Tuesday, May 30, 2023

ಶಿವಮೊಗ್ಗದಲ್ಲಿ ಮನೆಯ ಸ್ಟೆಬಿಲೈಜರ್ ಸ್ಪೋಟ : ತಂದೆ ಮೃತ್ಯು : ಮಗ ಗಂಭೀರ -ಆಸ್ಪತ್ರೆಗೆ ದಾಖಲು…!!

ನಗರದಲ್ಲಿ ಬೆಳಗಿನ ಸಮಯದಲ್ಲಿ ಮನೆಯಲ್ಲಿ ಸ್ಟೆಬಿಲೈಜರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿ ಖ್ಯಾತ ಉದ್ಯಮಿಯೊಬ್ಬರು ಸಾವಿಗೀಡಾದ ದಾರುಣ ಘಟನೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಸಮೀಪ ಇಂದು ಸಂಭವಿಸಿದೆ.

ಶಿವಮೊಗ್ಗ: ನಗರದಲ್ಲಿ ಬೆಳಗಿನ ಸಮಯದಲ್ಲಿ ಮನೆಯಲ್ಲಿ ಸ್ಟೆಬಿಲೈಜರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿ ಖ್ಯಾತ ಉದ್ಯಮಿಯೊಬ್ಬರು ಸಾವಿಗೀಡಾದ ದಾರುಣ ಘಟನೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಸಮೀಪ ಇಂದು ಸಂಭವಿಸಿದೆ.

ಸಾವನ್ನಪ್ಪಿದವರು ಖ್ಯಾತ ಉದ್ಯಮಿ, ಶಿವಮೊಗ್ಗ ಛೇಂಬರ್ ಆಫ್ ಕಾಮರ್ಸ್ ನಿರ್ದೇಶಕರಾಗಿದ್ದ ಭೂಪಾಳಂ ಎಸ್. ಶರತ್ (39) ಎಂದು ತಿಳಿದು ಬಂದಿದೆ.

ಶರತ್ ಅವರ ಪುತ್ರ ಸಂಚಿತ್ (12) ಗಂಭೀರ ಗಾಯಗೊಂಡಿದ್ದಾರೆ. ಸಂಚಿತ್ ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಮೊಗ್ಗ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯತ್ ಕಚೇರಿ ಎದುರು ಇರುವ ಭೂಪಾಳಂ ಶರತ್ ಮನೆಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸ್ಟೆಬಿಲೈಜರ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ.

ದಟ್ಟ ಹೊಗೆ ಆವರಿಸಿದ ಕೂಡಲೇ ಭೂಪಾಳಂ ಕುಟುಂಬಸ್ಥರು ಮನೆಯಿಂದ ಹೊರಬಂದಿದ್ದಾರೆ.

ಈ ವೇಳೆ ತನ್ನ ಮಗ ಸಂಚಿತ್ ನನ್ನು ರಕ್ಷಿಸಲು ಮತ್ತೆ ಮನೆಯೊಳಗೆ ತೆರಳಿದ ಶರತ್, ಹೊಗೆಯ ಮಧ್ಯೆ ಸಿಲುಕಿ ಪ್ರಜ್ಞೆತಪ್ಪಿ ಬಿದ್ದಿದ್ದರು.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯ ಬೆಂಕಿ ನಂದಿಸುವ ಜೊತೆಗೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಶರತ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಉದ್ಯಮಿ ಶರತ್ ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿದೆ.

LEAVE A REPLY

Please enter your comment!
Please enter your name here

Hot Topics