೊಗೋಣ. ಸ್ವಿಜರ್‌ಲೆಂಡ್‌ಗೆ ಮೊದಲು ಹೋಗೋಣ ಎಂದರು ಸ್ನೇಹಿತ್. ಅವರ ಮಾತನ್ನು ಕೇಳಿ ನಮ್ರತಾ ನಕ್ಕರು. ನಮ್ರತಾ ನಗುತ್ತಲೇ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ರಾ? ಈ ಬಗ್ಗೆ ಕ್ಲ್ಯಾರಿಟಿ ಇಲ್ಲ. ಆದರೆ ನಮ್ರತಾ ನಗುವಿಗೆ ಸ್ನೇಹಿತ್ ಮಾತ್ರ ನಾಚಿ ನೀರಾಗಿದ್ದಾರೆ. ಅಂತೂ ಇಂತೂ ಕೋಪ ಮಾತನಾಡುತ್ತಿದ್ದಲ್ಲಾ ಅಂತ ಸಮಾಧಾನದಲ್ಲಿದ್ದಾರೆ ಸ್ನೇಹಿತ್.
- FILM5 days ago
ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ
- FILM4 days ago
ನಮೃತಾ ಗೌಡ ಆವಾಜ್ ಗೆ ಸಂಗೀತಾ ಕಣ್ಣೀರು
- bengaluru7 days ago
Film: ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಟಾಲಿವುಡ್ ಗೆ ಎಂಟ್ರಿ
- bengaluru5 days ago
ಹೈಕೋರ್ಟ್ ಕಲಾಪವನ್ನೂ ಬಿಡದ ಸೈಬರ್ ಹ್ಯಾಕರ್ಸ್-ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಅಶ್ಲೀಲ ದೃಶ್ಯ ಅಪ್ಲೋಡ್