ಮನೆ ಕೊಟ್ಟಿಗೆಯ ಕಾಮಗಾರಿಯ ವೇಳೆ ಘೋರ ದುರಂತ ನಡೆದು ಮೂವರು ಕಾರ್ಮಕರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸಂಭವಿಸಿದೆ.
ಸುಳ್ಯ : ಮನೆ ಕೊಟ್ಟಿಗೆಯ ಕಾಮಗಾರಿಯ ವೇಳೆ ಘೋರ ದುರಂತ ನಡೆದು ಮೂವರು ಕಾರ್ಮಕರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸಂಭವಿಸಿದೆ.
ಕಾಮಾಗಾರಿ ವೇಳೆ ತಡೆ ಗೋಡೆ ಮತ್ತು ಮಣ್ಣು ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಸುಳ್ಯದ ಗಾಂಧಿನಗರ ಎಂಬಲ್ಲಿ ಈ ಘೋರ ದುರಂತ ಸಂಭವಿಸಿದೆ.
.ಕಾರ್ಮಿಕರಾದ 45ವರ್ಷದ ಸೋಮಶೇಖರ ಮತ್ತು ಅವರ ಪತ್ನಿ 40ವರ್ಷದ ಶಾಂತ ಮತ್ತು ಇನ್ನೋರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅಬೂಬಕ್ಕರ್ ಎಂಬವರಿಗೆ ಸೇರಿದ ಮನೆಯ ಕೊಟ್ಟಿಗೆ ನಿರ್ಮಾಣಕ್ಕೆ ಸಂಬಂಧಿಸಿದ ಪಿಲ್ಲರ್ ಕಾಮಗಾರಿಯ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಪೊಲೀಸರು , ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು ಪರಿಹಾರ ಕಾರ್ಯಾಚರಣೆ ಆರಂಭಿಸಲಾಗಿದೆ.