ಮಂಗಳೂರು ಹೊರವಲಯದ ಉಳ್ಳಾಲ ಕುಂಪಲ ಆಶ್ರಯ ಕಾಲನಿಯ ರೂಪದರ್ಶಿ ಪ್ರೇಕ್ಷಳ ಸಾವಿನ ನಂತರ ಈ ಪ್ರದೇಶದಲ್ಲಿ ಸರಣಿ ಸಾವುಗಳು ಸಂಭವಿಸುತ್ತಿದ್ದು ಜನ ಕಂಗಲಾಗಿದ್ದಾರೆ.
ಉಳ್ಳಾಲ: ಮೊಬೈಲ್ ಷೋರೂಂ ನಲ್ಲಿ ಕೆಲಸಕ್ಕಿದ್ದ ಕುಂಪಲ ಮೂರು ಕಟ್ಟೆ ನಿವಾಸಿ ಅಕ್ಷಯ್ (25) ಎಂಬವರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ತಾಯಿ ಬೀಡಿ ಬ್ರಾಂಚಿಗೆ ತೆರಳಿದ್ದ ವೇಳೆ ಮನೆಯ ಕಿಟಕಿಗೆ ಬೈರಾಸಿನಿಂದ ನೇಣು ಬಿಗಿದು ಆತ್ಮ ಹತ್ಯೆಗೈದ ಮಾಡಿಕೊಂಡಿದ್ದಾರೆ.
ತೊಕ್ಕೊಟ್ಟಿನ ಅನು ಮೊಬೈಲ್ ಸೆಂಟರಲ್ಲಿ ಕೆಲಸಕ್ಕಿದ್ದು ಕಳೆದ 20 ದಿವಸಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರು.
ಮೊಬೈಲ್ ಶಾಪ್ ಮಾಲಕರು ಕರೆ ಮಾಡಿದರೂ ಅಕ್ಷಯ್ ಕರೆ ಸ್ವೀಕರಿಸುತ್ತಿರಲಿಲ್ಲ.
ಖಿನ್ನತೆಯಿಂದ ಅಕ್ಷಯ್ ಆತ್ಮ ಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.
ಮೃತ ಅಕ್ಷಯ್ ತಾಯಿ,ಇಬ್ಬರು ಸಹೋದರಿಯರನ್ನ ಅಗಲಿದ್ದಾರೆ.ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕುಂಪಲದಲ್ಲಿ ಹೆಚ್ಚಿದ ಅಕಾಲಿಕ ಸಾವು- ನೋವುಗಳಿಂದ ಜನ ಕಂಗಾಲು.. !
ಕುಂಪಲ ಆಶ್ರಯ ಕಾಲನಿಯ ರೂಪದರ್ಶಿ ಪ್ರೇಕ್ಷಳ ಸಾವಿನ ನಂತರ ಈ ಪ್ರದೇಶದಲ್ಲಿ ಸರಣಿ ಸಾವುಗಳು ಸಂಭವಿಸುತ್ತಿವೆ.
ಕಳೆದ ವಾರವಷ್ಟೆ ನಂತೂರಿನಲ್ಲಿ ನಡೆದ ಅಪಘಾತದಲ್ಲಿ ಚಿಕ್ಕಪ್ಪನ ಜತೆ ಸ್ಕೂಟರಲ್ಲಿದ್ದ ಕುಂಪಲ ಗುರುನಗರದ ವಿದ್ಯಾರ್ಥಿನಿ ಭೂಮಿಕ(17) ಸಾವನ್ನಪ್ಪಿದ್ದರು.
ಕಳೆದ ವರುಷದ ಸೆಪ್ಟೆಂಬರ್ ತಿಂಗಳೊಂದರಲ್ಲೇ ಕುಂಪಲ ಪ್ರದೇಶದ ರಿಕ್ಷಾ ಚಾಲಕರಾದ ಜಯಪ್ರಕಾಶ್(42)ಜಯಂತ್ ಎಸ್.ಕುಂಪಲ(48)ಮತ್ತು ಧನಂಜಯ ರಾವ್ (53) ಎಂಬ ಮೂವರು ಅಕಾಲಿಕವಾಗಿ ಸಾವನ್ನಪ್ಪಿದ್ದರು.