Tuesday, May 30, 2023

ಸಕಾಲದಲ್ಲಿ ಚಿಕಿತ್ಸೆ ಕೊಡಿಸಲಿಕ್ಕಾಗದೆ ಪ್ರತಿಭಾನ್ವಿತ ವಿದ್ಯಾರ್ಥಿನಿಯ ದಾರುಣ ಅಂತ್ಯ..!

ಸಕಾಲದಲ್ಲಿ ಚಿಕಿತ್ಸೆ ಕೊಡಿಸುವುದಕ್ಕೆ ಸಾಧ್ಯವಾಗದೇ ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳು ದಾರುಣ ಅಂತ್ಯ ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ. 

ಹೊನ್ನಾವರ : ಸಕಾಲದಲ್ಲಿ ಚಿಕಿತ್ಸೆ ಕೊಡಿಸುವುದಕ್ಕೆ ಸಾಧ್ಯವಾಗದೇ ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳು ದಾರುಣ ಅಂತ್ಯ ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ವಿಜ್ಞಾನ ಎಷ್ಟೇ ಮುಂದುವರಿದರೂ ವಿಧಿಯಾಟದ ಮುಂದೆ ಸೋಲುತ್ತದೆ ಅನ್ನುವುದು ಮತ್ತೆ ಸಾಬೀತಾದಂತಾಗಿದೆ.

ಹೊನ್ನಾವರ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯ ಉಪ್ಲೆಯ ಯುವತಿ ವಿನುತಾ ಶೇಟ್ ಮೋಹನ್ ಶೆಟ್ ಅವರ ಎರಡು ಹೆಣ್ಣು ಮಕ್ಕಳಲ್ಲಿ ಹಿರಿಯ ಮುದ್ದಿನ ಮಗಳು ಮನಗೆ ಹಾಗು ಕುಟುಂಬದವರಿಗಷ್ಟೆ ಅಲ್ಲದೆ ಊರಿನವರಿಗೆ ಅವರ ಮನೆಯ ಬಗ್ಗೆ ಮತ್ತು ಮನೆಯ ಮಗಳ ಬಗ್ಗೆ ಅಪಾರ ಗೌರವ.

ಯಾರೇ ಪರಿಚಯದವರು ಸಿಕ್ಕರೂ ಮುಗುಳ್ನಗೆಯೊಂದಿಗೆ ಮಾತನಾಡಿಸಿಯೇ ಮುಂದೆ ಹೋಗುವ ಸ್ವಭಾವ ಅವಳದ್ದು. ಕಲಿಕೆಯಲ್ಲಿ ಹಲವಾರು ಸ್ಥಾನಗಳಿಸಿರುವ ಸ್ಟೂಡಂಟೆ ಆಗಿದ್ದು ಮಂಗಳೂರಿನಲ್ಲಿ ಬಿ.ಇ ಪರೀಕ್ಷೆ ಬರೆದಿದ್ದು ಕೊನೆಯ ಪರೀಕ್ಷೆ ಮುಗಿಸಿ ಮನೆಗೆ ಬರುವವಳಿದ್ದಳು.

ಪರಿಕ್ಷೆ ಬರೆಯುವ ಸಂದರ್ಭದಲ್ಲಿಯೇ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿದ್ದು ಅಭ್ಯಾಸದಲ್ಲಿ ಅತಿ ಹೆಚ್ಚು ಅಂಕ ಪಡೆಯಬೇಕು ಎನ್ನುವ ಮಹದಾಸೆಯಿಂದ ಆರೋಗ್ಯದ ಬಗ್ಗೆ ತಲೆ ಕೆಡಿಸಿ ಕೊಳ್ಳದೆ ಪರೀಕ್ಷೆ ಬರೆದು ಮುಗಿಸಿದ್ದಾಳೆ ಪರೀಕ್ಷೆ ಮುಗಿಸಿ ಮನೆಗೆ ಬರುವ ಮೊದಲು ತಂದೆಗೆ ಅನಾರೋಗ್ಯದ ಬಗ್ಗೆ ತಿಳಿಸಿದ್ಧಾಳೆ.

ತಂದೆ ತಾಯಿ ಇಬ್ಬರೂ ಮಂಗಳೂರಿಗೆ ತೆರಳಿ ಪ್ರಸಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮನೆಗೆ ಕರೆದುಕೊಂಡು ಹೊರಟಿದ್ದರು ಎನ್ನಲಾಗುತ್ತಿದೆ.

ಅವಳಿಗೆ ಆದ ಸಮಸ್ಯೆ ಕುರಿತು ಊರಿನಲ್ಲಿ ಕೆಲವರಿಗೆ ತಿಳಿಸಿದಾಗ ಅದು “ಸರ್ಪಸುತ್ತು” ಎಂದು ತಿಳಿದು ಬಂದಿದೆ.

ಆದರೆ ಶರೀರದ ಒಳಗಡೆ ಆಗಿದ್ದರಿಂದ ವೈದ್ಯರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಸಿಗಲಿಲ್ಲ ಎಂದೇ ಹೇಳಲಾಗುತ್ತಿದೆ.

ಮೋಹನ ಶೇಟ್ ಅವರಿಗೆ ವಿಷಯ ತಿಳಿದ ಮೇಲೆ ಊರಿಗೆ ಅರ್ಜಂಟ ಕರೆತಂದು ನಾಟಿ ಔಷದಿ ಕೊಡಿಸಲು ಮುಂದಾಗಿದ್ದು ಕೂಡಲೆ ಮಂಗಳೂರಿನಿಂದ ಕಾರಿನಲ್ಲಿ ಮಗಳನ್ನ ಕರೆದುಕೊಂಡು ಹೊರಟಿದ್ದಾರೆ.

ಆದರೆ ಆ ವಿಧಿ ಅವರಿಗೆ ಹೊನ್ನಾವರದಲ್ಲಿ ಅಡ್ಡವಾಗಿ ನಿಂತಿತ್ತು ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ವಾಹನ ಸಂಚಾರ ಸ್ಥಗಿತವಾಗಿದ್ದರಿಂದ ಮಗಳಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಸಾದ್ಯವಾಗದೆ ಕೊನೆಯುಸಿರೆಳೆದಿದ್ದಾಳೆ.

ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು ವಿಧಿಯಾಟಕ್ಕೆ ಮಗಳನ್ನ ಕೈ ಚೆಲ್ಲಿ ಕೂರುವಂತಾಗಿದೆ.

LEAVE A REPLY

Please enter your comment!
Please enter your name here

Hot Topics