ಬಂಟ್ವಾಳ :ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರದ ವೇಳೆ ಮಗನೂ ಸಹ ಕುಸಿದುಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಣಚ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಬೈಲುಗುತ್ತು ಕೊಪ್ಪಳ ನಿವಾಸಿ ನಿವೃತ್ತ ಕೆ.ಪಿ.ಟಿ ಪ್ರೊಫೆಸರ್ ಭುಜಂಗ ಶೆಟ್ಟಿಯಯವು ಕೊರೊನಾದಿಂದ ಸಾವನ್ನಪ್ಪಿದ್ದರು. ತಂದೆಯ ಅಂತ್ಯಕ್ರಿಯೆ ಸಂದರ್ಭ ಮಗ ಶೈಲೇಶ್ ಕೂಡ ಪಕ್ಕದಲ್ಲೇ ಇದ್ದರು.
ಭುಜಂಗ ಶೆಟ್ಟಿ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಪುಣಚದ ಅವರ ಮನೆಯಲ್ಲಿ ಕೊರೊನಾ ನಿಯಮಾವಳಿಗಳ ಪ್ರಕಾರ ನಡೆಸಲಾಗುತ್ತಿತ್ತು. ಈ ಸಂದರ್ಭ ಅವರ ಪುತ್ರ ಶೈಲೇಶ್ ಕೂಡ ಭಾಗಿಯಾಗಿದ್ದರು.
ಈ ಸಂದರ್ಭ ಶೈಲೇಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಅವರು ಮನೆಯತ್ತ ಹೋಗಿದ್ದಾರೆ, ಆದರೆ ಮನೆಯ ಅಂಗಳ ತಲುಪುತ್ತಲೇ ಏಕಾಎಕಿ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.