DAKSHINA KANNADA
ನನ್ನ ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ಕೊಟ್ಟು ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ: ಅಭಯಚಂದ್ರ ಜೈನ್
ಮಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಅವಕಾಶ ಕೊಡಿ, ನನ್ನ ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ಕೊಟ್ಟು ಗೆಲ್ಲಿಸಿ ತೋರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಖ್ಯಾತ ಅಥ್ಲೆಟ್ ಮಿಲ್ಕಾ ಸಿಂಗ್ ಪುಣ್ಯಸ್ಮರಣೆ ಅಂಗವಾಗಿ ಪುಷ್ಪನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರೀಡಾ ಸಚಿವನಾಗಿದ್ದಾಗ ಮಂಗಳೂರಿನಲ್ಲಿ ಕ್ರಿಕೆಟ್ ಸ್ಟೇಡಿಯಮ್ ಮಾಡಲು ಭೂಸ್ವಾಧೀನಕ್ಕೆ ಪ್ರಯತ್ನ ಮಾಡಿದೆವು. ಆದರೆ ಈ ಮಧ್ಯೆ ನನ್ನ ಮಂತ್ರಿ ಸ್ಥಾನ ಹೋಯಿತು. ನಾನು ಶಾಸಕನಾಗುವವನಲ್ಲ. ಆದರೆ ಮಂಗಳೂರಿನಿಂದ ಶಾಸಕ, ಮಂತ್ರಿ ಆಗುವವರಲ್ಲಿ ವಿನಂತಿ. ಮಂಗಳೂರಿಗೆ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಮ್ ಅವಶ್ಯಕತೆ ಇದೆ. ಬದುಕಿನಲ್ಲಿ ಕ್ರೀಡೆಯಷ್ಟು ಸಂತೋಷದ ವಿಷಯವಿಲ್ಲ.
ಮಿಲ್ಕಾ ಸಿಂಗ್‌ಗೆ ಮರಣೋತ್ತರ ಭಾರತರತ್ನ ಕೊಡಬೇಕು. ಜೊತೆಗೆ ನೂರಾರು ಮಿಲ್ಕಾ ಸಿಂಗ್ ರನ್ನು ತಯಾರಿಸುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡಬೇಕು ಎಂದು ತಿಳಿಸಿದರು.
ಹಿರಿಯ ಕ್ರೀಡಾಪಟು ಸುನಿಲ್ ಶೆಟ್ಟಿ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುವಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ್ಯ ಮಿಥುನ್ ರೈ ಮತ್ತಿತರರಿದ್ದರು.
DAKSHINA KANNADA
Surathkal: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ- ವಿದ್ಯಾರ್ಥಿನಿಯರು ಗಂಭೀರ..!
ಸುರತ್ಕಲ್: ರಸ್ತೆ ದಾಟುತ್ತಿದ್ದ ವೇಳೆ ರಾಂಗ್ ಸೈಡ್‌ನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ಜಂಕ್ಷನ್ ಬಳಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿ ಗಾಯಗೊಂಡವರು ಎಂದು ತಿಳಿದು ಬಂದಿದೆ. ಇನ್ನೋರ್ವಳ ಸ್ಥಿತಿ ಚಿಂತಾಜನಕವಾಗಿದ್ದು. ಇನ್ನೊಬ್ಬಳಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅಗಮಿಸಿದ ಸುರತ್ಕಲ್ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
BANTWAL
ವೈನ್ ಶಾಪ್ ಗೆ ಬಂದಿದ್ದ ಆಸಾಮಿ ಮೊಬೈಲ್ ಕದ್ದು ಎಸ್ಕೇಪ್..!!
ಪುತ್ತೂರು: ವೈನ್ ಶಾಪ್ ಗೆ ಬಂದಿದ್ದ ವ್ಯಕ್ತಿಯೋರ್ವ ಮೊಬೈಲ್ ಎಗರಿಸಿ ಪರಾರಿಯಾದ ಘಟನೆ ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮ್ ವೈನ್ ಶಾಪ್ ನಲ್ಲಿ ನಡೆದಿದೆ.
ವ್ಯಕ್ತಿಯೋರ್ವ ಗ್ರಾಹಕರ ಸೋಗಿನಲ್ಲಿ ವೈನ್ ಶಾಪ್ ಗೆ ಬಂದಿದ್ದ. ಮೊದಲಿಗೆ ಗ್ರಾಹಕರಂತೆ ಬಂದು ಮದ್ಯ ಖರೀದಿಗೆ ಆರ್ಡರ್ ಮಾಡಿ ಟೇಬಲ್ ನಲ್ಲಿದ್ದ ಮೊಬೈಲ್ ಗೆ ಕನ್ನ ಹಾಕಿದ್ದಾನೆ. ಬಳಿಕ ಶಾಪ್ ನವರು ಬೇರೆ ಕಡೆ ತಿರುಗುವಾಗ ಈಚೆಯಿಂದ ಈ ಕದೀಮ ಮೊಬೈಲ್ ಅನ್ನು ಎಗರಿಸಿ ಬ್ಯಾಗ್ ಗೆ ಹಾಕಿಕೊಂಡು ಪರಾರಿಯಾಗಿದ್ದಾನೆ.
ವೈನ್ ಶಾಪ್ ನಲ್ಲಿರುವ ರಾಜೇಶ್ ಎಂಬವರ ಮೊಬೈಲ್ ಕಳವು ಆಗಿತ್ತು. ಕೂಡಲೇ ಅವರು ಸಿಸಿ ಕ್ಯಾಮರಾ ಚೆಕ್ ಮಾಡಿದ್ದಾರೆ. ಆಗ ಮೊಬೈಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BELTHANGADY
ದ.ಕ ದಲ್ಲಿ ಭಾರಿ ಮಳೆ: ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿದ್ದ ಅಂಗಡಿಗಳಿಗೆ ಹಾನಿ..!!
ಧರ್ಮಸ್ಥಳ: ಧರ್ಮಸ್ಥಳದಲ್ಲಿ 3ನೇ ದಿನದ ಲಕ್ಷ ದೀಪೋತ್ಸವದ ವೈಭವ ಒಂದು ಕಡೆಯಾದರೆ, ಇನ್ನೊಂದೆಡೆ ಗುಡುಗು ಸಹಿತ ಬಾರಿ ಮಳೆ ಅವಾಂತರ ತಂದಿದೆ.
ಕೆಲವು ಅಂಗಡಿಗಳಿಗೆ ಬಹಳ ಹಾನಿ ಆಗಿದೆ. ಮಳೆ ಅಂಗಡಿ ಮಾಲೀಕರಿಗೆ ನಷ್ಟವನ್ನುಂಟು ಮಾಡಿದೆ. ಮಳೆಗೆ ಅಂಗಡಿಯೊಳಗಿದ್ದ ಕೆಲವು ವಸ್ತುಗಳು ಮಳೆಗೆ ಕೊಚ್ಚಿಕೊಂಡು ಹೋಗಿದೆ.
ಧರ್ಮಸ್ಥಳ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ವಸ್ತು ಪ್ರದರ್ಶನಕ್ಕೆ ಬಹಳ ಸಮಸ್ಯೆ ಆಗಿದೆ. ಸಭಾಂಗಣದ ಬಳಿ ಹಾಕಿದ್ದ ಕುರ್ಚಿಗಳು ಒದ್ದೆಯಾಗಿದೆ.
- FILM5 days ago
ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ
- FILM4 days ago
ನಮೃತಾ ಗೌಡ ಆವಾಜ್ ಗೆ ಸಂಗೀತಾ ಕಣ್ಣೀರು
- bengaluru7 days ago
Film: ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಟಾಲಿವುಡ್ ಗೆ ಎಂಟ್ರಿ
- bengaluru5 days ago
ಹೈಕೋರ್ಟ್ ಕಲಾಪವನ್ನೂ ಬಿಡದ ಸೈಬರ್ ಹ್ಯಾಕರ್ಸ್-ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಅಶ್ಲೀಲ ದೃಶ್ಯ ಅಪ್ಲೋಡ್