Connect with us

    ಇದೇನು ಮನೆಯೋ ಅಥವಾ ಕ್ಯಾಮೆರಾನೋ.? ಅಂತ ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಅಪರೂಪದ ಮನೆ..

    Published

    on

    ಇದೇನು ಮನೆಯೋ ಅಥವಾ ಕ್ಯಾಮೆರಾನೋ.? ಅಂತ ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಅಪರೂಪದ ಮನೆ..

    ಬೆಳಗಾವಿ: ವೃತ್ತಿಯೇ ಆತನಿಗೆ ಕನಸು. ಬದುಕು ಕೊಟ್ಟ ವೃತ್ತಿಯೇ ಕನಸಿನ ಮನೆಯಾಗಬೇಕು ಎನ್ನೋದು ಮತ್ತೊಂದು‌ ಕನಸು.

    ತುತ್ತು ಕೊಟ್ಟ ಕಾಯಕವೇ ಕರುಳು ಬಳ್ಳಿಯಾಗಬೇಕು ಎನ್ನುವುದು‌ ಕೂಡ ಮಗದೊಂದು ಕನಸು. ಅರೇ ಇದೇನಪ್ಪಾ ಕನಸು ಅಂತಾ ಹೇಳ್ತಿದ್ದಾರಲ್ಲ ಅಂದ್ಕೊಂಡ್ರಾ.

    ಹೌದು ಅಪರೂಪದ ಅಭಿರುಚಿಯ ಛಾಯಾಗ್ರಾಹಕನೊಬ್ಬನ ಅಭಿರುಚಿಯ ಬದುಕಿನ ಮೇಲಿನ ಛಾಯೆಯ ಕಥೆ ಇದು.

    ಛಾಯಾಗ್ರಾಹಕನ ಕನಸಿಗೂ ಅದೇ ಹೆಸರು.. ಆತನ ಕರುಳು ಬಳ್ಳಿಗೂ ಅದೇ ಹೆಸರು… ಅಯ್ಯಯ್ಯೋ ಹೆಸರು, ಕನಸು ಅಂತೆಲ್ಲ ಏನೆನೋ ಕಥೆ ಹೇಳ್ತಿದ್ದಿರಿ ಅಂದ್ಕೋಬೇಡಿ.

     

    ಇದು ಬೆಳಗಾವಿಯ ಛಾಯಾಗ್ರಾಹಕನ ಡಿಫರಂಟ್ ಬದುಕಿನ ಕಹಾನಿ. ಹೌದು ಇಲ್ಲಿನ ರವಿ ಹೊಂಗಲ್ ಎನ್ನುವ ಫೋಟೊಗ್ರಾಫರ್ ವಿಭಿನ್ನ ಅಭಿರುಚಿಯ ವ್ಯಕ್ತಿ.

    ಕ್ಯಾಮರಾ ಕಣ್ಣಲ್ಲಿ ಜಗತ್ತನ್ನೆ ಸೃಷ್ಟಿಸಬಲ್ಲ ಮಾಂತ್ರಿಕ. ಊರೂರು ಅಲೆದು ಫೋಟೊ ತೆಗೆದು ಬಂದ ಕಮಾಯಿಯಲ್ಲಿ ಕಷ್ಟಪಟ್ಟು ಜೀವನ ರೂಪಿಸಿಕೊಂಡಿದ್ದಾರೆ.

    ಹೀಗಾಗಿ ಬದುಕು ರೂಪಿಸಿದ ವೃತ್ತಿ, ತುತ್ತು ನೀಡಿದ ಕಾಯಕ ಫೋಟೊ ಗ್ರಾಫಿ ವೃತ್ತಿ ಅಂದ್ರೆ ಇವರಿಗೆ ಎಲ್ಲಿಲ್ಲದ ಗೌರವ.

    ಹೀಗಾಗಿ ಇವರ ಇಡೀ ಬದುಕಿನ ಛಾಯೆಯೇ ಕೊಂಚ ಡಿಫರಂಟ್.! ರವಿ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮಕ್ಕಳಿಗೆ ಕೆನಾನ್, ನಿಕಾನ್, ಎಪ್ಸಾನ್ ಅಂತ ಹೆಸರಿಟ್ಟಿದ್ದಾರೆ.

    ಇನ್ನು ದುಡಿದ ಹಣದಲ್ಲಿ ಕನಸಿನ ಮನೆ ಕಟ್ಟಬೇಕು ಎನ್ನುವ ಆಲೋಚನೆ ಹೊಂದಿದ್ರು. ಹೀಗಾಗಿ ಲಕ್ಷಾಂತರ ಹಣ ಖರ್ಚು ಮಾಡಿ ಮನೆ ನಿರ್ಮಿಸಿದ್ದಾರೆ.

    ಆದ್ರೆ ಇದನ್ನು ನೋಡಿದವರಿಗೆ ಇದೇನೊ ಮನೆನೋ ಅಥವಾ ದೊಡ್ಡ ಕ್ಯಾಮರಾನೋ ಎನ್ನುವಂತಿದೆ.

    ಇನ್ನು ಕೆಲವರು ಯಾವುದಾದರೂ ಸ್ಟುಡಿಯೋ ಇರಬಹುದು ಅಂತ್ಕೋತಾರೆ. ಮನೆಯೇ ಕ್ಯಾಮರಾದಂತೆ ನಿರ್ಮಿಸಿದ್ದಾರೆ.

    ಮನೆಯ ಮುಂಭಾಗದಲ್ಲಿ ದೊಡ್ಡದಾದ ಕ್ಯಾಮರಾ ಕಣ್ಣನ್ನಿಟ್ಟು ಲೆನ್ಸ್ ನಿರ್ಮಿಸಿದ್ದಾರೆ. ಅದರ ಸುತ್ತಲೂ ಕೆನಾನ್, ನಿಕಾನ್, ಎಪ್ಸಾನ್ ಅಂತ ಬರೆಸಿದ್ದಾರೆ.

    ಜೊತೆಗೆ ಈಗಾಗಲೇ ಕ್ಯಾಮರಾ ಉದ್ಯಮಕ್ಕೂ ಡಿಜಿಟಲ್ ಸ್ಪರ್ಷ ಆಗಿರೋದ್ರಿಂದ ರೋಲ್ ಕ್ಯಾಮರಾ ಈಗ ಮಾಯವಾಗಿದೆ.

    ಆದ್ರೆ ಇವರು ಮಾತ್ರ ತಾವು ವೃತ್ತಿ ಆರಂಭಿಸಿದಾಗಿನ ರೋಲ್ ನೆನಪಿಗೆ ಮನೆ ಮುಂಭಾಗಕ್ಕೆ ರೋಲ್ ಚಿತ್ರ ನಿರ್ಮಿಸಿದ್ದಾರೆ.

    ರವಿಯವರ ಬದುಕಿನಲ್ಲಿ ಅವರ ಪತ್ನಿ ಪಾತ್ರ ಕೂಡ ಮಹತ್ವದ್ದು. ಅವರ ಪ್ರತಿ ಕಾರ್ಯಕ್ಕೆ ಅವರ ಸಾಥ್ ಇದ್ದೆ ಇರುತ್ತದೆ.

    ಹೀಗಾಗಿ ಪತಿಯ ಅಭಿರುಚಿ, ಆಲೋಚನೆಗೆ ಮಾತ್ರ ಪತ್ನಿ ಎಂದೂ ವಿರೋಧಿಸಿಲ್ಲ. ಇನ್ನು ಮಕ್ಕಳಿಗೂ ಕೂಡ ತಂದೆ ಇಟ್ಟ ಹೆಸರಿನ ಬಗ್ಗೆ ಬಹಳಷ್ಟು ಅಭಿಮಾನ.

    ಕುಂದಾ ನಗರಿಯಲ್ಲಿ ರವಿ ಅವರ ಕ್ಯಾಮರಾ ಕಣ್ಣಿನ ಚಮತ್ಕಾರ ಮನೆ ಮಾತಾಗಿದೆ.

    ಇಂತಹ ಅಪರೂಪದ ಕನಸುಗಾರ ಛಾಯಾಗ್ರಾಹಕನ ಕಾಯಕ ಪ್ರೀತಿ ಮಾದರಿಯಾಗಿದೆ. ಈ ಛಾಯಾಗ್ರಾಹಕರಿಗೆ ಒಂದು ಸಲಾಂ……….

    ಕೃಪೆ: ಬೆಳಗಾವಿ ಪ್ರಜಾ ಟಿವಿ ಕ್ಯಾಮರಾಮೆನ್

    Click to comment

    Leave a Reply

    Your email address will not be published. Required fields are marked *

    LATEST NEWS

    ಚಿಕನ್​ನಲ್ಲಿ ಉಪ್ಪು ಕಡಿಮೆ ಎಂದ ಗಂಡ.. ರಾಡ್​ನಿಂದ ಹೊಡೆದು ಕೊ*ಲೆ ಮಾಡಿದ ಹೆಂಡತಿ

    Published

    on

    ಪಾಟ್ನಾ: ಚಿಕನ್​ ಸಾಂಬಾರ್​​ನಲ್ಲಿ ಉಪ್ಪು ಕಡಿಮೆ ಇದೆ ಅಂತ ಹೇಳಿದ್ದಕ್ಕೆ ಗಂಡನಿಗೆ ಕಬ್ಬಿಣದ ರಾಡ್​ನಿಂದ ಹೊಡೆದು ಹೆಂಡತಿ ಕೊ*ಲೆ ಮಾಡಿದ್ದಾಳೆ. ಬಿಹಾರದ ಚಂಪಾರಣ್ ಜಿಲ್ಲೆಯ ಚೌತರ್ವದ ಕೊಲ್ಹುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಕೊಲ್ಹುವಾ ಗ್ರಾಮದ ಶಂಶೇರ್ ಆಲಂ ಅಲಿಯಾಸ್ ಲಾಲು (35) ಮೃ*ತ ದುರ್ದೈವಿ. ಪತ್ನಿ ಶಹನಾಜ್ ಬೇಗಂ ಹಾಗೂ ಈಕೆ ಸಹೋದರಿ ಅಪ್ರಾಪ್ತೆಯನ್ನ ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಯಾವಾಗಲೂ ಮಾಡುವಂತೆ ಹೆಂಡತಿ ಚಿಕನ್ ಸಾಂಬಾರ್ ಮಾಡಿದ್ದಳು. ಮನೆಗೆ ಬಂದ ಗಂಡ ಚಿಕನ್ ಊಟ ಮಾಡುತ್ತ ಚಿಕನ್​ಗೆ ಉಪ್ಪು ಜಾಸ್ತಿ ಆಗಿದೆ. ನೋಡಿಕೊಂಡು ಚಿಕನ್ ಮಾಡೋಕೆ ಬರಲ್ವಾ ಎಂದು ಪ್ರಶ್ನೆ ಮಾಡಿದ್ದಾನೆ ಎಂದು ಹೇಳಲಾಗಿದೆ.

    ಇದೇ ಮಾತಿಗೆ ಕೋಪಗೊಂಡ ಹೆಂಡತಿ ಮನೆಯಲ್ಲಿದ್ದ ರಾಡ್​ ತೆಗೆದುಕೊಂಡು ಗಂಡನಿಗೆ ಮನಬಂದಂತೆ ಹೊಡೆದಿದ್ದಾಳೆ. ಹೆಂಡತಿ ಹೊಡೆಯುವಾಗ ಈಕೆ ಅಪ್ರಾಪ್ತ ಸಹೋದರಿ ಕೂಡ ಕೋಲು ಹಿಡಿದುಕೊಂಡು ಬಂದು ಮಾವನಿಗೆ ಹೊಡೆದಿದ್ದಾಳೆ. ಆದರೆ ರಾಡ್​ನಿಂದ ಬಲವಾದ ಪೆಟ್ಟು ಬಿದ್ದಿದ್ದರಿಂದ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾನೆ. ಕೂಗಾಟ, ಅರಚಾಟ ಕೇಳಿ ಪಕ್ಕದ ಮನೆಯವರು ಬಂದು ನೋಡುವಷ್ಟರಲ್ಲಿ ಗಂಡನನ್ನ ಹ*ತ್ಯೆ ಮಾಡಿದ್ದಳು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃ*ತನ ಹೆಂಡತಿ ಹಾಗೂ ಅಪ್ರಾಪ್ತೆಯನ್ನು ಅರೆಸ್ಟ್ ಮಾಡಿ ತನಿಖೆ ಮುಂದುವರೆಸಿದ್ದಾರೆ. ಮೃ*ತದೇಹವನ್ನು ಮರ*ಣೋ*ತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃ*ತ ಶಂಶೇರ್ ಆಲಂ ಗುಜರಾತ್​ನಲ್ಲಿ ಕೆಲಸ ಮಾಡುತ್ತಿದ್ದನು. ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದನು ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

    Continue Reading

    International news

    ಪೋಲಿಯೋ ಲಿಸಿಕೆ ಅಭಿಯಾನಕ್ಕೆ ತಾಲಿಬಾನ್‌ ಅಡ್ಡಿ..!

    Published

    on

    ಮಂಗಳೂರು/ಅಫ್ಘಾನಿಸ್ತಾನ:  ಅಫ್ಘಾನಿಸ್ತಾನದಲ್ಲಿ 18 ಪೋಲಿಯೋ ಪ್ರಕರಣಗಳು ದೃಢಪಟ್ಟಿದ್ದು, ಇದರ ನಿರ್ಮೂಲನೆಗೆ ಸೂಕ್ತ ಕ್ರಮವಹಿಸಲು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಆದ್ರೆ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಪೋಲಿಯೋ ರೋಗವನ್ನು ತೊಡೆದು ಹಾಕುವ ಪ್ರಯತ್ನಕ್ಕೆ ದೊಡ್ಡ ಹೊಡೆತ ನೀಡಿದೆ. ರಾಷ್ಟ್ರ ವ್ಯಾಪಿ ನಡೆಯಬೇಕಾಗಿದ್ದ ಪೋಲಿಯೋ ಲಸಿಕೆ ಅಭಿಯಾನವನ್ನೇ  ತಾಲಿಬಾನ್ ಸರ್ಕಾರ ರದ್ಧು ಮಾಡಿದೆ.

    ಕಳೆದ ವರ್ಷದಿಂದ ಅಫ್ಘಾನಿಸ್ಥಾನದಲ್ಲಿ ಪೋಲಿಯೋ ಪ್ರಕರಣ ದಾಖಲಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸೂಕ್ತ ಆರೋಗ್ಯ ಕ್ರಮಕ್ಕೆ ಸೂಚನೆ ನೀಡಿತ್ತು. ಆದ್ರೆ, ಕಾರಣ ನೀಡದ ತಾಲಿಬಾನ್ ಸರ್ಕಾರ ಲಿಸಿಕಾ ಅಭಿಯಾನಕ್ಕೆ ತಡೆ ನೀಡಿದೆ. ಈ ಬಗ್ಗೆ ಅಫ್ಘಾನಿಸ್ತಾನದ ಆರೋಗ್ಯ ಅಧಿಕಾರಿಯೊಬ್ಬರು ದಿ ಗಾರ್ಡಿಯನ್‌ ಮಾಧ್ಯಮಕ್ಕೆ ಮಾಹಿತಿ ನೀಡಿ, “ಪ್ರಸ್ತುತ ಸರ್ಕಾರದ ನಾಯಕತ್ವವು ಮನೆ ಮನೆಗೆ ಲಸಿಕಾ ಅಭಿಯಾನ ನಡೆಸದಂತೆ ಆದೇಶಿಸಿದೆ” ಎಂದಿದ್ದಾರೆ. ಮನೆ ಮನೆ ಅಭಿಯಾನದ ಬದಲಾಗಿ ಮಸೀದಿಗಳಲ್ಲಿ ಪೋಲಿಯೋ ಲಸಿಕೆ ಹಾಕಿಸಲು ಸೂಚನೆ ನೀಡಿದೆ.

    ಪೋಲಿಯೋ ನಿರ್ಮೂಲನೆ ಯಶಸ್ವಿಯಾಗಬೇಕು ಅಂದ್ರೆ ಮನೆ ಮನೆಗೆ ತಲುಪಿ ಲಸಿಕೆ ನೀಡಬೇಕಾಗಿದೆ. ಆದ್ರೆ, ತಾಲಿಬಾನ್ ಆಡಳಿತದ ಆದೇಶದಿಂದ ದೇಶವು ಅಪಾಯಕ್ಕೆ ಸಿಲುಕಲಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ : ಸೆಪ್ಟಂಬರ್ 29 ರಿಂದ ಆಕಾಶದಲ್ಲಿ ಎರಡು ಚಂದ್ರ ಗೋಚರ..! ಏನಿದು ವಿಸ್ಮಯ..?

    ವಿಶ್ವಸಂಸ್ಥೆಯ ಪ್ರಕಾರ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವು ವಿಶ್ವದಲ್ಲಿ ಪೋಲಿಯೋ ಉಳಿಸಿಕೊಂಡಿರುವ ಎರಡು ದೇಶಗಳಾಗಿವೆ. ಪೋಲಿಯೋ ಮುಕ್ತ ಜಗತ್ತಿಗಾಗಿ ನಿರಂತರ ಪ್ರಯತ್ನಗಳ ಹೊರತಾಗಿಯೂ ಈ ಎರಡು ದೇಶಗಳಲ್ಲಿ ಇದು ಅಸಾಧ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪೋಲಿಯೋ ಪ್ರಕರಣ ಈ ಎರಡು ದೇಶದಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

    Continue Reading

    LATEST NEWS

    ಕನ್ನಡಿಗರನ್ನು ಕೆಣಕಿದ ಸುಗಂಧಾ ಶರ್ಮ ಕೆಲಸದಿಂದ ವಜಾ..!

    Published

    on

    ಬೆಂಗಳೂರು/ಮಂಗಳೂರು: ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾ ರೀಲ್ಸ್ ಮೂಲಕ ದುರಹಂಕಾರ ಪ್ರದರ್ಶಿಸಿದ ಉತ್ತರ ಭಾರತ ಮೂಲದ ರೀಲ್ಸ್ ರಾಣಿ ಸುಗಂಧಾ ಶರ್ಮಾಗೆ ಇದೀಗ ಕನ್ನಡಿಗರ ತಾಕತ್ತು ಅರ್ಥವಾಗಿದೆ. ಆಕೆ ಮಾಡುವ ಕಂಪನಿಯೇ ಆಕೆಯ ನಡತೆಯನ್ನು ಗಮನಿಸಿ ಕೆಲಸದಿಂದ ಕಿತ್ತು ಹಾಕಿದೆ.

    ಕೆಲ ದಿನಗಳ ಹಿಂದೆ ರೀಲ್ಸ್ ಮಾಡಿದ್ದ ಸುಗಂಧಾ ಶರ್ಮಾ ಉತ್ತರ ಭಾರತೀಯರು ಬೆಂಗಳೂರನ್ನು ಬಿಟ್ಟು ಹೊರಟರೆ ಬೆಂಗಳೂರು ಖಾಲಿ ಖಾಲಿಯಾಗುತ್ತೆ ಎಂದು ಕನ್ನಡಿಗರನ್ನು ಕೆಣಕಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕನ್ನಡಿಗರು ಶರ್ಮಾಗೆ ಬೆಂಗಳೂರನ್ನು ತೊರೆಯುವಂತೆ ಓಪನ್ ಆಗಿಯೇ ಚಾಲೆಂಜ್ ಹಾಕಿದ್ದರು.

    ಶರ್ಮಾ ರೀಲ್ಸ್‌ನಲ್ಲಿ ನೀವು ಹೊರಟು ಹೋಗಿ ಎನ್ನುತ್ತಿದ್ದೀರಾ. ನಿಜವಾಗಿಯು ನಾವೆಲ್ಲರೂ ಬೆಂಗಳೂರು ತೊರೆದರೆ ನಿಮ್ಮ ನಗರ ಖಾಲಿಯಾಗುತ್ತದೆ. ನಿಮ್ಮ ಪಿಜಿಗಳು ಖಾಲಿ ಆಗುತ್ತವೆ. ನಿಮಗೆ ಹಣ ಸಂಪಾದನೆಯಾಗುವುದಿಲ್ಲ. ಕೋರಮಂಗಲದ ಎಲ್ಲ ಕ್ಲಬ್‌ಗಳು ಖಾಲಿಯಾಗುತ್ತವೆ. ಪಂಜಾಬಿ ಸಂಗೀತಕ್ಕೆ ಕುಣಿಯುವ ಚೆಂದದ ಹುಡುಗಿಯರು ಕಾಣಿಸುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ತೊರೆಯಬೇಕು ಎನ್ನುವ ನಿಮ್ಮ ಆಸೆ ನಿಜವಾದರೆ ಬೆಂಗಳೂರಿನ ಕಳೆಯೇ ಹೋಗಿಬಿಡುತ್ತದೆ ಎಂದು ರೀಲ್ಸ್‌ನಲ್ಲಿ ಹೇಳಿದ್ದರು.

    ಕೆಲವೇ ಗಂಟೆಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಸುಗಂಧಾ ವಿರುದ್ಧ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಕಿಡಿ ಕಾರಿದ್ದರು. ಭಾಷೆ ನೆಪದಲ್ಲಿ ಜನರ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿರುವ ಈಕೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೂ ಟ್ಯಾಗ್ ಮಾಡಿದ್ದರು.

    ಹುಟ್ಟುಹಬ್ಬಕ್ಕೆ 2 ದಿನ ಕಡ್ಡಾಯ ರಜೆ ಘೋಷಣೆ ಮಾಡಿದ ಕಂಪೆನಿ..!

    ಈಕೆಯ ವೀಡಿಯೋ ನೋಡಿ ಕೆರಳಿದ್ದ ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಯುವತಿ ಕೆಲಸ ಮಾಡುವ ಕಂಪನಿಗೆ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಕಂಪನಿಯೇ ಕೆಲಸದಿಂದ ತೆಗೆದು ಹಾಕಿರೋದು ಬಯಲಿಗೆ ಬಂದಿದೆ. ಸದ್ಯ ಮತ್ತೊಂದು ಖಾಸಗಿ ಕಂಪನಿಯಲ್ಲಿ ಆಕೆ ಕೆಲಸ ಮಾಡುತ್ತಿದ್ದಾರೆ ಅನ್ನೋ ವಿಷ್ಯ ಗೊತ್ತಾಗಿದೆ. ಆ ಕಂಪನಿಗೂ ಭೇಟಿ ನೀಡಿ ಕೆಲಸದಿಂದ ತೆಗದುಹಾಕುವಂತೆ ಮನವಿ ಮಾಡಲಿದ್ದೇವೆ ಎಂದು ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಎಚ್ಚರಿಸಿದ್ದಾರೆ.

    Continue Reading

    LATEST NEWS

    Trending