Sunday, March 26, 2023

ಮಹಾಮಾರಿ ಮುಕ್ತಿಗಾಗಿ ಪೇಜಾವರ ಶ್ರೀಗಳ ಪೂರ್ವಾಶ್ರಮದ ತಂದೆಯಿಂದ ಚತುಃ ಸಂಹಿತಾಯಾಗ..!

ಮಂಗಳೂರು: ಕಂಡು ಕೇಳರಿಯದ ವಿಪತ್ತು ನಷ್ಟವನ್ನು ತಂದಿಟ್ಟು ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಮಹಾವ್ಯಾಧಿಯ ಮುಕ್ತಿಗಾಗಿ ಪ್ರಪಂಚಾದ್ಯಂತ ಅಸಂಖ್ಯ ಜನ ಹಗಲಿರುಳೆನ್ನದೆ ಭಗೀರಥ ಯತ್ನ ನಡೆಸುತ್ತಿದ್ದಾರೆ .

ಇದೇ ನಿಟ್ಟಿನಲ್ಲಿ ಪರಮಸಾತ್ವಿಕ ಶತಾಯುಷಿ 102 ರ ಹರೆಯದ ಚತುರ್ವೇದ ಪಾರಂಗತರೂ ಆಗಿರುವ ವೈದಿಕ ಅಂಗಡಿಮಾರು ಕೃಷ್ಣ ಭಟ್ಟರು ಹಳೆಯಂಗಡಿ ಸಮೀಪದ ಪಕ್ಷಕೆರೆಯ ತಮ್ಮ ನಿವಾಸದಲ್ಲಿ ಚತುಃ ಸಂಹಿತಾಯಾಗವನ್ನು ನೆರವೇರಿಸಿದ್ದಾರೆ.

ಕೊರೊನಾ ಮುಕ್ತಿ ಮತ್ತು ಜಗತ್ತಿನ ಕ್ಷೇಮಕ್ಕಾಗಿ ಅತ್ಯಂತ, ಶ್ರದ್ಧೆ ಪರಿಶ್ರಮಗಳಿಂದ ಕಳೆದ ಅನೇಕ ದಿನಗಳಿಂದ ಈ ಯಾಗವನ್ನು ನೆರವೇರಿಸಿಕೊಂಡು ಬಂದಿದ್ದಾರೆ.

ಇನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ತಂದೆಯವರಾಗಿರುವ ಭಟ್ಟರು ತಮ್ಮ ಅಪಾರವಾದ ಜೀವನಶ್ರದ್ಧೆಯಿಂದ ಮಾದರಿ ಬದುಕು ನಡೆಸುತ್ತಿರುವವರು .

ಸ್ವಂತಕ್ಕಾಗಿ ಅಲ್ಪ ಪರಾರ್ಥಕ್ಕಾಗಿ ಅಪಾರ ಎಂಬ ನೈಜ ನೆಲೆಯಲ್ಲಿ ವೈದಿಕ ಜೀವನವನ್ನು ನಡೆಸಿಕೊಂಡು ಬರುತ್ತಿರುವವರು . ತಾನು ಮಾತ್ರವಲ್ಲದೇ ತಮ್ಮ ತುಂಬು ಸಂಸಾರಕ್ಕೂ ಇದೇ ಸಾತ್ವಿಕ ತತ್ವದ ಜೀವನ ಪಾಠವನ್ನು ಬೋಧಿಸಿ ಅವರೂ ಅದೇ ದಾರಿಯಲ್ಲಿ ನಡೆಯಲು ಪ್ರೇರೇಪಿಸಿದವರು .

ತಮ್ಮ ಜೀವಮಾನದಲ್ಲಿ ಕೊರೊನಾದಂಥಹ ಮಹಾವ್ಯಾಧಿ ಜಗತ್ತನ್ನು ಕಂಡು ಕೇಳರಿಯದ ರೀತಿಯಲ್ಲಿ ಬಾಧಿಸುತ್ತಿರುವುದನ್ನು ಕಂಡು ಮರುಗಿದ ಈ ಹಿರಿಜೀವ ತನ್ನ ಅರಿವಿನ ನೆಲೆಯಲ್ಲಿ ಋಕ್ ಯಜು ಸಾಮ ಹಾಗೂ ಅಥರ್ವವೇದಗಳೆಂಬ ನಾಲ್ಕೂ ವೇದಗಳ ಯಾಗವನ್ನು ಸಂಕಲ್ಪಿಸಿ ತಾನೇ ಸ್ವತಃ ಯಾಜ್ಞಿಕರಾಗಿ ಯಾಗ ನೆರೆವೇರಿಸುತ್ತಾ ಲೋಕಕ್ಷೇಮಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ .

ಕಳೆದ ಅನೇಕ ದಿನಗಳಿಂದ ತನ್ನ ಸ್ವಗೃಹದಲ್ಲೇ ವಿದ್ವಾಂಸರೂ ಆಗಿರುವ ಪುತ್ರರು ಹಾಗೂ ಇತರೆ ಕೆಲವು ವಿದ್ವಾಂಸರ ಸಹಕಾರದೊಂದಿಗೆ ಈ ಚತುಃ ಸಂಹಿತಾಯಾಗ ಪ್ರಾರಂಭಿಸಿದ ಭಟ್ಟರು ಈಗಾಗಲೇ ಋಕ್ ಮತ್ತು ಯಜುಃಸಂಹಿತಾ ಯಾಗಗಳನ್ನು ಸಂಪನ್ನಗೊಳಿಸಿದ್ದಾರೆ .

ಮುಖ್ಯವಾಗಿ ಲಾಕ್ ಡೌನ್ ಇರುವ ಕಾರಣ ಯಾವ ಆಡಂಬರವೂ ಇಲ್ಲದೇ ಕೊರೊನಾ ನಿರ್ಬಂಧಗಳನ್ನು ಪಾಲಿಸಿಕೊಂಡು ಕೇವಲ ಬೆರಳೆಣಿಕೆಯ ವಿದ್ವಾಂಸರನ್ನು ಮಾತ್ರ ಸೇರಿಸಿಕೊಂಡು ಅನುಷ್ಠಾನಕ್ಕೆ ಹೆಚ್ಚು ಒತ್ತುಕೊಡು ಈ ಕರ್ತವ್ಯವನ್ನು ನೆರವೇರಿಸಲಾಗುತ್ತಿದೆ .

LEAVE A REPLY

Please enter your comment!
Please enter your name here

Hot Topics

ಸುಳ್ಯ : ಮನೆ ಕೊಟ್ಟಿಗೆ ಕಾಮಗಾರಿಯ ವೇಳೆ ಘೋರ ದುರಂತ – ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತ್ಯು..!

ಮನೆ ಕೊಟ್ಟಿಗೆಯ ಕಾಮಗಾರಿಯ ವೇಳೆ ಘೋರ ದುರಂತ ನಡೆದು ಮೂವರು ಕಾರ್ಮಕರು ದಾರುಣವಾಗಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಸಂಭವಿಸಿದೆ.ಸುಳ್ಯ : ಮನೆ ಕೊಟ್ಟಿಗೆಯ ಕಾಮಗಾರಿಯ ವೇಳೆ ಘೋರ...

ಉಡುಪಿ ಪಡುಬಿದ್ರೆಯಲ್ಲಿ ಬೈಕಿಗೆ ಟ್ಯಾಂಕರ್ ಢಿಕ್ಕಿ; ಸವಾರರಿಬ್ಬರು ಮೃತ್ಯು..!

ಉಡುಪಿ : ಬೈಕ್‌ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಉಚ್ಚಿಲದಲ್ಲಿ ಶನಿವಾರ ಸಂಜೆ ನಡೆದಿದೆ.ಮೃತರನ್ನು ಫಲಿಮಾರು ಅವರಾಲುಮಟ್ಟುವಿನ ಅಡ್ಕ ಸುಬ್ರಹ್ಮಣ್ಯ (30)...

ಬಂಟ್ವಾಳ: ಆಸ್ತಿಗಾಗಿ ಹೆತ್ತ ತಾಯಿಯ ಜುಟ್ಟು ಹಿಡಿದು ಮುಖಚಚ್ಚಿದ ಪಾಪಿ ಮಗ

ಬಂಟ್ವಾಳ: ಆಸ್ತಿಯಲ್ಲಿ ಪಾಲುಕೊಡುವಂತೆ ಹೆತ್ತ ತಾಯಿಗೆ ಬೆದರಿಸಿ ಗಾಯಗೊಳಿಸಿ ಮಗ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಘಟನೆ ವಿವರ ಮಾ.24 ರಂದು ಇಡ್ಕಿದು ಗ್ರಾಮದ ನಾರಾಯಣ ಗೌಡ ಎಂಬುವವರ...