Connect with us

    FILM

    ಬಿಗ್ ಬಾಸ್ ಕನ್ನಡ ಸೀಸನ್ -11 ರ ಸ್ಪರ್ಧಿಗಳ ಹೆಸರು ರಿವೀಲ್..?

    Published

    on

    ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -11 ಇದೇ ಸೆ.29ರಿಂದ ಬಿಗ್ ಬಾಸ್ ಗ್ರಾಂಡ್ ಆರಂಭಗೊಳ್ಳಲಿದೆ. ಸಾಕಷ್ಟು ಕುತೂಹಲ ಹುಟ್ಟಿಸಿದ್ದ ನಿರೂಪಕ ಯಾರೆನ್ನುವ ಪ್ರಶ್ನೆಗೆ ಪ್ರೋಮೊ ಬಿಟ್ಟು ಆಯೋಜಕರು ಸಸ್ಪೆನ್ಸ್ ರಿವೀಲ್ ಮಾಡಿದ್ದಾರೆ. ನಟ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ನಿರೂಪಣೆ ಮಾಡಲಿದ್ದಾರೆ. ಕಾರ್ಯಕ್ರಮದ ಪ್ರೋಮೊ ರಿಲೀಸ್ ಆದ ಬೆನ್ನಲ್ಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

    ಪ್ರತಿ ಬಾರಿಯಂತೆ ಈ ಬಾರಿಯೂ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ನಾನಾ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳೂ ಈ ಪಟ್ಟಿಯಲ್ಲಿದ್ದಾರೆ.

    ನಟಿ ಪ್ರೇಮಾ:

    ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಮ್ಮೂರ ಮಂದಾರ ಹೂವೆ, “ಚಂದ್ರಮುಖಿ ಪ್ರಾಣಸಖಿ’, ‘ಉಪೇಂದ್ರ’ ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿ, ತೆಲುಗು, ಮಲಯಾಳಂನಲ್ಲೂ ಮಿಂಚಿದ್ದ ನಟಿ ಪ್ರೇಮಾ ಇತ್ತೀಚಿನ ವರ್ಷದಲ್ಲಿ ನಟನೆ ಬಿಟ್ಟು ಕಿರುತೆರೆ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

    ಹುಲಿ ಕಾರ್ತಿಕ್:

    “ಗಿಚ್ಚಿ ಗಿಲಿಗಿಲಿ-3′ ಮೂಲಕ ಪ್ರೇಕ್ಷಕರ ಮನಗೆದ್ದು, ಕಾರ್ಯಕ್ರಮ ವಿಜೇತರಾಗಿರುವ ಹುಲಿ ಕಾರ್ತಿಕ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

    ಗೌರವ್ ಶೆಟ್ಟಿ:

    ಅಮೃತಾಂಜನ್ ಸೇರಿದಂತೆ ಹತ್ತಾರು ಶಾರ್ಟ್ ಮೂವೀಸ್ ಹಾಗೂ ಕಾಮಿಡಿ ವಿಡಿಯೋಗಳಲ್ಲಿ ಕಾಣಿಸಿಕೊಂಡು, ಯೂಟ್ಯೂಬ್‌ನಲ್ಲಿ ಮಿಂಚಿರುವ ಗೌರವ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ.

    ಮಾನಸ ಸಂತು:

    ಬಿಗ್ ಬಾಸ್ ಸೀಸನ್ 10ನಲ್ಲಿ ಸ್ಪರ್ಧಿಯಾಗಿದ್ದ ಕಾಮಿಡಿಯನ್ ತುಕಾಲಿ ಸಂತು ಅವರ ಪತ್ನಿ ಮಾನಸ ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಿರುವ ಹೆಸರು ತನ್ನ ಹಾಸ್ಯ ಪುಜ್ಞೆಯಿಂದ ಗಮನ ಸೆಳೆದಿರುವ ಮಾನಸ, ಕಿರುತೆರೆ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

    ಹರೀಶ್ ನಾಗರಾಜ್:

    ಕಳೆದ ಅನೇಕ ವರ್ಷದಿಂದ ನ್ಯೂಸ್ ಆ್ಯಂಕರ್ ಆಗಿ ಗುರುತಿಸಿಕೊಂಡಿರುವ ಹರೀಶ್ ನಾಗರಾಜ್ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಆಗುತ್ತಾರೆ ಎಂದು ಹೇಳಲಾಗುತ್ತಿದೆ.

    ಐಶ್ವರ್ಯಾ ರಂಗರಾಜನ್:

    ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗಾಯಕಿ ಐಶ್ವರ್ಯಾ ರಂಗರಾಜನ್ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುತ್ತಾರೆ ಎನ್ನಲಾಗುತ್ತಿದೆ.

    ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ :

    ಕನ್ನಡ ಚಿತ್ರರಂಗದಲ್ಲಿ ನಟಿಯರಾಗಿ ಗುರುತಿಸಿಕೊಂಡಿರುವ ಕರಾವಳಿಯ ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಮೂಲ್ಯ ಭಾರದ್ವಾಜ್:

    ಕಿರುತೆರೆ ನಟಿಯಾಗಿ ಗುರುತಿಸಿಕೊಂಡು, ‘ದಾಸ ಪುರಂದರ’ ಹಾಗೂ ‘ಬೃಂದಾವನ’ ಧಾರಾವಾಹಿಗಳಲ್ಲಿ ನಟಿಸಿ ಮನೆ-ಮನದ ಪ್ರೀತಿ ಪ್ರೋತ್ಸಾಹಗಳಿಸಿರುವ ನಟಿ ಅಮೂಲ್ಯ ಭಾರದ್ವಾಜ್ ಈ ಬಾರಿ ದೊಡ್ಮನೇ ಆಟಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರ ಎನ್ನಲಾಗುತ್ತಿದೆ.

    ಭವ್ಯಾ ಗೌಡ:

    ಟಿಕ್‌ಟಾಕ್‌ನಲ್ಲಿ ಖ್ಯಾತಿಗಳಿಸಿ, ಕಿರುತೆರೆಯ ‘ಗೀತಾ’ ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದಿರುವ ನಟಿ ಭವ್ಯಾ ಗೌಡ ಅವರ ಹೆಸರು ಕೂಡ ಬಿಗ್ ಬಾಸ್ ಸ್ಪರ್ಧಿಯ ಲಿಸ್ಟ್‌ನಲ್ಲಿ ಬರುತ್ತಿದೆ.

    ದೀಪಕ್ ಗೌಡ:

    “ನಮ್ಮನೆ ಯುವರಾಣಿ’ ಸೀರಿಯಲ್‌ನಲ್ಲಿ ‘ಅನಿಕೇತ್’ ಆಗಿ ಖ್ಯಾತಿ ಪಡೆದ ದೀಪಕ್ ಗೌಡ ಬಿಗ್‌ಬಾಸ್ ಮನೆಗೆ ಎಂಟ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಕ್ಷಯ್ ನಾಯಕ್:

    ‘ಒಲವಿನ ನಿಲ್ದಾಣ’ ಸೀರಿಯಲ್‌ನಲ್ಲಿ ಸಿದ್ಧಾಂತ್ ಪಾತ್ರದ ಮೂಲಕ ಗಮನ ಸೆಳೆದು, ‘ಕಸ್ತೂರಿ ನಿವಾಸ’ದಲ್ಲೂ ಮಿಂಚಿರುವ ಅಕ್ಷಯ್ ನಾಯಕ್ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

    ಲೇಖಿ ಗೋಸ್ವಾಮಿ:

    ಲೇಖಿ ರೈಡರ್’ ಎಂಬ ಯೂಟ್ಯೂಬ್ ಚಾನಲ್‌ನಿಂದ ಖ್ಯಾತಿಗಳಿಸಿರುವ ಲೇಖಿ ಗೋಸ್ವಾಮಿ ಈ ಬಾರಿ ‘ಬಿಗ್ ಬಾಸ್’ ಸ್ಪರ್ಧಿಯಾಗಿ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ.

    ಇತರೆ ಹೆಸರುಗಳು:

    ಇವರುಗಳಲ್ಲದೇ ರೀಲ್ಸ್ ರೇಷ್ಮಾ ಚಂದ್ರಪ್ರಭ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ನಟಿ ಗೌತಮಿ ಜಾಧವ್, ಶರತ್ ಕುಮಾರ್ ಹೆಸರುಗಳೂ ಇವೆ.

    BIG BOSS

    ಕನ್ನಡ ಮರೆತ ಸ್ಪರ್ಧಿಗಳು.. ಮೌನಕ್ಕೆ ಶರಣಾದ್ರ ಬಿಗ್‌ಬಾಸ್ ?

    Published

    on

    ‘ಬಿಗ್ ಬಾಸ್’ನಲ್ಲಿ ಹಲವು ಮೂಲ ನಿಯಮಗಳು ಇವೆ. ಅದನ್ನು ಮೀರಿ ಯಾರು ನಡೆದುಕೊಳ್ಳುವಂತಿಲ್ಲ. ನಿದ್ದೆ ಮಾಡಿದರೆ ಅದು ನಿಯಮ ಬ್ರೇಕ್ ಮಾಡಿದಂತೆಯೇ. ಆಗ ಬಿಗ್ ಬಾಸ್ ಎಚ್ಚರಿಸುತ್ತಾರೆ. ಅದೇ ರೀತಿ ಮತ್ತೊಂದು ನಿಯಮ ಇದೆ. ಆದರೆ, ಈ ನಿಯಮವನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಬಿಗ್ ಬಾಸ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಿಲ್ಲವೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

    ಬಿಗ್ ಬಾಸ್ ಮನೆಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಆಗುತ್ತಿದೆ ಎಂದು ವಾಹಿನಿಯವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಇಂಗ್ಲಿಷ್ ಬಳಕೆ ಮಾಡದೆ ಕೇವಲ ಕನ್ನಡ ಬಳಕೆ ಮಾಡಬೇಕು ಎನ್ನುವ ನಿಯಮ ಇದೆ. ಈ ಮೊದಲಿನ ಸೀಸನ್​ಗಳಲ್ಲಿ ಇಂಗ್ಲಿಷ್ ಮಾತನಾಡಿದಾಗ ಬಿಗ್ ಬಾಸ್ ಎಚ್ಚರಿಕೆ ನೀಡುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಎಷ್ಟೇ ಇಂಗ್ಲಿಷ್ ಬಳಕೆ ಆದರೂ ಬಿಗ್ ಬಾಸ್ ಮಾತನಾಡುತ್ತಿಲ್ಲ, ಎಚ್ಚರಿಕೆಯನ್ನೂ ನೀಡುತ್ತಿಲ್ಲ. ಬಿಗ್ ಬಾಸ್ ಕಡೆಯಿಂದ ಮೌನವೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

    ಲಾಯರ್ ಜಗದೀಶ್ ಅವರು ಹೆಚ್ಚೆಚ್ಚು ಇಂಗ್ಲಿಷ್ ಬಳಕೆ ಮಾಡುತ್ತಿದ್ದಾರೆ. ಅವರು 10 ಸಾಲುಗಳನ್ನು ಹೇಳಿದರೆ ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನದ್ದು ಇಂಗ್ಲಿಷ್ ಇರುತ್ತದೆ. ಇದು ವೀಕ್ಷಕರಿಗೆ ಸಾಕಷ್ಟು ಕಿರಿಕಿರಿ ಎನಿಸುತ್ತಿದೆ. ಅವರಿಗೆ ಕನ್ನಡ ಮಾತನಾಡೋಕೆ ಬರುತ್ತದೆ. ಹೀಗಿರುವಾಗ ಕನ್ನಡದಲ್ಲಿ ಮಾತನಾಡಲು ಸಮಸ್ಯೆ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

    ಕೇವಲ ಜಗದೀಶ್ ಮಾತ್ರವಲ್ಲ ಐಶ್ವರ್ಯಾ ಸೇರಿ ಮೊದಲಾದವರು ಇಂಗ್ಲಿಷ್ ಪದ ಬಳಕೆ ಮಾಡುತ್ತಿದ್ದಾರೆ. ಮೋಕ್ಷಿತಾ, ಚೈತ್ರಾ ಕುಂದಾಪುರ ಸೇರಿದಂತೆ ಕೆಲವೇ ಕೆಲವರು ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳುವ ಜಗದೀಶ್ ಅವರೇ ಇಂಗ್ಲಿಷ್​ನಲ್ಲಿ ಮಾತನಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

    Continue Reading

    BIG BOSS

    Bigg Boss: ಕ್ರೇನ್ ಮೂಲಕ ನುಗ್ಗಿದ ಮುಸುಕುಧಾರಿಗಳು.. ಬಿಗ್​​ಬಾಸ್​ ಮನೆಯ ವಸ್ತುಗಳೆಲ್ಲ ಪೀಸ್​ ಪೀಸ್…

    Published

    on

    ಆಯುಧ ಪೂಜೆಯ ಸಡಗರದಲ್ಲಿರುವ ಬಿಗ್​ಬಾಸ್​​ ಅಭಿಮಾನಿಗಳಿಗೆ ಇಂದು ರಾತ್ರಿ ಸಖತ್ ಥ್ರಿಲ್ಲಿಂಗ್ ಇದೆ. ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಎಪಿಸೋಡ್​ನ ಪ್ರೊಮೋ ಒಂದು ರಿಲೀಸ್ ಆಗಿದ್ದು, ಅಭಿಮಾನಿಗಳ ಎಕ್ಸೈಟ್​ಮೆಂಟ್​ ಇನ್ನಷ್ಟು ಹೆಚ್ಚಿಸಿದೆ.

    ಬಿಗ್​​ಬಾಸ್ ಮನೆಗೆ ಅಪರಿಚಿತರ ಎಂಟ್ರಿಯಾಗಿದೆ. ಆರಂಭದಲ್ಲಿ ದೊಡ್ಡ ಸೈರನ್ ಆಗುತ್ತದೆ. ಕೂಡಲೇ ಬಿಗ್​ಬಾಸ್​ ಸ್ಪರ್ಧಿಗಳು ಗಾಬರಿಯಾಗಿ ಕೂಗಿಕೊಂಡಿದ್ದಾರೆ. ಎಲ್ಲಿ ಏನಾಗುತ್ತಿದೆ ಅನ್ನುವಷ್ಟರಲ್ಲಿ ಸೈರನ್ ಜೋರಾಗಿದೆ. ಕೊನೆಗೆ ಗಾರ್ಡನ್ ಏರಿಯಾಗೆ ಕ್ರೇನ್ ಮೂಲಕ ಮುಸುಕುಧಾರಿಗಳು ಎಂಟ್ರಿಯಾಗಿದ್ದಾರೆ. ಇದನ್ನು ನೋಡಿದ ಸ್ಪರ್ಧಿಗಳು ಏನಾಯ್ತು? ಯಾರವರು ಅಂದ್ಕೊಂಡು ಗಾಬರಿಯಾಗಿದ್ದಾರೆ.

    ಕಪ್ಪು ಬಣ್ಣದ ಬಟ್ಟೆ ತೊಟ್ಟ ಉಗ್ರಗಾಮಿಗಳಂತೆ ಮುಸುಕು ಧರಿಸಿ ಬಂದ 10 ಜನರ ತಂಡ, ಬಿಗ್​ಬಾಸ್​ ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಕುಟ್ಟಿ ಪುಡಿಮಾಡಿದ್ದಾರೆ. ಈ ಪ್ರೋಮೋ ನೊಡಿದ ಅಭಿಮಾನಿಗಳು ಸ್ವರ್ಗ-ನರಕ ಇಂದಿಗೆ ಕೊನೆಗೊಂಡಿದೆ ಎಂದು ಮಾತನಾಡಿಕೊಳ್ತಿದ್ದಾರೆ. ಸ್ವರ್ಗ-ನರಕ ಕಾನ್ಸೆಪ್ಟ್​ಗೆ ಏನಾಯ್ತು? ಎರಡೇ ವಾರಕ್ಕೆ ನಿಂತು ಹೋಯ್ತಾ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಇಂದು ನಡೆಯುವ ಎಪಿಸೋಡ್ ತುಂಬಾ ಕುತೂಹಲಕಾರಿಯಾಗಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.

    Continue Reading

    BIG BOSS

    ಬಿಗ್‌ಬಾಸ್ ಮನೆಯಲ್ಲಿ ಎಮರ್ಜೆನ್ಸಿ ಸೈರನ್; ಭಾರೀ ಟ್ವಿಸ್ಟ್​.. ಬೆಚ್ಚಿಬಿದ್ದ ಸ್ಪರ್ಧಿಗಳು..!

    Published

    on

    ಬಿಗ್​ಬಾಸ್ ಮನೆಯಲ್ಲಿ ಎಮರ್ಜನ್ಸಿ ಸೈರನ್ ಮೊಳಗಿದೆ. ಒಂದು ಕ್ಷಣಕ್ಕೆ ಎಲ್ಲಾ ಸ್ಪರ್ಧಿಗಳು ಬೆಚ್ಚಿಬಿದ್ದಿದ್ದು, ಮನೆಯಲ್ಲಿ ಏನಾಗ್ತಿದೆ ಅನ್ನೋ ಆತಂಕದಿಂದ ಕಿರುಚಾಡಿದ್ದಾರೆ! ಹೌದು, ಇಂದು ಬೆಳ್ಳಂಬೆಳಗ್ಗೆ ಕಲರ್ಸ್‌ ಕನ್ನಡ ಪೇಜ್‌ನಲ್ಲಿ ಪ್ರೊಮೋ ಮೂಲಕ ಬಿಗ್​ಬಾಸ್ ವೀಕ್ಷಕರ ಕುತೂಹಲವನ್ನು ಹೆಚ್ಚಿದ್ದಾರೆ.

    ಪ್ರೊಮೋದಲ್ಲಿ ಏನಿದೆ..?

    ಬಿಗ್​​ಬಾಸ್​ ಮನೆಯಲ್ಲಿ ಸೈರನ್ ಆಗಿದೆ. ಇದರಿಂದ ಸ್ಪರ್ಧಿಗಳು ಗಾಬರಿಯಾಗಿ ಓಡಿ ಬಂದು ಒಟ್ಟಿಗೆ ನಿಂತಿದ್ದಾರೆ. ‘ಏನೋ ಎಂಟ್ರಿ ಆಗ್ತಿದೆ. ಕ್ರೇನ್​ನಿಂದ ಏನೋ ತೆಗಿತಾ ಇದ್ದಾರೆ, ಏಯ್ ಯಾರು? ಏನಿದು’ ಅಂತಾ ಆತಂಕದಿಂದ ಮಾತನಾಡಿಕೊಂಡಿದ್ದಾರೆ. ಅಷ್ಟರಲ್ಲೇ ಬಿಗ್​ಬಾಸ್​ ಮನೆಗೆ ಎಂಟ್ರಿಯಾಗಿರುವ ಮುಸುಕುಧಾರಿಗಳು ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಹಾನಿ ಮಾಡಿದ್ದಾರೆ. ನಂತರ ಸ್ವರ್ಗ-ನರಕ ಎಂದು ವಿಭಾಗ ಮಾಡಿದ್ದ ಗೇಟ್​ಗಳನ್ನು ಬೇಧಿಸಿದ್ದಾರೆ. ನಂತರ ಬಿಗ್​ಬಾಸ್​ನ ಧ್ವನಿ ಮೊಳಗಿದೆ. 11ನೇ ವೇದಿಕೆಯಲ್ಲಿ ನೀವೆಲ್ಲರೂ ಎರಡು ವಾರ ಜೀವಿಸಿದ್ದೀರಿ. ಇಲ್ಲಿನ ಪ್ರತಿ ಕ್ಷಣವನ್ನೂ ಅನುಭವಿಸಿದ್ದೀರಿ ಎಂಬ ಧ್ವನಿ ಬಂದು ಹೋಗಿದೆ.

    ಈ ಪ್ರೋಮೋ ನೊಡಿದ ಅಭಿಮಾನಿಗಳು ಸ್ವರ್ಗ-ನರಕ ಇಂದಿಗೆ ಕೊನೆಗೊಂಡಿದೆ ಎಂದು ಮಾತನಾಡಿಕೊಳ್ತಿದ್ದಾರೆ. ಸ್ವರ್ಗ-ನರಕ ಕಾನ್ಸೆಪ್ಟ್​ಗೆ ಏನಾಯ್ತು? ಎರಡೇ ವಾರಕ್ಕೆ ನಿಂತು ಹೋಯ್ತಾ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಇಂದು ನಡೆಯುವ ಎಪಿಸೋಡ್ ತುಂಬಾ ಕುತೂಹಲಕಾರಿಯಾಗಿದ್ದು, ವೀಕ್ಷಕರು ಎಕ್ಸೈಟ್ ಆಗಿದ್ದಾರೆ.

    Continue Reading

    LATEST NEWS

    Trending